ಬೆಳಗಾವಿ: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ೪.೯ ಕೆ.ಜಿ ಚಿನ್ನಕಳ್ಳತನ ಕೇಸಿನ ಕಿಂಗ್‌ಪಿನ್ ಕಿರಣ ವೀರನಗೌಡರಗೆ ಬೆಳಗಾವಿ ೪ನೇ ಜೆಎಂಎಫ್‌ಸಿ ವಿಶೇಷ ನ್ಯಾಯಾಲಯ ಒಂದು ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಯಮಕನಮರಡಿ ಠಾಣೆ ಬಳಿಯ ಕಾರ್‌ನ ಏರ್‌ಬ್ಯಾಗ್‌ನಲ್ಲಿ ಇದ್ದ ೪.೯ ಕೆ.ಜಿ ಕಳ್ಳತನ ಕೇಸ್ ಪ್ರಕರಣದಲ್ಲಿ ಡೀಲ್ ಮಾಡಿದ್ದ ಕಿಂಗ್‌ಪಿನ್ ಕಿರಣ್ ವೀರನಗೌಡರ ಬಂಗಾರ ಇಟ್ಟಿದ್ದ ಕಾರು ಬಿಡಿಸಲು ೨೫ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು ಹಾಗೂ ಕಾರು ಮಾಲೀಕ ಮಂಗಳೂರು ಮೂಲದ ತಿಲಕ್ ಪೂಜಾರಿಯಿಂದ ಹಣ ಪಡೆದ ಆರೋಪ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿ ಗಳು ಯಮಕನಮರಡಿ ಠಾಣೆಯಲ್ಲಿ ಭಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದರಲ್ಲದೇ ಕಿರಣ್‌ನನ್ನು ವಶಕ್ಕೆ ಪಡೆದುಕೊಂಡು ಮೊದಲು ೧೪ ದಿನ ವಿಚಾರಣೆ ನಡೆಸಿದ್ದರು.
ಇದಾದ ಬಳಿಕ ಜಾಮೀನು ಕೋರಿ ಕಿರಣ ಕೋರ್ಟ ಮೊರೆ ಹೋಗಿದ್ದ, ವಿಚಾರಣೆ ನಡೆಸಿದ ಬೆಳಗಾವಿ ೪ನೇ ಜೆಎಂಎಫ್‌ಸಿ ವಿಶೇಷ ನ್ಯಾಯಾಲಯ ಒಂದು ಪ್ರಕರಣದಲ್ಲಿ ಜಾಮೀನು ನೀಡಿದೆ.
ನಕಲಿ ಐಡಿ ಪ್ರಕರಣದಲ್ಲಿ ಮತ್ತೆ ೧೦ ದಿನಗಳ ಕಾಲ ವಿಚಾರಣೆಗೆ ಸಿಐಡಿ ವಶಕ್ಕೆ ಪಡೆದಿದ್ದು ತನಿಖೆ ನಡೆಸಿದೆ.