ಜಾಲತಾಣಗಳಲ್ಲಿ ತೋರ ಒತ್ತಿಯದ್ದೇ ತೀವ್ರ ಚರ್ಚೆ
ಹಾನಗಲ್ : ಹುಬ್ಬಳ್ಳಿಯ ಮೂರು ಸಾವಿರಮಠದ ಶ್ರೀ ಮನ್ಮಹಾರಾಜ ಜಗದ್ಗುರು ಗುರುಶಿದ್ದ ಮಹಾಸ್ವಾಮಿಗಳು ತೀವ್ರ ಆರ್ಥಿಕ. ತೊಂದರೆಯಲ್ಲಿದ್ದಾರೆಯೇ. ಹೀಗೊಂದು ಪ್ರಶ್ನೆ ಹಾನಗಲ್ಲ ಭಕ್ತರಿಗೆ ಸದ್ಯ ಕಾಡತೊಡಗಿದೆ.
“ಬಾದಾಮಿಯ ವೀರ ಪುಲಕೇಶಿ ಸಹಕಾರಿ ಬ್ಯಾಂಕಿನಲ್ಲಿ ಹಾನಗಲ್ಲ ಮಠದ ಆಸ್ತಿಯನ್ನು ಒಂದು ಕೋಟಿ ರೂಪಾಯಿಗಳಿಗೆ ತೋರ ಒತ್ತಿ ಇಟ್ಟವರು ಯಾರು? ಇಡಿಸಿದವರು ಯಾರು? ” ಎಂಬ ಸಂದೇಶ ಕಳೆದೆರಡು ದಿನಗಳಿಂದ ಹಾನಗಲ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
“ಶ್ರೀ ಮಠದ ಆಸ್ತಿಯನ್ನು ಹಾನಗಲ್ಲ ಭಕ್ತರಿಗೆ ಗೊತ್ತಿಲ್ಲದಂತೆ ಅಡವಿಟ್ಟು ಸಾಲ ಯಾವ ಉದ್ದೇಶಕ್ಕೆ ಪಡೆದರು ಎಂಬುದೂ ನಿಗೂಢವಾಗಿದೆ”. “ಮಠದ ಸಲಹಾ ಸಮಿತಿಯ ಸದಸ್ಯರೆ ಕೆಲವರು ಮಠದ ಆಸ್ತಿಯನ್ನು ಖರೀದಿಸಿದ್ದಾರೆ. ” ಎಂದೂ ಭಕ್ತರು ಜಾಲತಾಣದಲ್ಲಿ ಸ್ವಾಮಿಗಳನ್ನು ಪ್ರಶ್ನಿಸಿದ್ದಾರೆ. ಹಾನಗಲ್ಲ ಕುಮಾರಸ್ವಾಮಿಗಳ ಮಠಕ್ಕೆ ತೊಂದರೆ ಆಗಿದೆ ಎಂದರೆ ಸುತ್ತಲಿನ ಹಳ್ಳಿಗಳ ಮುಗ್ದ ಭಕ್ತರು ಕೋಟಿಗಟ್ಟಲೆ ತಂದು ಹಾಕುವಂತಿದ್ದಾರೆ. ಹೀಗಿದ್ದೂ ಮಠದ ಆಸ್ತಿಯನ್ನು ಸ್ವಾಮಿಗಳು ಅಡವಿಟ್ಟು ಮಾಡಿದ್ದಾದರೂ ಏನೆಂದು ನೂರಾರು ಭಕ್ತರು ಸಾಲು ಸಾಲು ಸಂದೇಶಗಳನ್ನು ಜಾಲತಾಣದ ಮೂಲಕ ಕೇಳುತ್ತಿದ್ದಾರೆ.
ಹಾನಗಲ್ಲ, ಅಕ್ಕಿಆಲೂರ,ಹುಬ್ಬಳ್ಳಿ, ಶಿಕಾರಿಪುರ,ಬೆಳಗಾಲ ಪೇಟೆ ಹಾಗೂ ಹಾವೇರಿಗಳಲ್ಲಿರುವ ಆಸ್ತಿಗಳಲ್ಲಿ ಕೆಲವು ಈಗಾಗಲೇ ಬೇರೆಯವರ ಪಾಲಾಗಿವೆ ಎಂದು ಆತಂಕ ವ್ಯಕ್ತಪಡಿಸಿರುವ ಜಾಲತಾಣಿಗರು, ವಿರಕ್ತ ಮಠಗಳು ಸಮಾಜದ ಆಸ್ತಿಯೋ ಸ್ವಾಮಿಗಳ ವೈಯಕ್ತಿಕ ಆಸ್ತಿಯೋ ಎಂದೂ ಪ್ರಶ್ನಿಸಿದ್ದಾರೆ.
ಬಾದಾಮಿಯ ಮಠದ ಆಸ್ತಿಯ ಉತಾರ ಹಾಗೂ ಋಣಭಾರ ತಖ್ತೆಯ ವಿವರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆಸ್ಥಳೀಯ ಭಕ್ತರಿಗೆ ತಮ್ಮ ವ್ಯವಹಾರ ಗೊತ್ತಾಗದಿರಲಿ ಎಂದು ಹಾನಗಲ್ಲ ಮಠದ ಆಸ್ತಿಯನ್ನು ಅಡವಿಡಲು ಅಷ್ಟು ದೂರದ ಬಾದಾಮಿಗೆ ಮೂಜಗು ಹೋದರು ಎನ್ನುತ್ತಿದ್ದಾರೆ ಹಾನಗಲ್ಲಿಗರು.
ಹಾನಗಲ್ಲ ಮಠದ ಎರಡು ಸಮುದಾಯ ಭವನಗಳ ಬಾಡಿಗೆ ಹಣ ಸುಮಾರು 40 ಲಕ್ಷ ರೂಪಾಯಿಗಳು ಮಂಗಮಾಯವಾಗಿವೆ ಅಂತೆ ಹೀಗೆ ಹಲವಾರು ಅಂತೆಕಂತೆಗಳು ಸುರುವಾಗಿವೆ.
ಪ್ರಸ್ತುತ ಹಾನಗಲ್ಲ, ಹುಬ್ಬಳ್ಳಿ, ಮುನವಳ್ಳಿ ಹಾಗೂ ಸಿಂದೋಗಿ ಮಠದ ಒಡೆಯರಾಗಿರುವ ಶ್ರೀ ಗಳು ಹುಬ್ಬಳ್ಳಿ ಜಗದ್ಗರು ಮೂರುಸಾವಿರಮಠದ ಪೀಠಾಧಿಕಾರಿ ಆದ ನಂತರ ಎಲ್ಲೂ ಯಾವ ಬೃಹತ್ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿಲ್ಲ. ಹಾಗಾದರೆ ಮಠದ ದುಡ್ಡು ಏಲ್ಲಿ ಮಾಯವಾಗುತ್ತಿದೆ. ಆಸ್ತಿ ಏಕೆ ಕರಗುತ್ತಿದೆ. ಇದಕ್ಕೆ ಗಿರೀಶನನ್ನು ಕೇಳದೆ ಮೂಜಗು ಉತ್ತರಿಸಬೇಕು ಎಂಬುದು ಜಾಲತಾಣಿಗರ ಆಗ್ರಹವಾಗಿದೆ.
ಸೂಕ್ತ ಸಮಯದಲ್ಲಿ ವಿವರ ನೀಡುವೆ
ಸೂಕ್ತ ಸಮಯದಲ್ಲಿ ನಾನು ಭಕ್ತರ ಹಾಗೂ ಮಠದ ಸಮಿತಿ ಸದಸ್ಯರ ಮುಂದೆ ಈ ವಿಷಯಗಳ ಕುರಿತು ಸ್ಪಷ್ಟೀಕರಣ ನೀಡುವೆ. ನಾನು ಮಠದ ವಾರಸುದಾರ, ಮಠದ ಆಸ್ತಿಯನ್ನು ಸಮಯ ಬಂದಾಗ ಅಡವಿಡಲು ಹಕ್ಕಿದೆ. ಯಾವುದೇ ವ್ಯವಹಾರಗಳನ್ನು ಕದ್ದು ಮುಚ್ಚಿಮಾಡಿಲ್ಲ ಎಂದು ಪತ್ರಿಕೆಗೆ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದ್ದಾರೆ.