ಆರೋಪಿ ಪೊಲೀಸ್ ವಶದಲ್ಲಿ
ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ಎನ್ನಲಾಗುವ ವ್ಯಕ್ತಿಯೋರ್ವ ನಗರದ ಮಹಾನಗರ ಪಾಲಿಕೆ ಕಚೇರಿಯ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸೆಟ್ಲಮೆಂಟ ಬಳಿ ಕ್ರಿಶ್ಚಿಯನ್ ಕಾಲೋನಿ ನಿವಾಸಿ ಮೊಹ್ಮದ್ ಹನೀಫ್ ಖೈರಾತಿ ಎಂಬಾತನೆ ಇಂದು ಬೆಳಿಗ್ಗೆ ೮-೩೦ರ ಸುಮಾರಿಗೆ ಮಹಾನಗರ ಪಾಲಿಕೆ ಆವರಣಕ್ಕೆ ಬಂದು ಕಲ್ಲುಗಳಿಂದ ಕಚೇರಿ ಕಿಡಕಿ ಹಾಗೂ ಎರಡು ಕಾರುಗಳು ಹಾಗೂ ಒಂದು ಕಸ ಸಾಗಾಟ ವಾಹನ ಮೇಲೆ ಕಲ್ಲು ತೂರಿ ಮೂರು ವಾಹನದ ಗ್ಲಾಸ್ ಜಖಂಗೊಳಿಸಿದವನಾಗಿದ್ದಾನೆ.
ಅಬ್ಬಯ್ಯ ಅವರನ್ನು ಭೇಟಿಯಾಗಬೇಕು.ನಮ್ಮವರು ಜೈಲಿನಲ್ಲಿದ್ದಾರೆ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದುತ್ತ ಅಧಿಕಾರಿಗಳ ಅಧಿಕಾರಿಗಳ ಕಾರುಗಳು ಮತ್ತು ಕಸದ ವಾಹನದ ಮೇಲೆ ಏಕಾಏಕಿ ಕಲ್ಲು ತೂರಿದ್ದಾನೆ.
ಕೂಡಲೇ ಭದ್ರತಾ ಸಿಬ್ಬಂದಿ ಪಕ್ಕದಲ್ಲೇ ಇರುವ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ತಕ್ಷಣ ಆಗಮಿಸಿದ ಇನ್ಸಪೆಕ್ಟರ್ ರವಿಚಂದ್ರ ಹಾಗೂ ಸಿಬ್ಬಂದಿ ಮೊಹ್ಮದನನ್ನು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.
ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿದ್ದರೂ ನಮ್ಮವರು ಜೈಲಿನಲ್ಲಿದ್ದಾರೆ ಅವರನ್ನು ಬಿಡಿಸಬೇಕೆಂದು ಹೇಳುತ್ತಿದ್ದು ನಿನ್ನೆ ನೆಹರೂ ಕಾಲೇಜ್‌ಗೆ ನುಗ್ಗಿ ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ ಅವರನ್ನೂ ಎಳೆದಾಡಲು ಯತ್ನಿಸಿದ್ದ.ತದನಂತರ ಪಾಲಕರು ಕ್ಷಮೆ ಯಾಚಿಸಿ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.
ಠಾಣೆಯಲ್ಲೂ ಗ್ಲಾಸ್ ಒಡೆದ ಉಪನಗರ ಠಾಣೆಗೆ ಆರೋಪಿ ಮಹ್ಮದನನ್ನು ವಿಚಾರಣೆ ಕರೆತಂದ ವೇಳೆ ಠಾಣೆಯಲ್ಲೂ ಗಲಾಟೆ ಮಾಡಿ ಕೈಯಿಂದ ಕಿಟಕಿಯ ಗಾಜು ಒಡೆದಿದ್ದಾರೆನ್ನಲಾಗಿದೆ.