ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ ಕಲಬುರಗಿ,ಬೆಳಗಾವಿ ಸಹಿತ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿಯಾಗುವುದು ಪಕ್ಕಾ ಆಗಿದೆ.
‘ಸಂಜೆ ದರ್ಪಣ’ ದಿ.೧೫ರ ಸಂಚಿಕೆಯಲ್ಲಿ ಮುಂದಿನ ವಾರ ಚುನಾವಣಾ ಆಯೋಗ ಸಂಬAಧಿಸಿದ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ತದನಂತರ ದಿನಾಂಕ ಪ್ರಕಟಿಸುವರೆಂಬ ಊಹೆ ನಿಜವಾಗಿದೆ.
ದಿ.೧೯ರಂದು ಚುನಾವಣಾ ಆಯೋಗದ ಆಯುಕ್ತರು ಧಾರವಾಡ ಜಿಲ್ಲಾಧಿಕಾರಿ ಅವರೊಂದಿಗೆ ಸಂವಾದ ನಡೆಸಲಿದ್ದು ಅಂದೇ ಸಾಯಂಕಾಲ ಚುನಾವಣೆ ಘೋಷಣೆ ನಿಶ್ಚಿತ ಎಂಬ ಮಾತು ಆಡಳಿತ ಪಕ್ಷದ ಅಂಗಳದಿAದಲೇ ಕೇಳಿ ಬರಲಾರಂಭಿಸಿದೆ.
ಆಯೋಗದ ಸೂಚನೆಯಂತೆ ಕಳೆದ ದಿ.೯ರಂದು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಎಸ್ ಸಿ ಮೀಸಲಾತಿ ಅನ್ಯಾಯ, ವಾರ್ಡ ಮೀಸಲಾತಿ ತಾರತಮ್ಯ, ಪೂರ್ವದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಹಿನ್ನೆಲೆಯಲ್ಲಿ ಹೈಕೋರ್ಟಗೆ ರಿಟ್ ಅರ್ಜಿ ಸಲ್ಲಿಕೆಯಾಗಿದ್ದರೂ ಆಯೋಗ ಮಾತ್ರ ಚುನಾವಣೆಗೆ ಸಿದ್ದತೆ ನಡೆಸಿದೆ.
ಅಲ್ಲದೇ ಮಹಾನಗರಪಾಲಿಕೆಗೆ ಚುನಾವಣೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದು, ಮತದಾರರ ಅಂಕಿ, ಮತದಾನ ಕೇಂದ್ರಗಳ ಪಟ್ಟಿ, ವಾರ್ಡ ಮತಗಟ್ಟೆಗಳಿಗೆ ಅನುಸಾರವಾಗಿ ಸಿಬ್ಬಂದಿ ನೇಮಕ ಅಲ್ಲದೇ ತರಬೇತಿ ಮತ್ತು ಎಲೆಕ್ಟಾçನಿಕ್ ಮತಯಂತ್ರಗಳ ಸಂಗ್ರಹಿಸಲು ಸೂಚನೆ ನೀಡಿರುವುದು ಚುನಾವಣೆ ಪಕ್ಕಾ ಆಗಿದ್ದು ಎಲ್ಲರ ಚಿತ್ತ ದಿ.೧೯ರಂದು ಆಯೋಗ ಕೈಗೊಳ್ಳುವ ನಿರ್ಣಯದತ್ತ ನೆಟ್ಟಿದೆ.
ಕಳೆದ ೨೮ ತಿಂಗಳಿನಿAದ ಪಾಲಿಕೆಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ ಅಲ್ಲದೇ ಮತದಾರರ ಪಟ್ಟಿ ಪ್ರಕಟಗೊಂಡ ೪೫ ದಿನಗಳೊಳಗೆ ಚುನಾವಣೆ ನಡೆಸುವುದಾಗಿ ಹೈಕೋರ್ಟಗೆ ಆಯೋಗ ಹೇಳಿರುವುದರಿಂದ ಚುನಾವಣೆ ನಿಶ್ಚಿತವಾಗಿದ್ದು ದಿನಾಂಕದ ಕುತೂಹಲ ಮಾತ್ರ ಇದೆ.
ಅಲ್ಲದೇ ಮಹಾನಗರ ಬಿಜೆಪಿಯವರು ಭರದ ಸಿದ್ದತೆ ಆರಂಭಿಸಿದ್ದು ಈಗಾಗಲೇ ಒಂದು ವಾರದೊಳಗೆ ಎಲ್ಲ ಸಂಘಟನಾ ಪ್ರಕ್ರಿಯೆ ಮುಗಿಸಲು ಸೂಚಿಸಿದ್ದು ಚುನಾವಣೆ ಅಗಸ್ಟ ತಿಂಗಳಾAತ್ಯದೊಳಗೆ ನಿಕ್ಕಿ ಎಂಬುದಕ್ಕೆ ಪೂರಕವಾಗಿದೆ.