ಹುಬ್ಬಳ್ಳಿ-ಧಾರವಾಡ ಸುದ್ದಿ
ಅಪ್ಪನ ಜವಾಬ್ದಾರಿ ಗೌರವಿಸುವ ದಿನ

ಅಪ್ಪನ ಜವಾಬ್ದಾರಿ ಗೌರವಿಸುವ ದಿನ

ಇಂದು, ಜೂನ್ 21 ವಿಶ್ವ ಅಪ್ಪಂದಿರ ದಿನಾಚರಣೆ. ಹೆತ್ತವರನ್ನು ಗೌರವಿಸುವುದೆಂದರೆ ದೇವರನ್ನು ಗೌರವಿಸಿದಂತೆ. ತಂದೆಯ ಹಿಂದಿರುವ ಸಹನೆ, ಶ್ರಮಗಳನ್ನು ಗೌರವಿಸುವ ದಿನವೇ ವಿಶ್ವ ಅಪ್ಪಂದಿರ ದಿನ.
ಪಿತೃ ದೇವೋಭವ ಎಂದು ಉಚ್ಚರಿಸುವ ಪ್ರತಿ ಕ್ಷಣವೂ ಅಪ್ಪನೇ ಕಣ್ಮುಂದೆ ಬರುತ್ತಾರೆ. ಹೌದು, ಮಗುವೊಂದಕ್ಕೆ ಅಮ್ಮನಂತೆ ಅಪ್ಪನ ಪೆÇೀಷಣೆಯೂ ತುಂಬಾ ಮುಖ್ಯ. ಹುಟ್ಟಿದಾಗಿನಿಂದ ಮಗುವಿನ ಎಲ್ಲ ಸಣ್ಣ , ದೊಡ್ಡ ಬೇಡಿಕೆಗಳನ್ನು ಎಷ್ಟೇ ಕಷ್ಟವಾದರೂ ಯೋಚಿಸದೆ ಪೂರೈಸುವ ಮನಸ್ಸಿರುವುದು ಅಪ್ಪನಿಗೆ ಮಾತ್ರ. ಅಪ್ಪನ ಹತ್ತಿರ ಸ್ವಾರ್ಥ ಎಂಬ ಪದಕ್ಕೆ ಅರ್ಥವೇ ಇಲ್ಲ.
“ರಾಷ್ಟ್ರದ ತಂದೆಯಾಗುವುದು ದೊಡ್ಡ ಗೌರವ, ಆದರೆ ಕುಟುಂಬದ ತಂದೆಯಾಗುವುದು ಹೆಚ್ಚಿನ ಸಂತೋಷ.” ಎಂದು ನೆಲ್ಸನ್ ಮಂಡೇಲಾ ಹೇಳಿರುವ ಮಾತು ತಂದೆ ಮಹತ್ವವನ್ನು ಸಾರುತ್ತದೆ.
ಇದರ ಮಧ್ಯಯೂ “ಹುಡುಗಿಯ ಮೊದಲ ನಿಜವಾದ ಪ್ರೀತಿ ಅವಳ ತಂದೆ.”ಯಾಗಿರುತ್ತಾನೆ. “ತಂದೆಯ ಕಣ್ಣೀರು ಮತ್ತು ಭಯಗಳು ಕಾಣದವು, ಅವನ ಪ್ರೀತಿ ವಿವರಿಸಲಾಗದು, ಆದರೆ ಅವನ ಕಾಳಜಿ ಮತ್ತು ರಕ್ಷಣೆ ನಮ್ಮ ಜೀವನದುದ್ದಕ್ಕೂ ಶಕ್ತಿಯ ಆಧಾರ ಸ್ತಂಭವಾಗಿ ಉಳಿದಿದೆ.” ಹಾಗಾಗಿಯೇ ಅವಳು ಏಕಾಂಗಿಯಾಗಿ ನಿಲ್ಲಲಿಲ್ಲ, ಆದರೆ ಅವಳ ಹಿಂದೆ ನಿಂತಿರುವುದು, ಅವಳ ಜೀವನದ ಅತ್ಯಂತ ಶಕ್ತಿಯುತವಾದ ನೈತಿಕ ಶಕ್ತಿ, ಅವಳ ತಂದೆಯ ಪ್ರೀತಿ. ಅದಕ್ಕೆ ವಿಶೇಷವಾಗಿ ಮಗಳಿಗೆ ತಂದೆ ಎಂದರೆ ಅಷ್ಟು ಪ್ರೀತಿ.(ಈ ಸಂದರ್ಭದಲ್ಲಿ ನನಗೆ ನೆನಪಾದದ್ದು ಕೆ.ಎಚ್.ನಾಯಕರ ಮಗಳು ರಶ್ಮಿ ಅವಳಿಗೆ, ತಂದೆಯ ಹೆಸರು ಪ್ರೀತಿಯ ಮತ್ತೊಂದು ಹೆಸರು ಅನ್ನುವ ರೀತಿ ಇದ್ದಳು).
ರಶ್ಮಿ ನಾಯಕ ಳು ಏಕಾಂಗಿಯಾಗಿ ನಿಲ್ಲಲಿಲ್ಲ, ಆದರೆ ಅವಳ ಹಿಂದೆ ನಿಂತಿರುವುದು, ಅವಳ ಜೀವನದ ಅತ್ಯಂತ ಶಕ್ತಿಯುತವಾದ ನೈತಿಕ ಶಕ್ತಿ, ಅವಳ ತಂದೆಯ ಪ್ರೀತಿ.ಅದಕ್ಕೆ ಅವಳಿಗೆ
“ತಂದೆಯ ಹೃದಯವು ಪ್ರಕೃತಿಯ ಮೇರುಕೃತಿಯಾಗಿದೆ.” ನಿಲ್ಲುತ್ತದೆ.
ಒಬ್ಬ ತಂದೆ ಎಂದರೆ ತನ್ನ ಮಗನು ತಾನು ಬಯಸಿದಷ್ಟು ಒಳ್ಳೆಯ ಮನುಷ್ಯನಾಗಬೇಕೆಂದು ನಿರೀಕ್ಷಿಸುವ ವ್ಯಕ್ತಿಯಾಗಿ ನಿಲ್ಲುತ್ತಾನೆ ಇದಕ್ಕೆ ನಾನು ನೋಡಿದ ಮಲ್ಲಿಕಾರ್ಜುನ ಚಿಕ್ಕಮಠ ಸರ್ ನನಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರ ಇಬ್ಬರ ಮಕ್ಕಳನ್ನು ಆ ರೀತಿ ಬೆಳೆಸಿದ್ದಾರೆ ಎಂಬ ಭಾವನೆ ನನ್ನದು.
ಏನೇ ಇರಲಿ ನಮ್ಮ ಪೂಜ್ಯ ತಂದೆಯವರಾದ ,ಮೌನೇಶಪ್ಪ ಕತ್ತಿಯವರು ಕೂಲಿ ಕಾರ್ಮಿಕರಾಗಿ ಅತ್ಯಂತ ಬಡ ರೈತನಾಗಿ ಸೇವೆ ಸಲ್ಲಿಸುತ್ತಾ, ತನ್ನ ಕೆಲಸದ ಮಧ್ಯೆಯೂ ನಮಗಾಗಿ ಸಮಯ ಮೀಸಲಿರಿಸಿ, ನಮ್ಮೆಲ್ಲರ ಬೇಕು – ಬೇಡಗಳನ್ನು ಪೂರೈಸಿ, ತಾಯಿಯಾಗಿ, ಗುರುವಾಗಿ, ಸ್ನೇಹಿತನಾಗಿ ನಮ್ಮನ್ನೆಲ್ಲ ಬೆಳೆಸಿ, ಜೀವನದುದ್ದಕ್ಕೂ ಶಿಸ್ತಿನಿಂದ – ಸ್ವಾಭಿಮಾನದಿಂದ ಹೇಗೆ ಬದುಕಬೇಕೆಂಬುದನ್ನು ತೋರಿಸಿಕೊಟ್ಟ ನಮ್ಮ ಪೂಜ್ಯ ತಂದೆಯವರ ಪಾದ ಪದ್ಮ ಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
ತನ್ನ ಕಷ್ಟ ನೋವು ನಲಿವು ಏನೇ ಇದ್ದರೂ ಅವುಗಳನ್ನು ಸಹಿಸಿಕೊಂಡು ಇಡೀ ಕುಟುಂಬ ಸಂತೋಷವಾಗಿರಬೇಕೆಂದು ಬಯಸುವ ತಂದೆಯ ದೊಡ್ಡ ಗುಣಕ್ಕೆ ತಲೆಬಾಗಿ ನಮಸ್ಕರಿಸುತ್ತಾ ,
ತಾನು ಸೋತು ಮಕ್ಕಳನ್ನು ಗೆಲ್ಲಿಸುವ ನಾಡಿನ ಎಲ್ಲ ಅಪ್ಪಂದಿರಿಗೂ ವಿಶ್ವ ಅಪ್ಪಂದಿರ ದಿನದಂದು ಭಕ್ತಿಯಿಂದ ನಮಿಸುತ್ತಿದ್ದೇನೆ …..
– ಮಾರ್ತಾಂಡಪ್ಪ ಎಮ್ ಕತ್ತಿ

administrator

Related Articles

Leave a Reply

Your email address will not be published. Required fields are marked *