ಹುಬ್ಬಳ್ಳಿ-ಧಾರವಾಡ ಸುದ್ದಿ

’ಪ್ರಾಜೆಕ್ಟ್ ಸಂಜೀವಿನಿ’ಗೆ 4ರಂದು ಚಾಲನೆ

ಐಎಂಎಯಿಂದ ಅರ್ಥಪೂರ್ಣ ಕಾರ್ಯಕ್ರಮ

ಧಾರವಾಡ: ಇಂಡಿಯನ್ ಮೆಡಿಕಲ್ ಅಸೋಶಿಯೇಶನ್, ಧಾರವಾಡ ಘಟಕವು ರೋಟರಿ ಕ್ಲಬ್ ಮಿಡ್‌ಟೌನ್ ಹಾಗೂ ಧಾರವಾಡ ಆಟೋ ಚಾಲಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪ್ರಾಜೆಕ್ಟ್ ಸಂಜೀವಿನಿ ಅನುಷ್ಠಾನದ ಉದ್ಘಾಟನೆ ಮಾ.4 ರಂದು ಸಂಜೆ 6 ಗಂಟೆಗೆ ನಗರದ ಐ.ಎಂ.ಎ. ಹಾಲ್‌ನಲ್ಲಿ ನಡೆಯಲಿದೆ ಎಂದು ’ಪ್ರಾಜೆಕ್ಟ್ ಸಂಜೀವಿನಿ’ ಅನುಷ್ಠಾನ ಸಮಿತಿ ಚೇರಮನ್ ಡಾ.ಪ್ರಕಾಶ ರಾಮನಗೌಡರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಪ್ರಾಜೆಕ್ಟ್ ಸಂಜೀವಿನಿಯು, ಒಬ್ಬ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ತಕ್ಷಣ ಸಿಗಬೇಕಿರುವ ನಿಖರ ಪ್ರಥಮ ಚಿಕಿತ್ಸೆಯ ತರಬೇತಿ ಕಾರ್ಯಕ್ರಮ ಎಂದರು.
ಒಬ್ಬ ವ್ಯಕ್ತಿಗೆ ಹೃದಯಾಘಾತವಾದ ತಕ್ಷಣ ಸರಿಯಾದ ಹಾಗೂ ನಿಖರ ಪ್ರಥಮ ಚಿಕಿತ್ಸೆ (ಸಿಪಿಆರ್) ದೊರೆತಲ್ಲಿ ಆತನ ಪ್ರಾಣ ಉಳಿಯುವ ಸಾಧ್ಯತೆ ಶೇ 60 ರಷ್ಟು ಹೆಚ್ಚುತ್ತದೆ.
ಸಿ.ಪಿ.ಆರ್ ಎಂದರೆ ’ಕಾರ್ಡಿಯೋ ಪಲ್ಮನರಿ ರಿಸರಿಟೇಶನ್’. ಆದರೆ, ನಮ್ಮ ದೇಶದಲ್ಲಿ ಈ ರೀತಿಯ ಪ್ರಥಮ ಚಿಕಿತ್ಸೆ ನೀಡುವ ತರಬೇತಿ ಕೇವಲ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಶಿಕ್ಷಣ ಪಡೆದ ವ್ಯಕ್ತಿಗಳಿಗೆ ಇರುತ್ತದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಇಂಥಹ ತರಬೇತಿ ಪಡೆದವರ ಸಂಖ್ಯೆ ಕಡಿಮೆ. ಹೀಗಾಗಿ ಹೃದಯಾಘಾತವಾದ ವ್ಯಕ್ತಿಯ ನೆರವಿಗೆ ತರಬೇತಿ ಪಡೆದವರು ಧಾವಿಸುವುದು ಕಷ್ಟಸಾಧ್ಯ.
ಪ್ರಥಮ ಹಂತದಲ್ಲಿ 30 ಜನ ಆಟೋ ಚಾಲಕರಿಗೆ ಪ್ರಥಮ ಚಿಕಿತ್ಸೆಯ ತರಬೇತಿ ನೀಡಲಾಗುವುದು. ಮುಂದೆ ಪ್ರತಿ ರವಿವಾರ 30 ಜನರ ತಂಡಗಳಲ್ಲಿ ನಗರದ ಎಲ್ಲ ಆಟೋ ಚಾಲಕರಿಗೆ ಈ ತರಬೇತಿ ನೀಡಲಾಗುವುದು. ಮುಂದಿನ ಹಂತಗಳಲ್ಲಿ ಪೊಲೀಸರು, ಪೌರಕಾರ್ಮಿಕರು, ಸೆಕ್ಯುರಿಟಿ ಗಾರ್ಡಗಳಲ್ಲದೆ, ಎಲ್ಲ ಸಾಮಾನ್ಯರಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಐಎಂಎ ಅಧ್ಯಕ್ಷ ಡಾ.ಸಂದೀಪ ನೀರಲಗಿ ಮಾತನಾಡಿ, ಐಎಂಎ ಹಾಲ್‌ನಲ್ಲಿ ಜರುಗುವ ಕಾರ್ಯಕ್ರಮಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸನಗೌಡ ಕರಿಗೌಡರ ಯೋಜನೆಗೆ ಚಾಲನೆ ನೀಡುವರು. ರೋಟರಿ ಡಿಸ್ಟಿಕ್ಸ್ ೩೭೧೦ ದ ಅಸಿಸ್ಟಂಟ್ ಗೌವರ್‍ನರ್ ಡಾ.ಕವನ ದೇಶಪಾಂಡೆ, ಧಾರವಾಡ ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವಾನಂದ ನಿಗದಿ, ಕಾರ್ಯದರ್ಶಿ ಸುಭಾಸ ಸುಣಗಾರ ಸೇರಿದಂತೆ ಇತರರು ಭಾಗವಹಿಸುವರು ಎಂದರು.
ರೋಟರಿ ಮಿಡ್‌ಟೌನ್‌ನ ಕಾರ್ಯದರ್ಶಿ ಹರ್ಷ ತುರಮರಿ, ಧಾರವಾಡ ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವಾನಂದ ನಿಗದಿ, ಕಾರ್ಯದರ್ಶಿ ಸುಭಾಸ ಸುಣಗಾರ ಮತ್ತಿತರರು ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *