ಹುಬ್ಬಳ್ಳಿ-ಧಾರವಾಡ ಸುದ್ದಿ
ಯುವಕರಿಂದ ಸಿದ್ಧವಾಯ್ತು ಮಾಸ್ಟರ್ ಮೈಂಡ್

ಯುವಕರಿಂದ ಸಿದ್ಧವಾಯ್ತು ಮಾಸ್ಟರ್ ಮೈಂಡ್

ಚಿತ್ರರ0ಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹೊಸ ಪ್ರತಿಭೆಗಳು ಶಾರ್ಟ್ ಫಿಲ್ಮಗಳ ಮೊರೆ ಹೊಗುತ್ತಾರೆ. ಅದೇ ಮಾದರಿಯಲ್ಲಿ ಸಿದ್ದವಾಗಿ ರುವುದೇ ‘ಮಾಸ್ಟರ್ ಮೈಂಡ್’ ಶಾರ್ಟ್ ಫಿಲ್ಮ. ಕಮರ್ಷಿಯಲ್ ಸಿನಿಮಾ ಮಾದರಿಯಲ್ಲಿಯೇ ಅದ್ದೂರಿಯಾಗಿ ಸಿದ್ದವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶನ ಮಾಡಿದ್ದಾರೆ ಎ.ವಿ. ಸುರೇಶ್. ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ಅನುಭವ ಹೊಂದಿರುವ ಈ ಯುವ ಪ್ರತಿಭೆ ತಮ್ಮನ್ನು ತಾವು ಗಾಂಧಿನಗರದಲ್ಲಿ ಗುರುತಿಸಿಕೊಳ್ಳುವ ಉದ್ದೇಶದಿಂದ ಪಿಪಿಎಂ ಜಾನರ್ ಸಿನಿಮಾ. ಪಿಪಿಎಂ ಎಂದರೆ! (ಪ್ರೊಡ್ಯೂಸರ್ ಪ್ರೋಮೊ ಮೂವೀ).
ಮಹಿಳಾ ಪ್ರಧಾನ ಕಥೆಯಲ್ಲಿ ರಾಜಕೀಯ ದೊಂಬರಾಟ, ರೌಡಿಸಂ ಅಂಶ ಗಳನ್ನು ಸೇರಿಸಲಾಗಿದೆ. ಈ ಫಿಲ್ಮ ನೋಡಿ ಮಾತನಾಡಿದ ಭಾ.ಮಾ ಹರೀಶ್ ’೩೨ ನಿಮಿಷದ ಚಿತ್ರ ಮಾಡುವ ಬದಲು ಇನ್ನಷ್ಟು ಶ್ರಮ ಹಾಕಿ ೯೧ ನಿಮಿಷ ದಷ್ಟು ಮಾಡಿದ್ದರೆ, ಇದಕೊಂದು ಸೆನ್ಸಾರ್ ಆಗಿ ಸಿನಿಮಾ ಎನಿಸಿಕೊಳ್ಳುತ್ತಿತ್ತು. ಸಿನಿಮಾ ಮಾಡರಿಯಲ್ಲಿಯೇ ಸುಂದರವಾಗಿ ಬಂದಿದೆ. ಈ ಶಾರ್ಟ್ ಫಿಲ್ಮಗಳಿಂದ ಬಂಡವಾಳ ವಾಪಸ್ ಬರುವುದಿಲ್ಲ. ಬರೀ ಯುಟ್ಯೂಬ್‌ಗೆ ಹಾಕಬೇಕಾಗುತ್ತದೆ’ ಎಂದು ತಂಡಕ್ಕೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಮತ್ತೊಬ್ಬ ಅತಿಥಿ ಉಮೇಶ್ ಬಣಕಾರ್ ‘ಪಿಪಿಎಂ ಯೋಜನೆಯನ್ನು ಯಾರು ಇಲ್ಲಿಯವರೆಗೂ ಮಾಡಿಲ್ಲ. ತಾವು ಹೊಸದಾಗಿ ಬರುವವರಿಗೆ ಮಾರ್ಗದರ್ಶನವನ್ನು ಇದರ ಮೂಲಕ ಕೊಡುತ್ತಿರುವುದು ಸಂತಸದ ವಿಷಯ. ಇಂತಹ ಸಿನಿಮಾಗಳಿಗೆ ಯೂ ಟ್ಯೂಬ್‌ನಿಂದ ಹಣ ಬರುವುದಿಲ್ಲ. ಮುಂದೆ ಕನಿಷ್ಟ ೯೧ ನಿಮಿಷದ ವರೆಗೆ ಚಿತ್ರ ಮಾಡಿರಿ’ ಎಂದು ಸಲಹೆ ನೀಡಿದರು. ಉಳಿದ ಅತಿಥಿಗಳಾದ ಬಿ.ಆರ್.ಕೇಶವ್, ಹಾಗೂ ಪಾನಿಪುರಿ ಕಿಟ್ಟಿ ತಂಡಕ್ಕೆ ಶುಭ ಹಾರೈಸಿದರು. ಸದ್ಯ ಈ ಚಿತ್ರವನ್ನು ಪ್ರೇಕ್ಷಕರು ಯೂಟ್ಯೂಬ್‌ನಲ್ಲಿ ನೋಡಬಹುದಾಗಿದೆ.
ಅಂದAಗೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಅನಂತು ವಾಸುದೇವ್. ಇವರಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ ಹಿಮಾ ಮೋಹನ್. ಶಿವಮೊಗ್ಗ ಮೂಲದ ಹಿಮಾ ೭ ಸಿನಿಮಾಗಳಲ್ಲಿ ನಟಿಸಿದ್ದು, ಸೀರಿಯಲ್ ನಲ್ಲೂ ಬಣ್ಣ ಹಚ್ಚಿದ್ದಾರೆ. ‘ಇದೇ ಮೊದಲಬಾರಿ ನಾನು ಶಾರ್ಟ್ ಫಿಲ್ಮ್ ಮಾಡಿದ್ದು, ಸಿನಿಮಾ ತರಾನೇ ಫಿಲ್ ಆಗಿದೆ ಶೂಟಿಂಗ್ ಜರ್ನಿ ತುಂಬಾ ಚನ್ನಾಗಿತ್ತು’ ಎನ್ನುವರು ಹಿಮಾ. ಇನ್ನು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಬಲರಾಂ. ಉಳಿದ ತಾರಾಗಣದಲ್ಲಿ ಎ.ವಿ. ಸುರೇಶ್, ನಿಹಾಲ್ ಗೌಡ, ಸದಾನಂದ್ ಗೌಡ, ಕುಶಾಲ್ ಮುಂತಾದವರು ಇದ್ದಾರೆ. ಬೆಂಗಳೂರು ಮತ್ತು ದೇವನಹಳ್ಳಿಯಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರ ವಾಸುದೇವ್ ಬಾಕ್ಸ್ ಆಫೀಸ್ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರಕ್ಕೆ ಲಲಿತ್ ಕ್ರಿಷ್ ಸಂಗೀತ, ಸಾವದ್ ಎಂ ಛಾಯಾಗ್ರಹಣ, ಹರೀಶ್ ಮತ್ತು ಕೃಷ್ಣ ಸಂಕಲನ, ನವೀನ್ ಬಾಯ್ಸ್ ಸಾಹಸವಿದೆ. ಅಂದAಗೆ ಈ ಚಿತ್ರದ ಮೇಕಿಂಗ್ ವಿಡಿಯೋವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿರುವುದು ವಿಶೇಷ.

administrator

Related Articles

Leave a Reply

Your email address will not be published. Required fields are marked *