‘ಅನ್ ಬಿಲೋವೆಬಲ್ ಲವ್ ಫಾರ್ ಟೆನಿಸ್ ಬಾಲ್ ಕ್ರಿಕೆಟ್ ಕ್ರೌಡ್’ ಎಂದ ಮಾಜಿ ರಣಜಿ ಆಟಗಾರ ಸೋಮಶೇಖರ ಶಿರಗುಪ್ಪಿ
ಧಾರವಾಡ: ಹನುಮಂತ ಮಂಗ್ಲಿ 37(17ಎ, 3×4), ಜಗದೀಶ 18(8ಎ, 2×4, 1×6) ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾನುವಾರ ನಡೆದ ಧಾರವಾಡ ಪ್ರೀಮಿಯರ್ ಲೀಗ್ (ಡಿಪಿಎಲ್)ಸಿಸನ್ 5ರ ಫೈನಲ್ ಪಂದ್ಯದಲ್ಲಿ ‘ಫ್ರೆಂಡ್ಸ್ ಫಾರ್ಎವರ್’ ತಂಡ ಜೈ ಬೀಮ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜೈ ಬೀಮ್ ತಂಡ 8 ಒವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 79ರನ್ ಗಳಿಸಿತು. ತಂಡ ಪರ ಯಲ್ಲಪ್ಪ 50(29ಎ, 6 x4, 4×6) ರನ್ ಗಳಿಸಿದರು. ಈ ಮೊತ್ತ ಬೆನ್ನು ಹತ್ತಿದ ‘ಫ್ರೆಂಡ್ಸ್ ಫಾರ್ಎವರ್’ ತಂಡ 7.3 ಒವರನಲ್ಲಿ 4 ವಿಕೆಟ್ ಕಳೆದುಕೊಂಡು 80ರನ್ಗಳಿಸಿ 4ವಿಕೆಟ್ನಿಂದ ಜಯಗಳಿಸಿತು.
ಟೂರ್ನಿಯಲ್ಲಿ ಇಂಡಿಯನ್ ಸೋಲಜರ್ ತಂಡದ ಐಕಾನ್ ಪ್ಲೇಯರ್ ಶಿವು ಮಾದರ 306ರನ್ ಗಳಿಸಿ ಬೆಸ್ಟ್ ಬ್ಯಾಟ್ಸಮನ್, 11ಕ್ಯಾಚ್ ಹಿಡಿದು ಬೆಸ್ಟ್ ಕ್ಷೇತ್ರ ರಕ್ಷಣೆ, ವ್ಯಾಲುವೆಬಲ್ ಪ್ಲೇಯರ್(41.5), ಹೆಚ್ಚು ಸಿಕ್ಸರ್ (26) ಹೊಡೆದ ಇವರಿಗೆ ಸೈಕಲ್, ಟಿವಿ ಸೇರಿದಂತೆ ನಗದು ಬಹುಮಾನ ಟ್ರೋಫಿ ತಮ್ಮದಾಗಿಸಿಕೊಂಡರು.
ಬಸೀರ್ ಸೌದಾಗರ್ 14 ವಿಕೆಟ್ ಪಡೆದುಕೊಂಡು ಬೆಸ್ಟ್ ಬೌಲರ್ ಆದ ಇವರು ಸೈಕಲ್ ಹಾಗೂ ಟ್ರೋಫಿಗೆ ಮುತ್ತಿಕ್ಕಿದರು. ಸೆಮಿಫೈನಲ್ ಪಂದ್ಯದಲ್ಲಿ ಸಂತೋಷ ಬಂಡಿ ಪಂದ್ಯ ಪುರುಷ ಹಾಗೂ ಗೇಮ್ ಚೆಂಜರ್ ಆಗಿ ಸಂದೀಪ ಪಾಟೀಲ, ಬೆಸ್ಟ್ ಕ್ಯಾಚರ್ ಹರ್ಷದ ಡುಮಕಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಹನಮಂತ ಮಾಂಗ್ಲಿ ಪಂದ್ಯ ಪುರುಷ, ಗೇಮ್ ಚೇಂಜರ್ರಾಗಿ ಜಗದೀಶ ಪ್ರಶಸ್ತಿ ಪಡೆದುಕೊಂಡರು. ಹೆಚ್ಚು ಬೌಂಡರಿ(34) ಬಾರಿಸಿದ ಸಂತೋಷ ಬಂಡಿ, ಎಮರಜಂಕ್ ಪ್ಲೇಯರ್ಯಾಗಿ ಡ್ಯಾನಿ ಪ್ರಶಸ್ತಿ ಪಡೆದುಕೊಂಡರು. ಹೆಬ್ಬಳ್ಳಿ ಗ್ರಾಮದ ಶಿವು ಕುಂಬಾರ ಪ್ರೇಕ್ಷಕರಿಗೆ ಇಟ್ಟಿದ್ದ ಲಕ್ಕಿ ಡ್ರಾದಲ್ಲಿ 15 ಸಾವಿರ ರೂ. ಮೌಲ್ಯದ ಸೈಕಲ್ ಪಡೆದುಕೊಂಡರು. ಮಾಜಿ ರಣಜಿ ಆಟಗಾರ ಸೋಮಶೇಖರ ಶಿರಗುಪ್ಪಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ನಂತರ ಮಾತನಾಡಿ, ತಾವು ಕೂಡಾ ತಮ್ಮ ಕ್ರಿಕೆಟ್ ಕರಿಯರ್ ಇದೇ ಕವಿವಿ ಮೈದಾನದಿಂದ ಆರಂಭ ಮಾಡಿದ್ದೇ. ನಾನು ಕೂಡಾ ನಿಮ್ಮ ಹಾಗೆಯೇ ಟೆನಿಸ್ ಬಾಲ್ ಆಟ ಆಡಿದ್ದೇನೆ. ನಂತರ ನಾನು ಬೆಂಗಳೂರಿಗೆ ತೆರಳಿ ಸುಮಾರು ಟೂರ್ನಿ ಆಡಿದ್ದೇನೆ. ಆದರೆ ಇಲ್ಲಿ ಇಷ್ಟು ಪ್ರೇಕ್ಷಕರನ್ನು ನೋಡಿ ನನಗೆ ತುಂಬಾ ಸಂತೋಷ ಆಯಿತು. ಆಯೋಜಕರು ಇಷ್ಟು ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರಾಯೋಜಕರಾದ ಈರಣ್ಣ ಮಲ್ಲಿಗವಾಡ ಕುಟುಂಬ ಮೊದಲ ಬಹುಮಾನ 1.50ಲಕ್ಷ ನಗದು ಹಾಗೂ ಸಮಿ ಮತ್ತು ಲಕನ್ ದ್ವಿತೀಯ ಬಹುಮಾನ 1ಲಕ್ಷ ನಗದು ನೀಡಿದರು. ಪ್ರಸಾದ್ ಶೇಠ (ಪಿಕೆಎಸ್ ಪೌಂಡೇಶನ್) ಸರಣಿ ಶ್ರೇಷ್ಠ, ಕಿರಣ್ ಪಾಟೀಲ್ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್, ಮಹೇಶ್ ಬೆಣ್ಣಿ ಅತ್ಯುತ್ತಮ ಬೌಲರ್, ಹ್ಯಾರಿಸ್ ಪಟಾನ್ ಅತ್ಯುತ್ತಮ ಕ್ಯಾಚ್, ಪ್ರದೀಪ್ ಸಿಂಗ್ ಅತ್ಯುತ್ತಮ ವಿಕೆಟ್ ಕೀಪರ್, ಶಿವು ಮೇಲಿನಮನಿ ಉದಯೋನ್ಮುಖ ಆಟಗಾರ, ಹನ್ನಿಸ್ ಜಮಾದಾರ್ ಪಂದ್ಯಶ್ರೇಷ್ಠ ಪ್ರಶಸ್ತಿ,
ಸಂತೋಷ್ ಮೇಟಿ 10 ಪಂದ್ಯಶ್ರೇಷ್ಠ ಪ್ರಶಸ್ತಿ ಟಿ ಶರ್ಟ್, ಮೆಹಬೂಬ್ ಅಲಿ ಗೇಮ್ ಚೇಂಜರ್ ಟ್ರೋಪಿ, ಬ್ಲೂ ಡೈಮಂಡ್ಸ್ ಟೀಮ್ ಮ್ಯಾನ್ ಆಫ್ ದಿ ಸೀರೀಸ್”ಟಿವಿ”, ಬಸು ಸಲಿಂಕೋಪಾ ಅತ್ಯುತ್ತಮ ಬ್ಯಾಟ್ಸ್ಮನ್ ಸೈಕಲ್, ಹಿರೇಮನಿ ಸಹೋದರರು ಅತ್ಯುತ್ತಮ ಬೌಲರ್ಗೆ ಸೈಕಲ್ ನೀಡಿದರು.
https://youtube.com/shorts/p8PL1OJJ6Kc?feature=share
ವಿಕ್ಷಕ ವಿವರಣೆಕಾರ ಯುವರಾಜ ಶೆಟ್ಟಿ ಸಾವಿರಾರು ಜನರ ಗಮನ ಸೆಳೆದರು. ಶಾಸಕ ಅರವಿಂದ ಬೆಲ್ಲದ, ದೀಪಕ್ ಚಿಂಚೂರಿ, ಬಸವರಾಜ ಕೊರವರ, ಉದ್ಯಮಿ ಗಿರೀಶ್ ಶೆಟ್ಟಿ, ಪಾಲಿಕೆ ಸದಸ್ಯ ಶಂಬುಗೌಡ ಸಾಲಿಮನಿ, ರಾಕೇಶ್ ನಾಜರೆ, ಸುಜನ್ ಶೆಟ್ಟಿ, ಚಂದ್ರಶೇಖರ ಬೈರಪ್ಪನವರ, ಕಲ್ಲಪ್ಪ ಶಿಗಿಹಳ್ಳಿ, ಆಯೋಜಕ ವರುಣ ಸಾಂಬ್ರಾಣಿ, ಶಿಗ್ಲಪ್ಪ ಹೆಗಡೆ, ಸಾಗರ, ಮುತ್ತು, ಸಂತೋಷ, ಅರ್ಜುನ, ಮಹೇಶ ಬೆಣ್ಣಿ, ಶ್ರೀಕಂಠ ಶೇಟ್, ಅಶೋಕ ಶೆಟ್ಟಿ, ಮಂಜುನಾಥ, ಶಿವರಾಜ ಶೆಟ್ಟಿ ಸೇರಿದಂತೆ ಡಿಪಿಎಲ್ ಸದಸ್ಯರು ಹಾಗೂ ತಂಡದ ಮಾಲೀಕರು, ಆಟಗಾರರು ಅಲ್ಲದೇ ಸಾವಿರಾರು ಜನ ಪ್ರೇಕ್ಷಕರು ಇದ್ದರು.