ಹುಬ್ಬಳ್ಳಿ-ಧಾರವಾಡ ಸುದ್ದಿ
ನಾಳೆ ಮಹತ್ವದ ಮಠಾಧೀಶರ ’ಚಿಂತನ ಮಂಥನ’

ನಾಳೆ ಮಹತ್ವದ ಮಠಾಧೀಶರ ’ಚಿಂತನ ಮಂಥನ’

ಮೂರುಸಾವಿರಮಠದಲ್ಲಿ ನಿರ್ಣಾಯಕ ಸಭೆ: ತೀವ್ರ ಕುತೂಹಲ

ಚುನಾವಣೆಗೆ ಸ್ಪರ್ಧಿಸುವ ವಿಚಾರವಿಲ್ಲ: ಫಕೀರ ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ : ವರ್ತಮಾನದಲ್ಲಿ ನಡೆದಿರುವ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆ ಬೆಳಿಗ್ಗೆ 9.30ಕ್ಕೆ ಮೂರುಸಾವಿರ ಮಠದಲ್ಲಿ ಮಠಾಧಿಪತಿಗಳ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.


ನಗರದಲ್ಲಿಂದು ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಸವಣೂರ ಕಲ್ಮಠದ ಚನ್ನಬಸವ ಸ್ವಾಮೀಜಿ, ಸದಾಶಿವಪೇಟದ ಗದಿಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿಶ್ವರ ಸ್ವಾಮೀಜಿ, ವಿಜಯಪುರದ ಸಿದ್ದಲಿಂಗ ದೇವರು, ಸಂಗನಬಸವ ದೇವರು ಶಿವಲಿಂಗಸ್ವಾಮಿ ಮಂಟೂರ, ಚನ್ನಬಸವೇಶ್ವರ ಸ್ವಾಮೀಜಿ ಸವಣೂರು ಮುಂತಾದವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಹಿಂದೆ ಮಹದಾಯಿಗಾಗಿ ಮಠಾಧಿಪತಿಗಳು ಹೋರಾಟದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಅನೇಕ ಸಮಸ್ಯೆಗಳು ಬಂದಾಗ ಸ್ವಾಮೀಜಿಗಳು ಧ್ವನಿ ಎತ್ತಿದ ಉದಾಹರಣೆಗಳಿವೆ.ಸಭೆಯ ನಂತರ ತೆಗೆದುಕೊಂಡು ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಲಾಗುವುದು.ಅಧ್ಯಕ್ಷತೆಯನ್ನು ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆಂದರು.


ಮಾಧ್ಯಮಗಳ ಮೂಲಕ ಸಮಾಜದ ಬಗ್ಗೆ ಕಳಕಳಿಯಿರುವ ರಾಜ್ಯದ ಎಲ್ಲಾ ಸ್ವಾಮೀಜಿಗಳಿಗೆ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ ಅವರು ನಾಳೆಯದ್ದು ಆಂತರಿಕ ಸಭೆಯಾಗಿದೆ. ವಯಕ್ತಿಕ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸ್ವಾಮೀಜಿಗಳಿಗೆ ಇರುವುದಿಲ್ಲ,ಆ ಹಿನ್ನೆಲೆಯಲ್ಲಿ ನಾಳೆ ಸಭೆ ನಡೆಸಲಾಗುತ್ತಿದೆ ಎಂದರು. ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸವಣೂರು ಕಲ್ಮಠ ಸ್ವಾಮೀಜಿ, ಮಂಟೂರ ಸ್ವಾಮೀಜಿ, ವಿರೇಶ ಸೊಬರದಮಠ ಸೇರಿದಂತೆ ಇತರರಿದ್ದರು.

ಚುನಾವಣೆಗೆ ಸ್ಪರ್ಧಿಸುವ ವಿಚಾರವಿಲ್ಲ

ಹುಬ್ಬಳ್ಳಿ : ಚುನಾವಣೆಗೆ ಸ್ಪರ್ಧೆ ಮಾಡುವ ಯೋಚನೆ ತಮ್ಮ ಮುಂದೆ ಇಲ್ಲ ಹೀಗೀದ್ದರೂ ನಾನು ಪಕ್ಷೇತರರವಾಗಿ ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಷಯ ಹೇಗೆ ಹುಟ್ಟಿತು ಎನ್ನುವುದು ನನಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಮಾಧ್ಯಮ ಗೋಷ್ಠಿಯಲ್ಲಿಂದು ಅವರು ಊಹಾಪೋಹಗಳಿಗೆ ತಾವು ಉತ್ತರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

administrator

Related Articles

Leave a Reply

Your email address will not be published. Required fields are marked *