ಹುಬ್ಬಳ್ಳಿ: ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ, ಪ್ರಕೃತಿಯ ಅಂಶಗಳ ನ್ನೊಳಗೊಂಡು ನಿರ್ಮಾಣ ಮಾಡಿರುವ ಅಘೋರ ಚಿತ್ರ ಮಾ. ೪ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಎನ್.ಎಸ್. ಪ್ರಮೋದರಾಜ್ ಹಾಗೂ ನಿರ್ಮಾಪಕ ಪುನೀತ್ ಎಂ.ಎನ್. ಹೇಳಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಕ್ಷ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಅಘೋರ ಚಿತ್ರ ರಾಜ್ಯದಾದ್ಯಂತ ೨೫೦ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಅಘೋರಿ ಗಳ ಚಿತ್ರವಲ್ಲ. ಪ್ರಕೃತಿ, ಭೂಮಿಯು ಹೇಗೆ ಕಾಲ ಕಾಲಕ್ಕೆ ಬದಲಾಗುತ್ತದೆ ಎಂಬುದನ್ನು ಒಳಗೊಂಡಿದೆ ಎಂದರು.
ಪ್ರಕೃತಿಯಾಗಿ ನಟಿಸಿರುವ ದ್ರವ್ಯ ಶೆಟ್ಟಿ ಹಾಗೂ ಭೂಮಿಯಾಗಿ ನಟಿಸಿರುವ ರಚನಾ ದಶರಥ ಮಾತನಾಡಿ, ನಾವು ಇಂದು ಪ್ರಕೃತಿ, ಭೂಮಿಯನ್ನು ಕೇವಲವಾಗಿ ನೋಡುತ್ತಿದ್ದೇವೆ. ಅವು ತಿರುಗಿ ಬಿದ್ದರೆ ಹೇಗಿರುತ್ತದೆ ಎಂಬ ಕಥೆಯನ್ನು ನಟನೆ ಮೂಲಕ ತೋರಿಸಲಾಗಿದೆ. ವಿಶೇಷ ಪಾತ್ರದಲ್ಲಿ ನಟಿಸಿರು ವುದಕ್ಕೆ ತುಂಬಾ ಖೂಷಿಯಾಗಿದೆ ಎಂದರು.
ಚಿತ್ರದಲ್ಲಿ ಒಂದೇ ಒಂದು ಹಾಡು ಇದ್ದು, ಅದನ್ನು ಸಂಚಿತ್ ಹೆಗಡೆ ಹಾಗೂ ಉತ್ತರ ಕರ್ನಾಟಕದ ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಅವರು ಹಾಡಿದ್ದಾರೆ. ಶರತ್ ಕುಮಾರ್ ಅವರ ಛಾಯಾಗ್ರಹಣ, ಮಾಸ್ಮಾದ ಸಾಹಸವಿದೆ ಎಂದು ಹೇಳಿದರು.