ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾರು ಚಾಲಕನ ಪಾಲಕರ ಕೂಡಿ ಹಾಕಿದ ಪ್ರಕರಣ

ಫರ್ಟಿಲೈಸರ್ ಮಾಲಿಕನ ಸಹಿತ ಮೂವರ ಬಂಧನ

ಹುಬ್ಬಳ್ಳಿ: ನಗರದ ಫರ್ಟಿಲೈಸರ್ ಕಂಪನಿ ಮಾಲೀಕರೊಬ್ಬರು ತಮ್ಮ ಕಾರು ಚಾಲಕ ಮಾಡಿದ ತಪ್ಪಿಗಾಗಿ ಆತನ ತಂದೆ ತಾಯಿಗಳನ್ನು ಕೂಡು ಹಾಕಿದ ಪ್ರಕರಣ ( 127/2022)ಕೇಶ್ವಾಪುರ ಠಾಣೆಯಲ್ಲಿ ದಾಖಲಾಗಿದ್ದು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.


ನಗರದ ಫರ್ಟಿಲೈಸರ್ ಕಂಪನಿ ಮಾಲಕ ಸುರೇಶ ಬೋನಗೇರಿ ಎಂಬುವವರೆ ಕಾರು ಚಾಲಕ ಉಮೇಶ ಗಡ್ಡದನ ತಂದೆ ಬಸಪ್ಪ ಗಡ್ಡದ ಹಾಗೂ ತಾಯಿಯನ್ನು ಕೂಡು ಹಾಕಿದವರಾಗಿದ್ದು ಈ ಸಂಬಂಧ ಇಂದು ಪೊಲೀಸರು ಬೋನಗೇರಿ ಹಾಗೂ ಸಹಾಯ ಮಾಡಿದ ಶಿವು ಕೊಳ್ಳಿ, ವಾಚಮನ್ ಬಸಯ್ಯಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.


ಹಿನ್ನೆಲೆ : ಬೋನಗೇರಿಯವರ ಕಾರು ಚಾಲಕ ಉಮೇಶ ಗಡ್ಡದ ಕಾರನ್ನ ಹಿಂದೆ ತೆಗೆಯುತ್ತಿದ್ದಾಗ ವಿದ್ಯುತ್ ಕಂಬಕ್ಕೆ ತಗುಲಿ ಜಖಂಗೊಂಡಿದೆ. ಈ ಕಾರಣದಿಂದ ಕಾರಿನ ರಿಪೇರಿಗೆ ತಗುಲುವ ವೆಚ್ಚವನ್ನ ನೀನೆ ಭರಿಸಬೇಕೆಂದು ಹೇಳಿದ್ದಾರೆ. ವಾಹನ ಚಾಲನೆ ಉದ್ಯೋಗದಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಉಮೇಶ ಭಯದಿಂದ ಬೇರೆ ಕಡೆ ಹೋಗಿದ್ದ. ಇದರಿಂದ ಸಿಟ್ಟಿಗೆದ್ದ ಬೋನಗೇರಿಯವರು ನವಲಗುಂದ ತಾಲೂಕಿನ ಕಾಲವಾಡದ ಆತನ ತಂದೆ ಬಸಪ್ಪ ಹಾಗೂ ತಾಯಿಯನ್ನು ತಾಯಿಯನ್ನ ಸಾಗರ ಕಾಲನಿಯಲ್ಲಿರುವ ಮನೆಯ ಶೆಲ್ಟರಿನ ರೂಮಿನಲ್ಲಿ ರೂಮಿನಲ್ಲಿ ಕೂಡಿ ದಿ. 2ರಿಂದ 11ರವರೆಗೆ ಕೂಡಿ ಹಾಕಿದ್ದಲ್ಲದೇ ಹಣ ನೀಡದೇ ಹೋದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಈ ಕುರಿತು ಉಮೇಶನ ತಂದೆ ಬಸಪ್ಪ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಆರೋಪಿಗಳನ್ನು ಬಂಧಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *