ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಮುಕುಟಮಣಿಯಂತಿರುವ ದೇಶಪಾಂಡೆನಗರ,ಭವಾನಿನಗರ ಸುತ್ತಮುತ್ತಲಿನ ವಾರ್ಡ್ ನಂ. 57 ರಲ್ಲಿ ಕಮಲ ಪಡೆ ತೀವ್ರ ಜಿದ್ದಾಜಿದ್ದಿಯಲ್ಲಿ ಅಂತಿಮ ಕ್ಷಣದ ಗೆಲುವು ಸಾಧಿಸಿದ್ದರೂ ಮೊದಲ ಬಾರಿಗೆ ಕಾಂಗ್ರೆಸ್‌ನ ಸರಸ್ವತಿ ಕುಲಕರ್ಣಿ ಅವರು ಮತದಾರರ ಮನಗೆಲ್ಲುವಲ್ಲಿ ಯಶ ಸಾಧಿಸಿದ್ದಾರೆ.ವಾರ್ಡ್ ಬಿಜೆಪಿಯ ಭದ್ರಕೋಟೆಯಾಗಿದ್ದು, ಬಿಜೆಪಿ ಎದುರು ಉಳಿದವರಾದರೂ ಲೆಕ್ಕಕ್ಕಿಲ್ಲ ಎಂಬ0ತಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿ0ದ ಟಿಕೆಟ್ ಪಡೆದು ನಿರೀಕ್ಷೆಗೆ ಮೀರಿ ಮತ ಪಡೆದರೂ ಗೆಲುವಿನ ಹೊಸ್ತಿಲಲ್ಲಿ ಸರಸ್ವತಿ ಕುಲಕರ್ಣಿ ಮುಗ್ಗರಿಸಿದರೂ ಅವರು ವಾರ್ಡಿನ ಜನತೆಯ ಮನೆ ,ಮನ ಎರಡನ್ನೂ ಅಕ್ಷರಶಃ ಗೆದ್ದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಿಸುವ ಮೂಲಕ ಮುಂಬರುವ ಚುನಾವಣಾ ಎಂಟ್ರಿಗೆ ಮೊದಲ ಹೆಜ್ಜೆ ಇಟ್ಟಿದ್ದ ಸರಸ್ವತಿ ಕಾಂಗ್ರೆಸ್ ಟಿಕೆಟ್ ತೆಗೆದುಕೊಂಡು ಕಣಕ್ಕಿಳಿದಾಗ ಬಿಜೆಪಿ ಉಳಿದ ಎಲ್ಲರನ್ನೂ ಹಿಂದಕ್ಕೆ ಸರಿಸಿ ನೇರ ಪೈಪೋಟಿ ಇರುವಂತೆ ನೋಡಿಕೊಂಡಿತು. ಬಿಜೆಪಿಯ ಪಾಳೆಯದಲ್ಲಿ ನೆಲೆಯೇ ಇಲ್ಲದ ಕಾಂಗ್ರೆಸ್‌ನ್ನು ತಳಮಟ್ಟದಿಂದ ಕಟ್ಟಿದವರು ಯುವ ಕಾಂಗ್ರೆಸ್ ರಾಜ್ಯ ಮುಖಂಡ ಮದನ ಕುಲಕರ್ಣಿ ಮತ್ತು ಮಾಲತೇಶ ಕುಲಕರ್ಣಿ ಸಹೋದರರು. ತಮ್ಮ ಗೆಳೆಯರ ಬಳಗ ಹಾಗೂ ಕಾರ್ಯಕರ್ತರನ್ನು ಕಟ್ಟಿಕೊಂಡು ಮನೆ ಮನೆಗೆ ಮುಟ್ಟಿದರಲ್ಲದೇ ಯಾವುದೇ ಅಬ್ಬರವಿಲ್ಲದೇ ಪ್ರಚಾರ ಕೈಗೊಂಡುದು ಎಲ್ಲಿ ಈ ವಾರ್ಡ್ ‘ಕೈ’ ವಶವಾಗುವುದೋ ಎನ್ನುವ ಆತಂಕಕ್ಕೆ ಕಾರಣವಾಗಿತ್ತು.
ಸ್ವತಃ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್, ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಿಂಡು ಹಿಂಡಾಗಿ ಬಂದು ಪಕ್ಷದ ಪರ ಪ್ರಚಾರ ಕೈಗೊಂಡರು.
ಮಾಜಿ ಸಿಎಂ ಪತ್ನಿ ಶಿಲ್ಪಾ ಶೆಟ್ಟರ್ ಬಿಜೆಪಿ ಅಭ್ಯರ್ಥಿಯ ಜತೆ ಪರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರೂ, ಹಿಂಜರಿಯದೇ ಕುಲಕರ್ಣಿ ಸಹೋದರರು ಹಾಗೂ ಸರಸ್ವತಿ ಕುಲಕರ್ಣಿ ಎಲ್ಲರ ವಿಶ್ವಾಸ ಗಳಿಸಿದ ಪರಿಣಾಮ ಸರಸ್ವತಿ 1507 ಮತಗಳನ್ನು ಪಡೆದರು.ದೇಶಪಾಂಡೆನಗರ ಭೂತ್‌ನಲ್ಲೇ ಸುಮಾರು 700 ಮತಗಳನ್ನು ಪಡೆದುದು ಸಣ್ಣ ಸಾಧನೆಯಲ್ಲ.
ಮತದಾನಕ್ಕೆ ಒಂದು ದಿನ ಇರುವಾಗಲೂ ಕಾಂಗ್ರೆಸ್ ಮುನ್ನಡೆಯಲ್ಲಿಯೇ ಇತ್ತು. ಆದರೆ ಮತದಾನಕ್ಕೆ ಒಂದು ದಿನ ಮೊದಲು ಗಣ್ಯ ಮುಖಂಡರೊಬ್ಬರು ತಡರಾತ್ರಿ ಹೊಸೂರ, ಭವಾನಿನಗರಕ್ಕೆ ಭೇಟಿ ನೀಡಿ ಅನೇಕ ಭರವಸೆ ನೀಡಿ ಮರ್ಯಾದೆ ಉಳಿಸಿಕೊಂಡರೆ0ದು ಹೇಳಲಾಗುತ್ತಿದೆ.
ಮತದಾರರ ಆಶೀರ್ವಾದದ ಫಲವಾಗಿ ತಾವು ಇಷ್ಟು ಮತ ಗಳಿಸಲು ಸಾಧ್ಯವಾಯಿತು. ಈ ವಾರ್ಡ್ನಲ್ಲಿಯೇ ಪಕ್ಷ ಸಂಘಟಿಸಿ ಮತದಾರರ ಬೇಕು ಬೇಡಗಳಿಗೆ ಮುಂದೆಯೂ ಹೋರಾಟ ನಡೆಸುವೆ.
ಸರಸ್ವತಿ ಕುಲಕರ್ಣಿ ಕೈ ಅಭ್ಯರ್ಥಿ
57ನೇ ವಾರ್ಡಿನಲ್ಲಿ ಕಾಂಗ್ರೆಸ್‌ಗೆ ಹೇಳಿಕೊಳ್ಳುವ ನೆಲೆ ಹಾಗೂ ಮತಬ್ಯಾಂಕ ಇರಲಿಲ್ಲ. ನಮ್ಮದೇ ತಂಡ ಕಟ್ಟಿಕೊಂಡು ಪಕ್ಷ ಸಂಘಟಿಸಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದೆವು. ನಾವು ಸೋತಿರಬಹುದು. ಆದರೆ, ಮತದಾರರ ಮನಸ್ಸನ್ನು ಮಾತ್ರ ನೂರಕ್ಕೆ ನೂರರಷ್ಟು ಗೆದ್ದಿದ್ದೇವೆ
ಮದನ್ ಕುಲಕರ್ಣಿ ಕಾಂಗ್ರೆಸ್ ಮುಖಂಡ
ವಾರ್ಡ್ನ ಪ್ರತಿಯೊಬ್ಬರೂ ನಮ್ಮ ಬಗೆಗೆ ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ನೀಡಿದ ಬೆಂಬಲಕ್ಕೆ ನಾವು ಚಿರರುಣಿ, ಆದರೆ, ಸೋತರೂ ಮತದಾರರ ಮನಸ್ಸು ಗೆದ್ದಿರುವುದಕ್ಕೆ ಪಡೆದ ಮತಗಳೇ ಸಾಕ್ಷಿ. ಸೋಲೆ ಗೆಲುವಿನ ಮೆಟ್ಟಿಲು ಎಂದು ಮುಂದೆಯೂ ಇಲ್ಲಿಯೇ ಪಕ್ಷ ಕಟ್ಟುವ ಕೆಲಸ ಮಾಡುವೆವು.