ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ ವಕೀಲರ ಸಂಘದ ಚುನಾವಣೆ: ತೀವ್ರ ಪೈಪೋಟಿ

ಧಾರವಾಡ : ಇಲ್ಲಿನ ಧಾರವಾಡ ವಕೀಲರ ಸಂಘದ ಆಡಳಿತ ಮಂಡಳಿಗೆ ಇದೇ ದಿ.30 ರಂದು ಚುನಾವಣೆ ಜರುಗಲಿದ್ದು, ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ಸ್ಥಾನಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನ್ಯಾಯವಾದಿ ಅಶೋಕ ಏಣಗಿ ಮತ್ತು ಮಾಜಿ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ ಸ್ಪರ್ಧಿಸಿದ್ದಾರೆ. 1 ಉಪಾಧ್ಯಕ್ಷ ಸ್ಥಾನಕ್ಕೆ ಆಶೀಷ್ ಮಗದುಮ್ಮ, ಸದಾನಂದ ಮುಂದಿನಮನಿ ಮತ್ತು ಸಂತೋಷ ಕಮತರ, 1 ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸುನೀಲ ಗುಡಿ, ಗಿರೀಶಕುಮಾರ ಕಣಸೋಗಿ, ಸಿದ್ದೇಶ ಹೆಬ್ಬಳ್ಳಿ, 1 ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಶೇಖರ ಆಯಟ್ಟಿ, ಪ್ರಕಾಶ ಭಾವಿಕಟ್ಟಿ, ಐ.ಐ. ಶೇಖ, ಖಜಾಂಚಿ ಸ್ಥಾನಕ್ಕೆ ಎಫ್.ಎಸ್.ರಾಮಣ್ಣವರ, ಎಚ್.ಎಸ್.ಕಣಕಿಕೊಪ್ಪ, ಪ್ರಕಾಶ ರಟಗೇರಿ, 1 ಮಹಿಳಾ ಪ್ರತಿನಿಧಿಯ ಸ್ಥಾನಕ್ಕೆ ರೂಪಾ ಕೆಂಗಾನೂರ, ಶ್ರೀಕಲಾ, ಸುರಕೋಡ ಎಸ್.ಬಿ. ಸ್ಪರ್ಧಿಸಿದ್ದಾರೆ.


ಇನ್ನು ಅಡಳಿತ ಮಂಡಳಿಯ 6 ಸ್ಥಾನಗಳಿಗೆ ಶಕ್ತಿಕುಮಾರ ಹಿರೇಮಠ, ಜಿ.ಕೆ.ಬೆಳ್ಳಿಗಟ್ಟಿ, ಚನಬಸಪ್ಪ ಹೆಗ್ಗೇರಿ, ಧನಶೆಟ್ಟಿ ಎಂ.ಎಸ್., ಮಂಜುನಾಥ ಧಾರವಾಡ, ಎಸ್.ಎಸ್.ಕಮತರ, ಮಂಜುನಾಥ ಮಡಿವಾಳರ, ನದೀಂ ರೆಹಮನಾಸಾಬ, ಪ್ರಭಾವತಿ ಎಸ್. ಕಣದಲ್ಲಿದ್ದಾರೆ.


ಈ ಬಾರಿಯೂ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಅಶೋಕ ಏಣಗಿ ತೀವ್ರ ಪ್ರಯತ್ನ ನಡೆಸಿದ್ದರೆ, ಮಾಜಿ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ ಮತ್ತೊಮ್ಮೆ ಕಣಕ್ಕಿಳಿದ ಪರಿಣಾಮ ಫಲಿತಾಂಶ ಕುತೂಹಲ ಮೂಡಿಸಿದೆ. ಈಗಾಗಲೇ ಸದಸ್ಯರನ್ನು ಖುದ್ದಾಗಿ ಭೇಟಿ ಮಾಡಿ ಮತಯಾಚಿಸುತ್ತಿರುವ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ನಿರಂತರ ಪ್ರಯತ್ನ ಮುಂದುವರೆಸಿದ್ದಾರೆ. ಸಂಘದಲ್ಲಿ 2 ಸಾವಿರಕ್ಕೂ ಅಧಿಕ ಸದಸ್ಯರಿದ್ದರೂ ಸದಸ್ಯತ್ವ ನವೀಕರಣ ಇನ್ನಿತರ ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ 943 ಮಾತ್ರ ಅರ್ಹ ಸದಸ್ಯರಿದ್ದಾರೆ. ಡಿ.30 ರಂದು ಚುನಾವಣೆ ನಡೆದು ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ.

administrator

Related Articles

Leave a Reply

Your email address will not be published. Required fields are marked *