ಹುಬ್ಬಳ್ಳಿ-ಧಾರವಾಡ ಸುದ್ದಿ
ಶೆಟ್ಟರ್ ಟಿಕೆಟ್ ತಪ್ಪಿಸಲು ಷಡ್ಯಂತ್ರ!

ಶೆಟ್ಟರ್ ಟಿಕೆಟ್ ತಪ್ಪಿಸಲು ಷಡ್ಯಂತ್ರ!

ಪಂಚಮಸಾಲಿ ಬಾಣದ ಹುನ್ನಾರ

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಧಾರವಾಡ ಮತ್ತು ಹಾವೇರಿ ಎರಡೂ ಕ್ಷೇತ್ರಗಳೂ ಕೈ ತಪ್ಪಿದ ನಂತರ ಬೆಳಗಾವಿಯಿಂದ ಸ್ಪರ್ದಿಸುವಂತೆ ಪಕ್ಷದ ಪ್ರಮುಖರು ಸಲಹೆ ನೀಡಿದ ಬಳಿಕ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದು, ಇನ್ನೇನು ಅಧಿಕೃತ ಘೋಷಣೆಯಷ್ಟೇ ಬಾಕಿ ಇದ್ದು ಈ ಹಂತದಲ್ಲಿ ಅವರಿಗೆ ಟಿಕೆಟ್ ತಪ್ಪಿಸಲು ವ್ಯವಸ್ಥಿತ ಯೋಜನೆ ಹಣೆಯಲಾಗಿದೆ ಎಂಬ ಗುಸು ಗುಸು ದಟ್ಟವಾಗಿದೆ.


ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ನಿಂತರೆ ಸೋಲು ಖಚಿತ ಅಂತಾ ಬಿಂಬಿಸಲು ಅದಕ್ಕೂ ಪೂರ್ವ ಭಾವಿಯಾಗಿ ಶೆಟ್ಟರ್ ವಿರೋಧಿ ಬಣದ ಸಭೆ ನಡೆಸಲಾಗಿದೆ. ಬಿ.ಎಲ್ ಸಂತೋಷ ಬಣದ ಈರಣ್ಣ ಕಡಾಡಿ, ಅಭಯ ಪಾಟೀಲ್ ಪ್ರಭಾಕರ್ ಕೋರೆ ನಿವಾಸದಲ್ಲಿ ಸಭೆ ನಡೆಸಿ ಸ್ಥಳಿಯರಿಗೆ ಟಿಕೆಟ್ ನೀಡಬೇಕು ಎಂದು ಸಣ್ಣಗೆ ಹೇಳಿಕೆ ನೀಡಿದ್ದರೆ. ಇದರ ಮಧ್ಯೆ ಬಸನಗೌಡ ಪಾಟೀಲ್ ಯತ್ನಾಳ ಅವರನ್ನ ದೆಹಲಿ ಕರೆಸಿಕೊಳ್ಳಲಾಗಿದೆ. ಶೆಟ್ಟರ್ ವಿರುದ್ಧ ಯತ್ನಾಳ ಅವರನ್ನ ಮುಂದೆ ಬಿಡುವ ಯತ್ನ ನಡೆದಿದ್ದು ಬೆಳಗಾವಿ ಕ್ಷೇತ್ರ ಶೆಟ್ಟರ್‌ಗೆ ಪೂರಕವಾಗಿಲ್ಲ, ಪಂಚಮಸಾಲಿ ಸಮುದಾಯದಕ್ಕೆ ನೀಡಿದಲ್ಲಿ ಯಶಸ್ವಿಯಾಗಬಹುದು ಎಂಬ ತಂತ್ರ ಮಾಡಲಾಗಿದೆಯಲ್ಲದೇ ಸ್ವತಃ ಮಾಜಿ ಸಚಿವ ರಮೇಶ ಜಾರಕಿಹೊಳಿ ಯತ್ನಾಳ ಬೆಂಬಲಕ್ಕೆ ನಿಂತಿದ್ದು, ಸಂಜೆ ದೆಹಲಿಯಲ್ಲಿ ಸಂಸದಿಯ ಮಂಡಳಿ ಸಭೆ ನಡೆಯಲಿದ್ದು ಸಭೆಗೂ ಮುನ್ನ ಶೆಟ್ಟರ್‌ಗೆ ಟಿಕೆಟ್ ಕೈ ತಪ್ಪಿಸುವ ಯೋಜನೆ ರೂಪಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.


ಈ ಹಿಂದೆ ಟಿಕೆಟ್ ಕೈ ತಪ್ಪಲು ಬಿ.ಎಲ್.ಸಂತೋಷ ಕಾರಣ ಎಂದು ಶೆಟ್ಟರ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ಹೀನಾಯವಾಗಿ ಸೋತು, ಬಿ.ಎಲ್‌ಸಂತೋಷ ಪ್ಲಾನ್ ನಿಂದಲೇ ಪಕ್ಷಕ್ಕೆ ಸೋಲಾಯಿತು ಎಂಬ ವರದಿಗಳು ಹರಿದಾಡಿದವು. ಈಗ ಶೆಟ್ಟರ್ ಪುನಃ ಪಕ್ಷಕ್ಕೆ ಮರಳಿದ್ದು ಬೆಳಗಾವಿ ಸ್ಪರ್ಧಿಸಲು ತಯಾರಿ ನಡೆಸಿರುವುದರಿಂದ ಅವರ ಅಡ್ಡಗಾಲಾಗುವ ಯತ್ನ ನಡೆದಿದೆ ಎನುವ ಮಾತು ಕೇಳಿ ಬರುತ್ತಿದ್ದು, ಸಂಸದೀಯ ಮಂಡಳಿ ಸಭೆಗೂ ಮುನ್ನ ಕ್ಷೇತ್ರದಲ್ಲಿ ಮತ್ತೊಂದು ಸರ್ವೆ ವರದಿ ತರಿಸಿಕೊಳ್ಳಲು ಸಂತೋಷ ಸಿದ್ಧತೆ ನಡೆಸಿದ್ದಾರೆ.


ಶೆಟ್ಟರ್‌ಗೆ ಟಿಕೆಟ್ ಸಿಕ್ಕು ಗೆದ್ದಲ್ಲಿ ಮಂತ್ರಿಯಾಗುವ ಸಾಧ್ಯತೆ ತಪ್ಪಿಸಲು ಬಸವಗೌಡ ಪಾಟೀಲ್ ಯತ್ನಾಳಗೆ ಟಿಕೆಟ್ ಆಮಿಷ ಒಡ್ಡಲಾಗುತ್ತಿದೆ. ಈ ಪ್ಲಾನ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲೇ ಶೆಟ್ಟರ್‌ಗೆ ಟಿಕೆಟ್ ತಪ್ಪಿಸುವ ತಂತ್ರ ಹೆಣೆಯಲಾಗಿದೆ ಎಂಬ ಬಿಜೆಪಿ ಆಂತರಿಕ ವಲಯದಲ್ಲಿ ಹರಿದಾಡುತ್ತಿದೆ.
ಈ ಬೆಳವಣಿಗೆಗಳ ಬೆನ್ನಲ್ಲಿ ಶೆಟ್ಟರ್ ಸಹ ದಿಲ್ಲಿಗೆ ದೌಡಾಯಿಸಿದ್ದಾರೆಂದೂ ಹೇಳಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *