ಹುಬ್ಬಳ್ಳಿ-ಧಾರವಾಡ ಸುದ್ದಿ

ಸರ್ಕಾರಕ್ಕೆ ಪಂಚಮಸಾಲಿ ಲಕ್ಷ್ಮಣ ರೇಖೆ; ಮೀಸಲಾತಿ ಸೆ.15ರೊಳಗೆ ಅನುಷ್ಠಾನಗೊಳಿಸಿ

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ಸರಕಾರ ಕೊಟ್ಟ ಮಾತಿನಂತೆ ಸೆಪ್ಟೆಂಬರ್ ೧೫ರೊಳಗೆ ಅನುಷ್ಠಾನಗೊಳಿಸದೇ ಹೋದಲ್ಲಿ ಮತ್ತೆ ಹೋರಾಟ ಆರಂಭಿಸುವುದಾಗಿ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.


ನಗರದ ಕ್ಯೂಬಿಕ್ಸ ಹೊಟೆಲ್‌ನಲ್ಲಿ ದುಂಡುಮೇಜಿನ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
2021ರ ಸಪ್ಟೆಂಬರ್ 15 ರೊಳಗಾಗಿ ಮೀಸಲಾತಿ ಜಾರಿ ಮಾಡುವುದಾಗಿ ಈ ಹಿಂದಿನ ಸಿಎಂ ಬಿಎಸ್ ವೈ ಭರವಸೆ ನೀಡಿದ್ದರು
ಆರು ತಿಂಗಳ ಕಾಲಮಿತಿ ಮುಗಿಯುತ್ತಾ ಬಂದಿದೆ ಎಂದರು.
ಇಂದಿನ ಸಭೆಯಲ್ಲಿ ಐದು ಮಹತ್ವದ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ ಸರ್ಕಾರ ಕೊಟ್ಟ ಮಾತಿನಂತೆ ಸಪ್ಟಂಬರ್ 15 ರೊಳಗಾಗಿ ಮೀಸಲಾತಿ ಅನುಷ್ಠಾನಗೊಳಿಸಬೇಕು.
ಒಂದುವೇಳೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದಲ್ಲಿ ಮತ್ತೆ ಹೋರಾಟ ಆರಂಭಿಸಲಿದ್ದು, ಸಮಾಜದ ವತಿಯಿಂದ ಅಕ್ಟೋಬರ್ 1 ರಿಂದ ಮತ್ತೆ ಹೋರಾಟ ಆರಂಭಿಸಲು ರೂಪುರೇಷೆ ತಯಾರಿಸಲಾಗಿದೆ ಎಂದರು.


ಆಗಷ್ಟ್ 26 ರಿಂದ ಸಪ್ಟಂಬರ್ 30 ರವರೆಗೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಧ್ಯೇಯವಾಕ್ಯದೊಂದಿಗೆ ಜಾಗೃತಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.
ಮಾತು ತಪ್ಪಿದಲ್ಲಿ ಅಕ್ಟೋಬರ್ 1 ರಂದು ಮತ್ತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಭಾಗಿಯಾದ ಬಸವನಗೌಡ ಪಾಟೀಲ ಯತ್ನಾಳ. ಅರವಿಂದ ಬೆಲ್ಲದ ಅವರಿಗೆ ಅನ್ಯಾಯ ಆಗಿದೆ.ಅನ್ಯಾಯಕ್ಕೆ ಸಮಯ ಬಂದಾಗ ಅದಕ್ಕೆ ಉತ್ತರ ನೀಡುತ್ತೇವೆ.ನಮ್ಮ ಪೀಠಕ್ಕೆ ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಿಂತ ನಮ್ಮಗೆ ಮೀಸಲಾತಿ ಮುಖ್ಯ ಎಂದರು.
ಮೀಸಲಾತಿ ಕೊಡಿಸುವ ವಿಚಾರದಲ್ಲಿ ಎಷ್ಟು ಬಣಗಳು ಮುಖ್ಯ ಅಲ್ಲ.
ಕೊನೆಯವರೆಗೂ ನಮ್ಮವರಿಗೆ ಸಿಎಂ ಸ್ಥಾನ ಕೊಡಬೇಕು ಅಂತಾ ಇತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾಯ್ತು. ಬಸವನಗೌಡ ಪಾಟೀಲ ಯತ್ನಾಳ. ಅರವಿಂದ ಬೆಲ್ಲದಗೆ ಸ್ಥಾನ ತಪ್ಪಿದೆ.  ಅದಕ್ಕೆ ಮುಂದೆ ಉತ್ತರ ಕರ್ನಾಟಕದ ಜನರು ತಕ್ಕ ಉತ್ತರ ನೀಡುತ್ತಾರೆ.

ಬೊಮ್ಮಾಯಿಯವರ ಮೇಲೆ ನಮಗೆ ನಂಬಿಕೆ ಇದೆ. ಬೊಮ್ಮಾಯಿಯವರ ಜೊತೆ ಸಿಸಿ ಪಾಟೀಲ ಅವರು ಸಂಧಾನ ಮಾಡಿಸುವ ಭರವಸೆ ನೀಡಿದ್ದು, ಶ್ರೀಘ್ರದಲ್ಲೇ ಸಿಎಂ ಜೊತೆ ಚರ್ಚೆಗೆ ಅವಕಾಶ ದೊರೆಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಗೂ ಮುನ್ನ ನಡೆದ ದುಂಡುಮೇಜಿನ ಸಭೆಯಲ್ಲಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಪ್ರಭಣ್ಣ ಹುಣಸಿಕಟ್ಟಿ, ನೀಲಕಂಠ ಅಸೂಟಿ, ದಿನೇಶ ಪಾಟೀಲ, ನಂದಿಹಾಳ ಹಾಲಪ್ಪ, ಪಂಚನಗೌಡ ಪಾಟೀಲ, ನಾಗರಾಜ ಗೌರಿ ವಿರೇಶ ಉಂಡಿ, ಬಸಲಿಂಗಪ್ಪ ಪುತ್ತಿಹಾರ, ಚಂದ್ರಶೇಖರ ಬದ್ದರವಾಡಿ, ಸೇರಿದಂತೆ ಅನೇಕರಿದ್ದರು.

administrator

Related Articles

Leave a Reply

Your email address will not be published. Required fields are marked *