ಒಟ್ಟು 5.40 ಲಕ್ಷರೂ ಬಹುಮಾನ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬಾನಗಿತ್ತಿ ಗುಡಿಹಾಳ ಗ್ರಾಮದಲ್ಲಿ ಮಾ.19 ರಿಂದ 21ರವರೆಗೆ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.
ಬಾನಗಿತ್ತಿ ಗುಡಿಹಾಳ ಕುಸ್ತಿ ಗೆಳೆಯರ ಬಳಗ, ಕರ್ನಾಟಕ ರಾಜ್ಯ ಕುಸ್ತಿ ಸಂಘ ಹಾಗೂ ಧಾರವಾಡ ಜಿಲ್ಲಾ ಕುಸ್ತಿ ಸಂಘದ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಕೆಪಿಸಿಸಿ ಸಂಯೋಜಕ ಮದನ ಕುಲಕರ್ಣಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪುರುಷರ ವಿಭಾಗದಲ್ಲಿ 28 ರಿಂದ 29 ಕೆಜಿ ಪ್ಲಸ್‌ವರೆಗೆ 14 ವಿಭಾಗಗಳಲ್ಲಿ, ಮಹಿಳೆಯರ ವಿಭಾಗದಲ್ಲಿ 27 ರಿಂದ 57 ಕೆಜಿ ಪ್ಲಸ್‌ವರೆಗೆ 10 ವಿಭಾಗ ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸುನಿಲ ಪಡತರೆ, ಸಂಗಮೇಶ ಬಿರಾದಾರ ಸೇರುದಣತೆ ೫೦೦ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದರು.
ಏಳು ವಿಭಾಗಗಳಲ್ಲಿ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ನೀಡಲಾಗು ತ್ತದೆ. ಒಟ್ಟು 5.40 ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿದೆ ಎಂದರು.
19ಕ್ಕೆ ಕುಸ್ತಿಪಟುಗಳ ಎತ್ತರ, ತೂಕ ತಪಾಸಣೆ ಮಾಡಲಿದ್ದು, 20ರ ಬೆಳಿಗ್ಗೆ 7 ಗಂಟೆಯಿಂದಲೇ ಕುಸ್ತಿ ಪಂದ್ಯಾವಳಿ ಆರಂಭವಾಗಲಿದೆ. ಪಂದ್ಯಾವಳಿಯನ್ನು ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಉದ್ಘಾಟಿಸ ಲಿದ್ದಾರೆ. ಗುರುನಾಥ ದಾನವೇನವರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎಂ. ನಿಂಬಣ್ಣವರ, ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗುರುನಾಥ ದಾನವೇನವರ, ಕಿರಣ ಪಾಟೀಲ ಕುಲಕರ್ಣಿ, ಶಿವಲಿಂಗಪ್ಪ ಕುಂದರಗಿ, ಅಜ್ಜಪ್ಪ ನಡವಿನಮನಿ, ಫಕೀರಪ್ಪ ಕಣವಿ ಗೋಷ್ಠಿಯಲ್ಲಿದ್ದರು.