ಹುಬ್ಬಳ್ಳಿ-ಧಾರವಾಡ ಸುದ್ದಿ
ಪ್ಲಾಸ್ಟಿಕ್ ಸರ್ಜರಿ ದಿವಸ- ಏನು ಮತ್ತು ಏಕೆ?

ಪ್ಲಾಸ್ಟಿಕ್ ಸರ್ಜರಿ ದಿವಸ- ಏನು ಮತ್ತು ಏಕೆ?

ಸಾಮಾನ್ಯರಿಗೆ ಪ್ಲಾಸ್ಟಿಕ್ ಸರ್ಜರಿ ಎಂದರೇನು? ಪ್ಲಾಸ್ಟಿಕ್ ಸರ್ಜನ್‌ರು ಮಾಡುವ ಶಸ್ತ್ರಚಿಕಿತ್ಸೆಗಳಾ ವವು? ಇವುಗಳಿಂದ ಆಗುವ ಉಪಯೋಗಗಳೇನು ಎಂಬ ಅರಿವು ಮೂಡಿಸುವ ಉದ್ಧೇಶದಿಂದ ಇಂದಿನ ದಿನವನ್ನು ದೇಶದಲ್ಲಿ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನವಾಗಿ ಆಚರಿಸುತ್ತಿದ್ದು ತನ್ನಿಮಿತ್ತ ಈ ಲೇಖನ.

ಪ್ಲಾಸ್ಟಿಕ್ ಸರ್ಜರಿಯು ಶಸ್ತ್ರಚಿಕಿತ್ಸೆಯ ವಿಶೇಷ ವಿಭಾಗ. ಕ್ರಿಸ್ತಪೂರ್ವ ೫೦೦ ರಲ್ಲಿ ನಮ್ಮ ದೇಶದಲ್ಲೇ ಪ್ರಥಮವಾಗಿ ಪ್ಲಾಸ್ಟಿಕ್ ಸರ್ಜರಿ ಪ್ರಾರಂಭ ಆಗಿರು ವುದು. ಸುಶ್ರುತ ಮುನಿಯು ಮೊದಲನೆಯದಾಗಿ ವಿಕೃತವಾಗಿರುವ ಮೂಗ ನ್ನು ಸರಿಪಡಿಸಿದರು. ತದನಂತರ ೨ನೇ ಮಹಾಯುದ್ದದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಈಗ ನಾವು ಪುನರ್ ಜೋಡಣಾ ಶಸ್ತ್ರಚಿಕಿತ್ಸೆಯಿಂದ ಹಿಡಿದು ಬೇರೆಯವರ ಅಂಗಾಂಗವನ್ನು ಕಸಿ ಮಾಡುವವರೆಗೆ ಮುಂದುವರೆದಿದ್ದೇವೆ.

ಮಾನವನ ದೇಹದ ಅಡಿಯಿಂದ ಮುಡಿಯವರೆಗೂ ಯಾವ ಕಾರಣಗ ಳಿಂದಲೂ ಯಾವುದೇ ನ್ಯೂನ್ಯತೆಗಳಿದ್ದರೂ ಕೂಡ ಪುನರ್ರಚನೆ ಮಾಡುವುದು ಪ್ಲಾಸ್ಟಿಕ್ ಸರ್ಜನ್‌ನ ಜವಾಬ್ದಾರಿ.ಇದರಲ್ಲಿ ಪ್ರಮುಖವಾಗಿಎರಡು ವಿಭಾಗಗಳು:

  •  ಪುನರ್ರ್‍ಅಚನಾ ಶಸ್ತ್ರಚಿಕಿತ್ಸೆ (Reconstructive Surgery)
  • .ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ (Cosmetic Surgery)
  •   ಶರೀರ ಮುನರ್ರ್‍ಅಚನಾ ಶಸ್ರಚಿಕಿತ್ಸೆ:-
  •   ಹುಟ್ಟಿನಿಂದ ಬರುವ ನ್ಯೂನ್ಯತೆಗಳು:

ದೇಹದ ಭಾಗದಲ್ಲಿ ಅಸಹಜತೆ ಹುಟ್ಟಿನಿಂದ ಬರಬಹುದು ಅಥವಾ ಅಪಘಾತದಿಂದ ಆಗಬಹುದು. ಹುಟ್ಟಿನಿಂದ ಆಗುವ ನ್ಯೂನ್ಯತೆಗಳು ಸೀಳು ತುಟಿ, ಸೀಳುಅಂಗುಳ ಅಥವಾ ಕಿವಿಯ ಅಸಹಜ ಬೆಳವಣಿಗೆ, ಕೈ ಅಥವಾ ಕಾಲು ಗಳಲ್ಲಿ ಜೋಡು ಬೆರಳುಗಳು, ಅಧಿಕ ಬೆರಳುಗಳು ಅಥವಾ ರಕ್ತನಾಳಗಳ ಅಸಹಜ ಬೆಳವಣಿಗೆ ಮತ್ತು ಮೂತ್ರದ್ವಾರ ಅಸ್ವಾಭಾವಿಕವಾಗಿ ಶಿಶ್ನದ ಕೆಳಭಾಗವಿದ್ದಾಗ, ಇನ್ನೂ ಹತ್ತಾರು ಕಾರಣಗಳಿಂದ ವ್ಯತ್ಯಾಸದ ರೂಪದಿಂದ ಜನಿಸುವ ಈ ಮುಗ್ಧ ಮಕ್ಕಳಿಗೆ ಸ್ವರೂಪ ರಚಿಸುವ ಕಾರ್ಯ ಪ್ಲಾಸ್ಟಿಕ್ ಸರ್ಜನ್‌ರ ಹೆಗಲಮೇಲಿರುತ್ತದೆ.

ಅಪಘಾತದಿಂದ ಆಗುವ ಅಸಹಜತೆ:

ರಸ್ತೆ ಅಪಘಾತಗಳಿಂದ, ಕಾರ್ಯ ಕ್ಷೇತ್ರದ ಅಪಘಾತಗಳಿಂದ ಅಥವಾ ಮನೆಯಲ್ಲೇಅಪಘಾತವಾದಾಗ ದೇಹದ ಕೆಲವು ಅಂಗಗಳಿಗೆ ಊನವಾಗು ವುದು ಸರ್ವೇ ಸಾಮಾನ್ಯ.

ಮುಖದ ಮೇಲೆ ತರಚಿದ (Abrasion)  ಘಾಯ ಅಥವಾ ಹರಿದ ಘಾಯದ (laceration)  ಚಿಕಿತ್ಸೆ ಮಾಡಿ ಕಲೆಯ ಪ್ರಮಾಣವನ್ನು ಕಡಿಮೆ ಮಾಡುತ್ತೇವೆ. ಹಾಗೆ ಮುಖದ ಮೂಳೆ ಮುರಿದಾಗ ಮತ್ತು ಅದರಿಂದಾ ಗುವ ವಿಕಾರ ಸರಿಪಡಿಸುತ್ತೇವೆ.ಕೈ, ಕಾಲಿನ ಯಾವುದೇ ಭಾಗವು ತುಂಡರಿಸಲ್ಪಟ್ಟಾಗ ಮುರಿದ ಭಾಗವನ್ನು ಪುನಃ  ಜೋಡಿಸುತ್ತೇವೆ.

ತುಂಡರಿಸಲ್ಪಟ್ಟ ಅಂಗವನ್ನು ಯಾವ ರೀತಿ ಆಸ್ಪತ್ರೆಗೆ ತುರವುದು?

ಕತ್ತರಿಸಲ್ಪಟ್ಟ ಭಾಗವನ್ನು ಕೂಡಲೆ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಇಟ್ಟು, ಅದನ್ನು ಐಸ್ ಇರುವ ಡಬ್ಬಿಯಲ್ಲಿ ಹಾಕಿ ಕೂಡಲೆ ಆಸ್ಪತ್ರೆಗೆ ತರಬೇಕು. ಇದನ್ನು ೬ ತಾಸುಗಳ ಒಳಗೆ ಜೋಡಿಸಬೇಕಾಗುತ್ತದೆ. ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ, ಹೆಚ್ಚು ಕಾಲವನ್ನು ಮತ್ತು ನೈಪುಣ್ಯದ ಅವಶ್ಯಕತೆ ಇರುವ ಮತ್ತು ಹೆಚ್ಚು ಪರಿಶ್ರಮ ಬೇಕಾಗುವ ಶಸ್ರ್ತಚಿಕಿತ್ಸೆ.ಈ ಕ್ಲಿಷ್ಟಕರ ಸಂದರ್ಭಗಳಲ್ಲಿ ಅಂಗಗಳ ಪುನರ್ರ್‍ಅಚನೆ ದೊಡ್ಡ ಸವಾಲೇ ಸರಿ. ಈ ಸವಾಲಿನ ವಿಷಯವನ್ನು ಸರಿಕ್ರಮದಲ್ಲಿ ನಿರ್ವಹಿಸುವಲ್ಲಿ ಪ್ಲಾಸ್ಟಿಕ್ ಸರ್ಜನ್‌ರು ನಿಸ್ಸೀಮರು.

ಅಸ್ತಿಭಂಗ (Fracture) ಆದ ಗಾಯ ತೆರೆದು ಕೊಂಡಿದ್ದರೆ ಅದು Compound Fracture ಅಂತ ಕರೆಯುತ್ತೇವೆ. ಅಂಥ ಗಾಯವನ್ನು ಆದಷ್ಟು ಬೇಗನೆ ಚರ್ಮದಿಂದ ಮುಚ್ಚುವ ಪ್ರಯತ್ನ ಮಾಡುತ್ತೇವೆ. ಚರ್ಮವೇ ಶ್ರೇಷ್ಟ ಬ್ಯಾಂಡೇಜ್‌ಒಂದೊಮ್ಮೆ ಹಾಗೇ ಬಿಟ್ಟರೆ ಸೋಂಕು (infection) ಆಗುವ ಸಾಧ್ಯತೆಗಳುಂಟು.

  ಸುಟ್ಟಗಾಯಗಳು:

ನಮಗೆಲ್ಲಾ ತಿಳಿದಿರುವಂತೆ ಸುಟ್ಟಗಾಯಗಳು ಮತ್ತು ಅದರಿಂದಾಗುವ ತೊಂದರೆಗಳು ಜೀವಕ್ಕೇ ಕುತ್ತು ತರುವಂಥ ಅಪಾಯಗಳು. ಕೇವಲ ಅಂಗಗಳ ನ್ಯೂನ್ಯತೆಯನ್ನು ಸರಿಪಡಿಸುವುದಷ್ಟೇ ಅಲ್ಲದೇ ದೇಹದ ನೀರಿನ ಹಾಗೂ ಖನಿಜಾಂಶಗಳನ್ನು ಸರಿಪಡಿಸುವುದು ಹಾಗೂ ಸುಟ್ಟಗಾಯ ಗಳಿಂದ ಉದ್ಭವಿಸುವ ತದನಂತರದ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವುದು ಪ್ಲಾಸ್ಟಿಕ್ ಸರ್ಜನ್‌ರ ಕರ್ತ್ಯವ್ಯ.

ಅರ್ಬುದ ಕಾಯಿಲೆ ಮತ್ತು ಪುನರ್ರ್‍ಅಚನೆ:

ಯಾವುದೇ ಕಾರಣದಿಂದಲೋ ಉದ್ಭವಿಸುವ ಅರ್ಬುದ ಖಾಯಿಲೆ (CANCER) ಕೂಡ ಪ್ಲಾಸ್ಟಿಕ್ ಸರ್ಜರಿಯ ತೆಕ್ಕೆಗೆ ಬರುವ ವಿಷಯ. ಬಾಯಿಯ ಅರ್ಬುದ, ಚರ್ಮದ ಅರ್ಬುದ, ಸ್ತನದ ಅರ್ಬುದ, ಕೈ ಕಾಲುಗಳಲ್ಲಿ ಉದ್ಭವಿಸಬಹುದಾದ ಸೂಕ್ಷ್ಮ ಜೀವ ಕೋಶದ ಅರ್ಬುದ ಹಾಗೂ ಇತರೆ ಅರ್ಬುದ ಖಾಯಿಲೆಯಿಂದ ಬರುವ CANCER ಗಡ್ಡೆಯ ನಿರ್ಮೂಲನೆ; ನಂತರ ಜೀವ ಕೋಶದ ಮರುನಿರ್ಮಾಣವನ್ನು ಪ್ಲಾಸ್ಟಿಕ್ ಸರ್ಜನ್‌ರು ಮಾಡಿ ರೋಗಿಯ ರೂಪವನ್ನು ಸಮಾಜ ಒಪ್ಪುವಂತೆ ಮಾಡುತ್ತಾರೆ.

ರಕ್ತನಾಳಗಳ ಅಂಗ ವೈಪರಿತ್ಯ, (Haemangioma, Vascular malformation) ನರಗಳ ತುಂಡಾಗುವಿಕೆ, ಮಾಂಸಖಂಡಗಳ ತುಂಡಾಗುವಿಕೆ, ಕೈ, ಕಾಲುಗಳು ಹಾಗೂ ಮುಖದ ಮುರಿದ ಎಲುಬುಗಳ ಮರು ಜೋಡಣೆ, ಚರ್ಮದ ಕಸಿ, ಚರ್ಮದೊಂದಿಗೆ ಜೀವಕೋಶಗಳ ಕಸಿ Skul base surgery ಇವೆಲ್ಲವೂ ಕೂಡಾ ಪ್ಲಾಸ್ಟಿಕ್ ಸರ್ಜನ್‌ರವರ ಪರಿಮಿತಿಗೆ ಬರುವ ವಿಷಯಗಳು.

 ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ (Cosmetic Surgery)

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಅಂದರೆ ಮೂಲಭೂತವಾಗಿಯಾವದೇ ನ್ಯೂನ್ಯತೆಇಲ್ಲದಿರುವ ವ್ಯಕ್ತಿಗೆ ಕೇವಲ ಸೌಂದರ್ಯ ವರ್ಧನೆಗಾಗಿ ಮಾಡುವ ಶಸ್ತ್ರಚಿಕಿತ್ಸೆ.

ಮಾನವನ ಇರುವ ರೂಪ ಕೊಂಚ ಭಿನ್ನವಾಗಿದ್ದಲ್ಲಿ, ಆ ರೂಪದ ಸೌಂದರ್ಯವರ್ಧನೆಗೂ ಪ್ಲಾಸ್ಟಿಕ್ ಸರ್ಜರಿಯಲ್ಲಿ ಉಪಾಯಗಳಿವೆ.ಗಿಣಿ ಮೂಗು ಇರುವವರಿಗೆ ಮೂಗನ್ನು ನೇರ ಮಾಡಬಹುದು, ಸೊಂಡು ಮೂಗನ್ನು ಸೀದಾ ಮಾಡಬಹುದು, ಚಪ್ಪಟೆ ಮೂಗನ್ನು ಎತ್ತಬಹುದು, ಕಲೆಯನ್ನು ಸುಧಾರಣೆ ಮಾಡುವದು, ಪುರುಷ ಸ್ತನವನ್ನು ಸರಿಪಡಿಸುವುದು, ಕುಂಟಿತ ಸ್ತನಗಳನ್ನು ವರ್ಧಿಸಬಹುದು. ಇದನ್ನು ಸ್ತನವರ್ಧಕ ಶಸ್ತ್ರಚಿಕಿತ್ಸೆ ಅನ್ನುತ್ತಾರೆ (Breast Augmentation). ಇದೇ ರೀತಿ ಸ್ಥೂಲವಾದ ಸ್ತನವನ್ನು ಸಹಜ ಸ್ಥಿತಿಗೆ ತರಬಹುದು (Breast reduction). ಬೊಜ್ಜನ್ನು ಶಸ್ತ್ರಚಿಕಿತ್ಸೆ ಮೂಲಕ ಕಡಿಮೆ ಮಾಡುವುದು. ಜೋತುಬಿದ್ದ ಹೊಟ್ಟೆಯನ್ನು ಸರಿಪಡಿಸಬಹುದು Abdominoplasty. ಬೊಜ್ಜನ್ನು ಯಂತ್ರದ ಮೂಲಕ ತೆಗೆದು, ಸುಂದರವಾಗಿ ಕಾಣುವ ಹಾಗೆ ಮಾಡಬಹುದು (Liposuction).

ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ತಲೆಗೂದಲಿನಿಂದ ಕಾಲಿನ ಬೆರಳುಗಳ ಉಗುರಿನವರೆಗು ಪ್ಲಾಸ್ಟಿಕ್ ಸರ್ಜರಿಯ ಪರಿಮಿತಿಯಲ್ಲಿ ಹಲವಾರು ವಿಷಯಗಳು ಹರಡಿವೆ. ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನವಾದ ಜುಲೈ ಹದಿನೈದಾದ ಇಂದು ನಮ್ಮ ಪ್ರಿಯ ಓದುಗರಿಗೆ ಈ ವಿಷಯದ ಬಗ್ಗೆ ಮಾಹಿತಿ ಒದಗಿಸಿದ್ದೇವೆ ಎಂದು ನಂಬುತ್ತೇವೆ.

ಇನ್ನು ಕೆಲವು ತಪ್ಪು ನಂಬಿಕೆಗಳು:

  • ಪ್ಲಾಸ್ಟಿಕ್ ಸರ್ಜರಿಯಿಂದ ಕಲೆ ಮಾಯವಾಗುತ್ತದೆ:-
  • ಇದು ಸಾಧ್ಯವಿಲ್ಲ. ಪ್ಲಾಸ್ಟಿಕ್ ಸರ್ಜರಿಯಿಂದ ಕಲೆ ಕಡಿಮೆ ಮತ್ತು ಯಾರಿಗು ಒಮ್ಮೆಲೆ ಕಾಣದ ಹಾಗೆ ಇರುತ್ತದೆ.
  • ಪ್ಲಾಸ್ಟಿಕ್ ಸರ್ಜರಿ ಎಂದರೆ Cosmetic Surgery ಅಂಥ ನಂಬಿಕೆ ಇದೆ.:-
  • Cosmetic Surgery ಪ್ಲಾಸ್ಟಿಕ್ ಸರ್ಜರಿಯ ಒಂದು ಭಾಗವಷ್ಟೇ
  • ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಬಳಸುತ್ತಾರೆ:-
  • ಪ್ಲಾಸ್ಟಿಕ್ ಸರ್ಜರಿಯೆಂಬುದು ಗ್ರೀಕ್ ಭಾಷೆಯಿಂದ ಬಂದಿರುವ ಹೆಸರು. ಇದರ ಅರ್ಥ ಆಕಾರವನ್ನು ಮೂಡಿಸುವುದು ಎಂದು. ಇದಕ್ಕೂ ನಾವು ಬಳಸುವ ಪ್ಲಾಸ್ಟಿಕ್‌ಕ್ಕಿಗೂ ಸಂಬಂಧ ಇಲ್ಲ.
  • ಸುಟ್ಟ ಗಾಯಗಳಿಗೆ  ನೀರನ್ನು ಹಾಕಬಾರದು:-
  • ಸುಟ್ಟಗಾಯಗಳಿಗೆ ನೀರನ್ನು ತಕ್ಷಣ ಹಾಕುವುದರಿಂದ ಬಹಳಷ್ಟು ಹಾನಿ ಕಡಿಮೆಯಾಗುತ್ತದೆ.
  • ಪ್ಲಾಸ್ಟಿಕ್ ಸರ್ಜರಿ ದುಬಾರಿ:-ಬಹುತೇಕ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಯು ಕೈಗೆ ಎಟಕುವ ದರದಲ್ಲಿ ಇರುತ್ತವೆ.

 

administrator

Related Articles

Leave a Reply

Your email address will not be published. Required fields are marked *