ಹುಬ್ಬಳ್ಳಿ-ಧಾರವಾಡ ಸುದ್ದಿ
ಸಮಾನತೆ ಬೋಧಿಸಿದ ದೇವಮಾನವ

ಸಮಾನತೆ ಬೋಧಿಸಿದ ದೇವಮಾನವ

ಬಸವ ಜಯಂತಿ ಒಂದು ಸುಂದರವಾದ ಕಾರ್ಯಕ್ರಮ ಏಕೆಂದರೆ, ಈಗಿನ ನಮ್ಮ ಸಮಾಜದ ಪರಿಸ್ಥಿತಿಗೆ ಒಂದು ಆಚರಣೆ ಅತ್ಯಂತ ಅವಶ್ಯಕ.
ಬಸವಣ್ಣ ನಿಷ್ಕಪಟನಾದ ಭಕ್ತಿ ಯೋಗಿ. ಆತನು ಸದಾಚಾರಿ ಲಿಂಗಂ ಇಷ್ಟ ಭಕ್ತಿ ಭಂಡಾರಿ. ಆದರೆ ಆತನಿಗೆ ಹೊರಗಿನವರ ಮೆಚ್ಚುಗೆಯನ್ನು ಅಗತ್ಯವಿಲ್ಲ. ಆತನಿಗೆ ಬೇಕಾದದ್ದು ಸ್ಥಿತಿಯನ್ನು ಎದುರಿಸಬಲ್ಲ ಕಲಾದರ್ಶನ ಬ್ರಹ್ಮಾನಂದ ಅದುವರೆಗೂ ಅವನು ತೀವ್ರವಾದ ವೇದನೆಯನ್ನು ಅನುಭವಿಸಿದನು. ಹೊಗಳಿಕೆ -ತೆಗಳಿಕೆ ಎರಡನ್ನೂ ಸರಿಸಮಾನವಾಗಿ ಅವರು ತೆಗೆದುಕೊಳ್ಳುತ್ತಿದ್ದರು.


ಬಸವಣ್ಣನ ಸಂಘಟನೆಯಲ್ಲಿ ಜಾತ್ಯತೀತ ಸಮಾಜದ ವ್ಯವಸ್ಥೆ ಕಂಡುಬರುತ್ತದೆ ಕಾಯಕದ ಮಹತ್ವವನ್ನು ಎತ್ತಿ ಹಿಡಿದು ಎಲ್ಲರೂ ಸಮಾನರೆಂಬ ಸರ್ವಸಮಾನತೆಯನ್ನು ಬೋಧಿಸಿದ ದೇವಮಾನವ ಆಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಗುರು-ಲಿಂಗ-ಜಂಗಮ ದಲ್ಲಿ ಎರಡು ಅರಿಯದ ಭಕ್ತಿಯನ್ನು ಬೆಳೆಸಿಕೊಂಡಿದ್ದರು ಬಸವಣ್ಣನವರು. “ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ, ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ ಕೂಡಲಸಂಗಮದೇವ ನಿಮ್ಮ ಚರಣಕಮಲದೊಳಗಾನು ತುಂಬಿ”, ಎಂದು ಹೇಳಿದ ಅವರ ಅಪಕ್ವವಾಗಿದ್ದ ಮನಸ್ಸು ಸತತವಾದ ಪರಿಶ್ರಮದಿಂದ ಪರಿಪಕ್ವತೆಯನ್ನು ಪಡೆಯಿತು. ಬೇಡುವವನು ನೀಡುವವನು ಮಾಡುವವನು ಶಿವನೇ ಹೊರತು ನಾನಲ್ಲ ಎನ್ನುವ ಮಟ್ಟಿಗೆ ಅವರ ಭಕ್ತಿ ಭಂಡಾರ ತುಂಬಿಹೋಯಿತು. ಸಮಾಜದಲ್ಲಿದ್ದ ಕೊಳೆ ಕಸಗಳನ್ನು ತೊಳೆದು ಓರೆಕೋರೆಗಳನ್ನು ತಿದ್ದುವ ಕಷ್ಟದಲ್ಲಿ ಕಂಕಣಬದ್ಧನಾಗಿ ನಿಂತ ಬಸವಣ್ಣನಿಗೆ ಸಾಕಷ್ಟು ಅಡ್ಡಿ-ಆತಂಕಗಳು, ಪ್ರತಿಭಟನೆಗಳು ನಿಂದಿ ನಿಷ್ಠುರ ಗಳು ಇದಿರಾ ಆದರೂ ಕೂಡ ಅವುಗಳಿಗೆ ಭಯಪಡದೆ ನ್ಯಾಯಪರವಾಗಿ ನಿಂತರು. ಅದಕ್ಕೆ ಅವರು ಹೇಳುವ ಉತ್ತರ ವಚನದಲ್ಲಿ ಈ ರೀತಿಯಾಗಿದೆ.


“ಆರು ಮುನಿದು ಎಮ್ಮನೇನ ಮಾಡುವರು? ಊರು ಮುನಿದು ನಮ್ಮನ್ನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸ ಕೊಡಬೇಡ! ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ! ಆನೆಯ ಮೇಲೆ ಹೋಹನ ಶ್ವಾನ ಕಚ್ಚ ಬಲ್ಲುದೆ?” ಎನ್ನುತ್ತಾರೆ. ಮನುಷ್ಯನ ವ್ಯಕ್ತಿತ್ವ ವಿಕಾಸಗೊಳ್ಳುವುದು ಅವನ ತನುಮನ ಮತ್ತು ಆತ್ಮ ಎಂಬ ಮೂರು ಅಂಗಗಳ ಮೂಲಕ ಎಂದು ಅವರು ನಂಬಿದ್ದರು. ಅವುಗಳನ್ನು ಸರಿಯಾಗಿ ಹಿಂಗೀಸಿದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ತನುವಿನ ಹಸುವನ್ನು ಆಹಾರ ನೀಡುವ ಮೂಲಕ ತೃಪ್ತಿಗೊಳಿಸಿದರೆ, ಮನದ ಹಸಿವನ್ನ ಸಾಹಿತ್ಯ ಸಂಗೀತ ಮೊದಲಾದ ವಿಚಾರಗಳ ಮೂಲಕ ಹಿಂಗಿಸಬೇಕು. ಆಧ್ಯಾತ್ಮದ ಹಸಿವನ್ನು ಆಧ್ಯಾತ್ಮ ಅನುಭವ ಶರಣರ ಮಹಾತ್ಮರ ಅನುಭವ ಅಮೃತವನ್ನು ಉಣಿಸುವ ಮೂಲಕ ತೃಪ್ತಿಗೊಳಿಸಬೇಕು. ಹೀಗೆ ತನು-ಮನ- ಆತ್ಮಗಳು ಸಂಸ್ಕಾರ ಹೊಂದಿ ಸಮಾನ ವಿಕಾಸವನ್ನು ಹೊಂದುವುದೇ ನಿಜವಾದ ಪೂರ್ಣ ವ್ಯಕ್ತಿತ್ವದ ಲಕ್ಷಣ. ಇದು ಒಮ್ಮೆಲೆ ಸಾಧ್ಯವಿಲ್ಲ ಹಂತಹಂತವಾಗಿ ಕ್ರಿಯೆ ನಡೆಯುತ್ತಾ ಕೊನೆಗೆ ಪರಿಪೂರ್ಣತೆ ಯಲ್ಲಿ ಪೂರ್ಣವಾಗುತ್ತದೆ. ಹೀಗೆ ನಂಬಿದ ಬಸವಣ್ಣನವರು ನಮ್ಮ ವ್ಯಕ್ತಿತ್ವ, ನಮ್ಮ ಸಮಾಜ, ಸಂಸ್ಕೃತಿ, ಸಾಧ್ಯತೆಗಳನ್ನು ಮೆರೆಸುವ ವಿಕಾಸಗೊಳಿಸುವ ಹೊಸತು ನಮಗೆ ನಿಷಿದ್ಧ. ಅವುಗಳನ್ನು ಉಜ್ವಲಗೊಳಿಸುವ ಹೊಸತಿಗೆ ಸ್ವಾಗತಿಸೋಣ ಎನ್ನುತ್ತಾ ಅವರು ಎಲ್ಲದಕ್ಕೂ ಹೊಸತನವನ್ನು ನೀಡುವ ಕೆಲಸವನ್ನು ಮಾಡಿದರು. ಮುಖ್ಯವಾಗಿ ಅವರು ನಂಬಿದ್ದು ಸೊಪ್ಪಿರಲಿ, ನುಚ್ಚು ನೀರು ಇರಲಿ, ಮುರುಕು ಮನೆ,ಹರಕು ಗುಡಿಸಲಿರಲಿ, ತಾನು ಮಾಡಿದ ಕಾಯಕಕ್ಕೆ ಬಂದ ದ್ರವ್ಯದಿಂದ ಲ್ಲದೆ ದೇವನಿಗೆ ನಾನು “ದಾಸೋಹಂ” ಭಾವ ದಲ್ಲಿದ್ದು ಭಕ್ತಿಯಾಗಿ ದೇವನಿಗೆ ಪ್ರತಿನಿತ್ಯ ಅರ್ಥವಾಗಬೇಕೆಂದರೆ ನಾನು ಮಾಡುವ ಕಾಯಕ ಸತ್ಯವಾಗಿರಬೇಕು ಶುದ್ಧವಾಗಿರಬೇಕು. ಎಂದು ನಂಬಿದವರು. ಅದರಂತೆ ಅನೇಕ ಶರಣರು ತಮ್ಮ ವಚನಗಳಲ್ಲಿ ಈ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿದರು. ” ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು. ಲಿಂಗಪೂಜೆಯಾದಡೂ ಮರೆಯಬೇಕು. ಜಂಗಮ ಮುಂದಿದ್ದರೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗ ವಾಯಿತ್ತಾದಡು ಕಾಯಕದೊಳಗು ” ಎಂದು ಆಯ್ದಕ್ಕಿ ಲಕ್ಕಮ್ಮ ಹೇಳುತ್ತಾರೆ.

ಈ ರೀತಿಯ ವಚನಗಳು ಅವರು ಬದುಕಿದ ರೀತಿ ಇಂದಿಗೂ ಕೂಡ ನಮಗೆ ಆದರ್ಶಪ್ರಾಯ ಒಂದು ಜಯಂತಿ ಆಚರಣೆಯಲ್ಲಿ ನಾವು ಕೂಡ ಈ ರೀತಿಯ ಬದುಕನ್ನು ಬದುಕುವ ಭರವಸೆಯೊಂದಿಗೆ ಇರೋಣ ಎನ್ನುತ್ತಾ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು

Dr.bhagyajyoti kotimath

ಡಾ.ಭಾಗ್ಯಜ್ಯೋತಿ ಕೋಟಿಮಠ,
ಮುಖ್ಯಶಿಕ್ಷಕಿ, ಶಿರೂರು

 

administrator

Related Articles

Leave a Reply

Your email address will not be published. Required fields are marked *