ಹುಬ್ಬಳ್ಳಿ-ಧಾರವಾಡ ಸುದ್ದಿ

ಕಲಘಟಗಿ ಖ್ಯಾತ ವೈದ್ಯ ಡಾ.ಎಚ್.ಬಿ.ಪಾಟೀಲ್ ಇನ್ನು ನೆನಪು ಮಾತ್ರ

ಸಚಿವ ಲಾಡ್ ಸೇರಿದಂತೆ ಅನೇಕ ಗಣ್ಯರ ಕಂಬನಿ

ಕಲಘಟಗಿ: ಪಟ್ಟಣದ ಹೆಸರಾಂತ ವೈದ್ಯ ಡಾ.ಎಚ್.ಬಿ. ಪಾಟೀಲ್(75) ಅವರು ಬುಧವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಡಜನರ ಪಾಲಿನ ಸಂಜೀವಿನಿಯಾಗಿದ್ದ ಡಾ.ಹನಮಂತಗೌಡ ಪಾಟೀಲ ನಿಧನರಾಗಿದ್ದು, ಇಡೀ ತಾಲೂಕಿನ ಆರೋಗ್ಯವೇ ಕುಸಿದಂತಾಗಿದೆ.


ಡಾ.ಹನಮಂತಗೌಡ ಬಸನಗೌಡ ಪಾಟೀಲ ಅವರು ಪ್ರೋಗ್ರೇಸಿವ್ ಎಜ್ಯುಕೇಷನ್ ಸೊಸೈಟಿಯ ಸ್ಥಾಪಕರು ಆಗಿದ್ದರು. ಅವರ ನಿಧನದಿಂದ ಸಾವಿರಾರೂ ಜನರು ದುಃಖತಪ್ತರಾಗಿದ್ದಾರೆ.
ಡಾ.ಹನಮಂತಗೌಡ ಅವರು, ಬಡವರ ದೀನದಲಿತರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಲಘಟಗಿ ತಾಲೂಕಿನ ಪ್ರತಿ ಮನೆಗೂ ಪರಿಚಿತರಾಗಿದ್ದರು. ಅವರ ನಿರ್ಗಮನ ಜನರಲ್ಲಿ ನೋವನ್ನುಂಟು ಮಾಡಿದೆ.
ಸಂತಾಪ: ಡಾ. ಪಾಟೀಲ್ ನಿಧನಕ್ಕೆ ಸಚಿವ ಸಂತೋಷ ಲಾಡ್, ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ, ವಿ.ಪಿ. ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *