ಹುಬ್ಬಳ್ಳಿ-ಧಾರವಾಡ ಸುದ್ದಿ
ಪತ್ನಿಯ ಮೂಗು ಕತ್ತರಿಸಿದ ಪತಿ!  ಕುಡಿದ ಮತ್ತಿನಲ್ಲಿ ದುಷ್ಕೃತ್ಯ– ಅತ್ತೆ ಕೊಲೆಗೈಯ್ಯಲೂ ಯತ್ನ

ಪತ್ನಿಯ ಮೂಗು ಕತ್ತರಿಸಿದ ಪತಿ! ಕುಡಿದ ಮತ್ತಿನಲ್ಲಿ ದುಷ್ಕೃತ್ಯ– ಅತ್ತೆ ಕೊಲೆಗೈಯ್ಯಲೂ ಯತ್ನ

ಧಾರವಾಡ: ಮದ್ಯ ಸೇವಿಸಿದ ಮತ್ತಿನಲ್ಲಿ ಪತಿ ಮಹಾಶಯನೊಬ್ಬ ತನ್ನ ಹೆಂಡತಿಯ ಮೂಗು ಕತ್ತರಿಸಿದ್ದು ಅಲ್ಲದೆ, ಅತ್ತೆಯ ಕತ್ತು ಹಿಸುಕಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಉಮೇಶ ಗಂಡಗುದರಿ ಎಂಬುವನೇ ಈ ಕೃತ್ಯ ಎಸಗಿದ ಪತಿ ಆಗಿದ್ದಾನೆ.
ಈತನ ಹೆಂಡತಿ ಗೀತಾ ತನ್ನ ತಾಯಿ ನೀಲವ್ವ ಜೊತೆಗೆ ತವರು ಮನೆಯಲ್ಲಿ ವಾಸವಿದ್ದಳು. ಪತಿ ಉಮೇಶ ಗಂಡುಗುದರಿ ತವರು ಮನೆಗೆ ಆಗಮಿಸಿ ಈ ದುಷ್ಕöÈತ್ಯ ಎಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗೀತಾ, ತಾಯಿ ನೀಲವ್ವ ಚೀರಾಟ ಕೇಳಿ ಗ್ರಾಮದವರು ಓಡಿ ಬಂದಾಗ ಉಮೇಶ ಕಾಲ್ಕಿತ್ತಿದ್ದಾನೆ.ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *