ಹುಬ್ಬಳ್ಳಿ-ಧಾರವಾಡ ಸುದ್ದಿ

ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡಕ್ಕೆ ಜಯ

ಅರಶಲಮ್ ದ್ವಿಶತಕ, ಪ್ರಹ್ಲಾದ ಶತಕ, ವಸಂತ ಅರ್ಧ ಶತಕ

ಹುಬ್ಬಳ್ಳಿ: ಅರಶಲಮ್ ಎಂ 206(130ಎ, 24×4, 7×6), ಪ್ರಹ್ಲಾದ ನಾಯಕ 100(104ಎ,7×4, 3×6), ವಸಂತ ಕುಡೇರ 59(41ಎ, 7×4, 3×6) ಇವರ ಮಿಂಚಿನ ಬ್ಯಾಟಿಂಗ್ ನಿಂದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡ ಆನಂದ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ಎ ತಂಡದ ವಿರುದ್ಧ 102 ರನ್ ಗಳಿಂದ ಜಯ ಗಳಿಸಿತು.


ಇಲ್ಲಿಯ ಜಿಮಖಾನ ಮೈದಾನದಲ್ಲಿ ನಡೆದ ಕೆಎಸ್‌ಸಿಎ ಧಾರವಾಡ ವಲಯದ ಫಸ್ಟ್ ಡಿವಿಜನ್ ಲೀಗ್ ಪಂದ್ಯದಲ್ಲಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡ ಟಾಸ್ ಗೆದ್ದು 50 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 414 ರನ್ ಗಳಿಸಿತು. ತಂಡದ ಪರ ಅರಶಲಮ್ ಎಂ 206(130ಎ, 24×4, 7×6), ಪ್ರಹ್ಲಾ ನಾಯಕ 100(104ಎ, 7×4, 3×6), ವಸಂತ ಕುಡೇರ 59(41ಎ, 7×4, 3×6) ರನ್ ಗಳಿಸಿದರು. ಪಂಕಜ್ ಸುತಾರ 9-0-61-2, ಭೂಷಣ 10-01-81-2ವಿಕೆಟ್ ಪಡೆದರು.


ಈ ಬೃಹತ್ ಮೊತ್ತ ಬೆನ್ನತ್ತಿದ ಆನಂದ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ಎ ತಂಡ 50 ಓವರ್ ನಲ್ಲಿ 9ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತು.

ತಂಡದ ಪರ ರಿಹಾನ್ ಅಲಿ 62(73ಎ, 7×4), ಯಶ್ ಕಳಸನ್ನವರ 74(53ಎ, 9×4, 5×6), ರೋಹಿತ ಪಾಟೀಲ 58, (30ಎ, 5×4, 5×6) ಉತ್ತಮ ಬ್ಯಾಟಿಂಗ್ ಆಡಿದರು. ರಾಜೇಂದ್ರ ಡಂಗನವರ 10-01-33-3, ನವೀನ ಗಡದಿನ್ನಿ 10-03-40-2ವಿಕೆಟ್ ಪಡೆದರು.

 

administrator

Related Articles

Leave a Reply

Your email address will not be published. Required fields are marked *