ಒಂದು ಲಕ್ಷ ನೀಡಿ ಗೌರವಿಸಿದ ವಿದ್ಯಾನಿಕೇತನ
ಹುಬ್ಬಳ್ಳಿ: ಹುಬ್ಬಳ್ಳಿಯ ಚೌಗಲಾ ಶಿಕ್ಷಣ ಸಂಸ್ಥೆಯ ಭೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಮೃದ್ಧ ಶೇಖರ ಶೆಟ್ಟಿ ಸಿಇಟಿಯಲ್ಲಿ ಇಂಜನೀಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಚೌಗಲಾ ಒಂದು ಲಕ್ಷ ರೂ ನೀಡಿ ಸಿಹಿ ತಿನ್ನಿಸಿ ಸನ್ಮಾನಿಸಿದರು.
ಇಂದು ಪಾಲಕರೊಂದಿಗೆ ಹಾಜರಾಗಿದ್ದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತಲ್ಲದೇ ಈತ ಬಿ ಫಾರ್ಮಸಿ ಮತ್ತು ಡಿ ಫಾರ್ಮಸಿಯಲ್ಲಿ ರಾಜ್ಯಕ್ಕೆ 11ನೇ ರ್‍ಯಾಂಕ್ ಪಡೆದಿದ್ದಾನೆಂದು ಹೇಳಿದರು.
ಸಂಸ್ಥೆಯ ಚೇರಮನ್ ಶ್ರೀದೇವಿ ಚೌಗಲಾ, ನಿರ್ದೇಶಕರಾದ ಗಂಗಾಧರ ಕಮಡೊಳ್ಳಿ, ರಮೇಶ ಭಂಡಿವಾಡ, ಪ್ರಾಂಶುಪಾಲ ಡಾ.ಮುಳಗುಂದ ಇವರುಗಳು ಈ ಸಂದರ್ಭದಲ್ಲಿದ್ದರು.
ತಂದೆ ಶೇಖರ ಶೆಟ್ಟಿ ತೋಟಬೈಲ, ತಾಯಿ ಜ್ಯೋತಿ ಎಸ್ ಶೆಟ್ಟಿ ತೋಟಬೈಲ ಇವರುಗಳಿಗೂ ಮಗನ ಸಾಧನೆ ಹಿರಿಮೆ ತಂದಿದೆ.
ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಿಇಟಿ ಪರೀಕ್ಷೆಯಲ್ಲಿಗಣನೀಯ ಸಾಧನೆ ಸಾಧಿಸಿದ್ದಾರೆ.
ಇಂಜನಿಯರಿಂಗ್ ವಿಭಾಗದಲ್ಲಿ 1000ಕ್ಕಿಂತ ಕಡಿಮೆ ರ್‍ಯಾಂಕ್‌ನ್ನು 11 ವಿದ್ಯಾರ್ಥಿಗಳು ಪಡೆದಿದ್ದಾರೆ. ಸಮೃದ್ಧ ಶೆಟ್ಟಿ ರಾಜ್ಯಕ್ಕೆ 3 ನೇ ರ್‍ಯಾಂಕ್, ಸುಮೂಖ್ ಹೆಗಡೆ ರಾಜ್ಯಕ್ಕೆ 91 ನೇ ರ್‍ಯಾಂಕ್, ಅಜಿತ ಕೋಳಿ (236), ಲಕ್ಷ್ಮೀ ಸಮೋರೆಕರ (439), ಶ್ರೇಯಾಂಶ ಆಲಪ್ಪನ್ನವರ (505), ಶಂಶಾಕ ಹುಗ್ಗಿ (633), ಸಾಯಿಶ್‌ಗೋಣಿ (674), ಸಹನಾ ಆರ್ (782), ವಾಸುದೇವ ಶಿರೂರ(945), ಉದಯ ಪಿ (977), ಭೂಮಿಕಾ ಅರಳಿ (999) ರ್‍ಯಾಂಕ್ ಪಡೆದಿರುತ್ತಾರೆ.
ವೇಟರ್‍ನರಿ / ಬಿ.ಎಸ್ಸಿ. ನರ್ಸಿಂಗ್ ವಿಭಾಗದಲ್ಲಿ 1000ಕ್ಕಿಂತ
ಕಡಿಮೆ ರ್‍ಯಾಂಕ್‌ನ್ನು 7 ವಿದ್ಯಾರ್ಥಿಗಳು ಪಡೆದಿದ್ದಾರೆ. ಲಕ್ಷ್ಮೀ ಸಮೋರೆಕರ (148), ಅನನ್ಯಾ ಪಾಟೀಲ್ (205), ಸಾಯಿಶ್‌ಗೋಣಿ (226),ಶಂಶಾಕ ಹುಗ್ಗಿ (352), ಸೋಹಂ ಅಂತರಗಂಗಿ (717), ಸಂಗೀತಾ ಹುನಗುಂದ (775), ವಾಸುದೇವ ಶಿರೂರ (964).
ಅಗ್ರಿಕಲ್ಚರ್ ವಿಭಾಗದಲ್ಲಿ1000ಕ್ಕಿಂತಕಡಿಮೆರ್‍ಯಾಂಕ್ ಬಂದ 10 ವಿದ್ಯಾರ್ಥಿಗಳು: ಲಕ್ಷ್ಮೀ ಸಮೋರೆಕರ (70), ಸುಮೂಖ್ ಹೆಗಡೆ (84), ಸಾಯಿಶ್‌ಗೋಣಿ (130), ಶಂಶಾಕ ಹುಗ್ಗಿ (173),ಅನನ್ಯಾ ಪಾಟೀಲ್ (291), ಭೂಮಿಕಾ ಅರಳಿ (301), ವಾಸುದೇವ ಶಿರೂರ (318), ಶ್ರೇಯಾಂಶ್ ಆಲಪ್ಪನ್ನವರ (377), ಸಂಗೀತಾ ಹುನಗುಂದ (605) ,ದರ್ಶನ ಪಾಟೀಲ್ (649).
ಬಿ.ಎನ್.ವೈ.ಎಸ್. ವಿಭಾಗದಲ್ಲಿ 10000ಕ್ಕಿಂತ ಕಡಿಮೆ ರ್‍ಯಾಂಕ್ ಬಂದ 6 ವಿದ್ಯಾರ್ಥಿಗಳು :
ಲಕ್ಷ್ಮೀ ಸಮೋರೆಕರ (97),ಸಾಯಿಶ್‌ಗೋಣಿ (144), ಶಂಶಾಕ ಹುಗ್ಗಿ (368), ವಾಸುದೇವ ಶಿರೂರ (649), ಭೂಮಿಕಾ ಅರಳಿ (881), ಸೋಹಂ ಅಂತರಗಂಗಿ (991).
ಬಿ. ಫಾರ್ಮಸಿ ವಿಭಾಗದಲ್ಲಿ 10000 ಕ್ಕಿಂತ ಕಡಿಮೆ ರ್‍ಯಾಂಕ್ ಬಂದ 9 ವಿದ್ಯಾರ್ಥಿಗಳು :
ಸಮೃದ್ಧ ಶೆಟ್ಟಿ (11), ತೇಜಸ್ಸರೆಡ್ಡಿ ಡಿ.ಸಿ (45), ಲಕ್ಷ್ಮೀ ಸಮೋರೆಕರ (220), ಸುಮೂಖ್ ಹೆಗಡೆ (293), ಅನನ್ಯಾ ಪಾಟೀಲ್ (307), ಸಾಯಿಶ್‌ಗೋಣಿ (338), ಶಂಶಾಕ ಹುಗ್ಗಿ (486), ಅಜಿತ ಕೋಳಿ (762), ಸೋಹಂ ಅಂತರಗಂಗಿ (994).
ಒಟ್ಟು ಎಲ್ಲ ವಿಭಾಗಗಳನ್ನು ಸೇರಿಸಿ 1000 ಕ್ಕಿಂತ ಕಡಿಮೆ 49 ರ್‍ಯಾಂಕ್ ಮಹಾವಿದ್ಯಾಲಯಕ್ಕೆ ಬಂದಿವೆ.