ಹುಬ್ಬಳ್ಳಿ-ಧಾರವಾಡ ಸುದ್ದಿ

ಅವಳಿನಗರದ ವಾರ್ಡ್‌ವಾರು ಕತೆ

51,52, 53ರಲ್ಲಿ ಬಿಜೆಪಿ ಸ್ವಚ್ಛತಾ ಅಭಿಯಾನ


ಹುಬ್ಬಳ್ಳಿ: ಸೆಂಟ್ರಲ್ ಬಿಜೆಪಿ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಗೋಕುಲ ರಸ್ತೆಯಲ್ಲಿನ ಕಮಲದ ಭದ್ರಕೋಟೆ ಹಾಗೂ ಸಂಘ ಪರಿವಾರದ ಶಕ್ತಿ ಕೇಂದ್ರ ಕೇಶವ ಕುಂಜ, ಡಾರ‍್ಸ್ ಕಾಲನಿ, ಅಕ್ಷಯ ಪಾರ್ಕ, ಜೆಪಿನಗರ, ಆರ್ ಎನ್ ಶೆಟ್ಟಿ ಫ್ಯಾಕ್ಟರಿ ಸುತ್ತಮುತ್ತಲಿನ ಪ್ರದೇಶವನ್ನೊಳಗೊಂಡ 51, 52 ಹಾಗೂ 53 ಮೂರು ವಾರ್ಡಗಳಲ್ಲಿ ಸೋಲನ್ನುಂಡಿರುವುದು ಎಲ್ಲರಿಗೂ ಆಘಾತ ತಂದಿದೆ.
51,53ರಲ್ಲಿ ಕಾಂಗ್ರೆಸ್ ಬಾವುಟ ಹಾರಾಡಿದರೆ, 52ರಲ್ಲಿ ಪಕ್ಷೇತರ ಅಭ್ಯರ್ಥಿ ಹಿರೇಕೆರೂರ ಕುಟುಂಬದ ಕುಡಿ ಚೇತನನ ಅಟೋ ರಿಕ್ಷಾ ರಿವರ್ಸ ಗೇರ್‌ನಲ್ಲಿ ಪಾಲಿಕೆ ಅಂಗಳ ತಲುಪಿದೆ.
ಮೂರು ವಾರ್ಡಗಳಲ್ಲಿ ಬಿಜೆಪಿ ಸ್ವಚ್ಛತಾ ಅಭಿಯಾನವಾದಂತಾಯಿತು ಎಂದು ಸ್ವತ: ಹಿರಿಯ ಬಿಜೆಪಿ ಮುಖಂಡರೆ ಮಾತನಾಡಿಕೊಳ್ಳಲಾರಂಬಿಸಿದ್ದು, ಸ್ಥಳೀಯ ಮುಖಂಡರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಪರಿಣಾಮ ಕೇಸರಿ ಪಡೆ ದೊಡ್ಡ ದಂಡವನ್ನೇ ತೆತ್ತಿದೆ.
ಪ್ರಮುಖ ಪದಾಧಿಕಾರಿಗಳಾದ ಕೃಷ್ಣಾ ಗಂಡಗಾಳೇಕರ, ಉಮೇಶ ದುಶಿ ಹಾಗೂ ಮುಕುಂದ ಗುಗ್ಗರಿ ಪರಾಭವಗೊಂಡಿದ್ದು ಕಾಂಗ್ರೆಸ್‌ನ ಸೆಂಥಿಲ್ ಕುಮಾರ, ಮಹ್ಮದ ಇಸ್ಮಾಯಿಲ್ ಭದ್ರಾಪುರ ಹಾಗೂ ಚೇತನ ಹಿರೇಕೆರೂರ ಗೆಲುವು ಸಾಧಿಸಿ ಕಮಲದ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.51ರಲ್ಲಿ ಪಕ್ಷೇತರ ಪಕ್ಷೇತರ ಸಂತೋಷ ಸಂಪಗಾವಿ ಬಿಜೆಪಿಗೆ ಅಸಂತೋಷ ತಂದರೆ 52ರಲ್ಲಿ ಜನತೆಯ ಒತ್ತಾಯದ ಮೇಲೆ ಕಣಕ್ಕಿಳಿದಿದ್ದ ಸಮಾಜ ಸೇವಕ ಸಂತೋಷ ಶೆಟ್ಟಿ ಕೇಸರಿ ಪಡೆಯ ‘ಸಂತೋಷ’ ಕಸಿದುಕೊಂಡರು.53ರಲ್ಲಿ ಟಿಕೆಟ್ ಘೋಷಣೆಯಾದಾಗಲೇ ಭದ್ರಾಪುರ ಗೆಲುವು ಖಚಿತವಾಗಿತ್ತಲ್ಲದೇ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡುದು ಕೈಗೆ ಪ್ಲಸ್ಸಾಯಿತು. ಈ ಘಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಲೆಕ್ಕಕ್ಕಿಲ್ಲವಾದ ಹಿರಿಯರು
ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಬಿಜೆಪಿ ಯಾರೊಬ್ಬರಿಗೂ ಟಿಕೆಟ್ ನೀಡದೇ ಹೋದುದು, ಅಲ್ಲದೇ ಸ್ಥಳೀಯ ಅನೇಕ ಹಿರಿಯ ಮುಖಂಡರನ್ನು ಸೌಜನ್ಯಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದುದು ಮುಳುವಾಯಿತು.ಯರ‍್ಯಾರಿಗೋ ಹಿರಿತನ ನೀಡಿದುದು ಮೂಲ ಬಿಜೆಪಿಗರಲ್ಲಿ ತೀವ್ರ ಅಸಮಾಧಾನವುಂಟು ಮಾಡಿತ್ತು.

35ರಲ್ಲಿ ‘ತ್ರಿವಿಕ್ರಮ’ನ ರಿ ಎಂಟ್ರಿ !


ಹುಬ್ಬಳ್ಳಿ : ಭೈರಿದೇವರಕೊಪ್ಪ, ಈಶ್ವರನಗರ ಸುತ್ತಮುತ್ತಲಿನ ಪ್ರದೇಶ ಒಳಗೊಂಡ ಸೆಂಟ್ರಲ್ ಕ್ಷೇತ್ರದ ಬಾಗಿಲು 35ನೇ ವಾರ್ಡಿನಲ್ಲಿ ಮಲ್ಲಿಕಾರ್ಜುನ ಗುಂಡೂರ ಗೆಲ್ಲುವ ಮೂಲಕ ಬಿಜೆಪಿ ಬಾವುಟ ಹಾರಿಸಿದ್ದಾರೆ.
1996,2008 ಹೀಗೆ ಎರಡು ಬಾರಿ ಪಾಲಿಕೆಗೆ ಎಂಟ್ರಿಕೊಟ್ಟಿರುವ ಗುಂಡೂರ ಮೂರನೇ ಬಾರಿಗೆ ಸುಮಾರು 940 ಅಂತರದ ಗೆಲುವಿನಿಂದ ವಿಜಯಿಯಾಗಿದ್ದಾರೆ. ಎರಡು ಬಾರಿ ರಾಜಣ್ಣ ಕೊರವಿ ವಿರುದ್ದ ಸೋಲು ಕಂಡಿರುವ ಗುಂಡೂರ ಸೋತ ಮರುದಿನದಿಂದಲೇ ಜನರ ಮಧ್ಯೆ ಉಳಿದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಬಂದುದೇ ಮತ್ತೆ ಅವರ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದೆ.ಅವರ ಸರಳತನ ಹಾಗೂ ಯಾವುದೆ ಬಿಗುಮಾನವಿಲ್ಲದೇ ಸಣ್ಣವರೊಂದಿಗೆ ಸಣ್ಣವರಾಗಿ, ದೊಡ್ಡವರೊಂದಿಗೆ ಹಿರಿಯರಾಗಿ ನಡೆವ ನಡವಳಿಕೆಯೇ ಈ ಬಾರಿ ಭಾರಿ ಪೈಪೋಟಿಯಲ್ಲಿ ನೆರವಿಗೆ ಬಂದಿದೆ.
ಇವರ ಪ್ರತಿಸ್ಪರ್ಧಿ ಬಸವರಾಜ ಮಾಯಕಾರ ಕಾಂಗ್ರೆಸ್‌ನಿAದ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದರೂ ಗೆಲುವಿನಂಚಿಗೆ ಬರಲಾಗಲಿಲ್ಲ.

ಕೈ ಪಡೆಯ ಸರತಾಜ್ ವ್ಹಾ ವ್ಹಾ..!


ಹುಬ್ಬಳ್ಳಿ : ಅವಳಿನಗರದ 82 ವಾರ್ಡಗಳ ಪೈಕಿ 62ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಹುರಿಯಾಳು ಸರತಾಜ್ ಶರೀಪ್ ಅದವಾನಿ ಈ ಬಾರಿ ಅತಿಹೆಚ್ಚು ಮತಗಳ ಅಂತರದ ಜಯ ದಾಖಲಿಸಿ ಹೊಸ ಇತಿಹಾಸ ಬರೆದಿದ್ದಾರೆ.
5019 ಮತ ಗಳಿಸಿರುವ ಸರತಾಜ್ ತಮ್ಮ ಎದುರಾಳಿ ಬಿಜೆಪಿಯ ಭಾರತಿ ಯಲಕಾನ ಅವರನ್ನು 3959 ಮತಗಳ ಅಂತರದಿ0ದ ಪರಾಭವಗೊಳಿಸಿ ಪಾಲಿಕೆಗೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ.
ಭಾರತಿ ಯಲಕಾನ ಎಂಬ ಅಪರಿಚಿತ ಮುಖಕ್ಕೆ ಮಣೆ ಹಾಕಿದಾಗಲೇ ವಾರ್ಡನಲ್ಲಿ ಗೆಲುವಿನ ಅಂತರ ಎಷ್ಟಾಗಬಹುದೆಂಬ ಲೆಕ್ಕಾಚಾರ ಆರಂಭವಾಗಿತ್ತು. ಅದು ಕೊನೆಗೂ ನಿಜವಾಗಿದೆ. ವಾರ್ಡಿನಲ್ಲಿ ಅಭ್ಯರ್ಥಿ ಪತಿ ಶರೀಪ್ ಮಾಡಿರುವ ಕೆಲಸಗಳು ಮತವಾಗಿವೆ.ಅಲ್ಲದೇ ಎಲ್ಲ ಸಮುದಾಯದವರು ಅವರನ್ನು ಬೆಂಬಲಿಸಿದ್ದಾರೆ.
ರಾಜಣ್ಣ ಕೊರವಿ 36ರಲ್ಲಿ 3891ಮತದಿಂದ, 38ರಲ್ಲಿ ತಿಪ್ಪಣ್ಣ ಮಜ್ಜಗಿ 3103 ಮತಗಳ ಅಂತರದಿAದ , ಇಮ್ರಾನ್ ಯಲಿಗಾರ ವಾರ್ಡ 33ರಲ್ಲಿ3147 ಮತಗಳ ಮುನ್ನಡೆಯಿಂದ, ವಾರ್ಡ ನಂ 70ರಲ್ಲಿ ಗೀತಾ ಹೊಸಮನಿ 3082 ಮತಗಳ ಅಂತರದಿAದ, ವಾರ್ಡ ನಂ 14ರಲ್ಲಿ ಕಾಂಗ್ರೆಸ್‌ನ ಶಂಭು ಸಾಲಮನಿ 2450 ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ.
ಅತಿ ಕಡಿಮೆ ಅಂತರದ ಗೆಲುವು 51ರಲ್ಲಿ ಸೆಂಥಿಲ್ ಕುಮಾರದ್ದಾಗಿದ್ದು ಅವರು ಬಿಜೆಪಿಯ ಕೃಷ್ಣ ಗಂಡಗಾಳೇಕರ ವಿರುದ್ದ 8 ಮತಗಳಿಂದ ಜಯ ಸಾಧಿಸಿದ್ದಾರೆ.ವಾರ್ಡ 9ರಲ್ಲಿ ಬಿಜೆಪಿಯ ರತ್ನ ನಾಝರೆ ಕೇವಲ 21 ಮತಗಳಿಂದ ಗೆಲುವು ಸಾಧಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *