ಹುಬ್ಬಳ್ಳಿ-ಧಾರವಾಡ ಸುದ್ದಿ
ರಕ್ಷಣೆಯ ಭುಜ ನೀಡುವ ತಂದೆ

ರಕ್ಷಣೆಯ ಭುಜ ನೀಡುವ ತಂದೆ

ಈ ವರ್ಷ ಮತ್ತೊಮ್ಮೆ “ಅಪ್ಪಂದಿರ ದಿನ” ಬಂದಿತು. ಅಪ್ಪ ದರೆ ಎಲ್ಲರ ಮನದಲ್ಲಿ ಬರುವ ನಮ್ಮೆಲ್ಲರ ಮೊದಲ “HERO” ತಂದೆಯಲ್ಲವೇ? ನಮಗೆ ತಂದೆ ಎಷ್ಟು ಪ್ರೀತಿ ಎಂದರೆ ನಮ್ಮ ಮಕ್ಕಳಿಗೂ ಅವರ ಕುರಿತೇ ಹೇಳುವಲ್ಲಿ ನಮಗೆ ಶಬ್ಬಗಳೇ ಬರುವದಿಲ್ಲ.ಅಷ್ಟೊಂದು ಪ್ರೀತಿ, ನಮಗೆ ಅದರಲ್ಲೂ ಹೆಣ್ಣು ಮಕ್ಕಳಿಗಂತೂ ತಂದೆಯೆಂದರೆ ಒಂದು ಡಿouಟಿಜ ಜಾಸ್ತಿ ಪ್ರೀತಿ.
ನಾವೆಲ್ಲಾ ಪೂಜಿಸುವ ಪ್ರಥಮ ಪೂಜಿತ ಗಣಪನ ಕಥೆ ನಮ್ಮೆಲ್ಲರಿಗೂ ಗೊತ್ತಿರುವಂತಹದೇ, ಷಣ್ಮುಖ-ಗಣಪನ ಇಬ್ಬರಲ್ಲಿ ಯಾರು ಮೊದಲು ಜಗವೆಲ್ಲ ಮೊದಲು ಸುತ್ತಿ ಬರುತ್ತಾರೆಂದಾಗ ಗಣಪ ತನ್ನ ಮಾತಾ-ಪಿತರನ್ನೇ ಐದು ಸಲ ಸುತ್ತಿ ಜಗವೆಲ್ಲಾ ನನ್ನ ತಂದೆ-ತಾಯಿಯಲ್ಲೇ ಇರಬೇಕಾದರೆ ಅವರನ್ನೇ ಸುತ್ತಿದರೇ ಆಯಿತಲ್ಲಾ? ಜಗತ್ತೇ ನನ್ನತಂದೆ ತಾಯಿ ಎಂಬ ಸತ್ಯ ತೋರಿಸಿದ್ದೇ ನಮಗೆ ನಾವು ಪೂಜಿಸುವ ಗಣಪ.ಅದು ನಿಜವೂ ಹೌದು. ಜಗತ್ತಿಗೆಲ್ಲಾ ಕೆಟ್ಟವರಾದರೂ ತಮ್ಮ ಮಕ್ಕಳಿಗೆ ಅವರು ಒಳ್ಳೆಯವರೆ.
ನಾವು ತಂದೆ ತಾಯಿ ಕುರಿತು ಹೇಳುವಾಗ ದು ಕೈ ತಾಯಿಯನ್ನೇ ಹೆಚ್ಚಾಗಿ ಹೇಳುತ್ತೇವೆ. ಆದರೆ ಈಗ ಕಾಲ ಬದಲಾಗಿದೆ,ಮಕ್ಕಲ ಅಭ್ಯುದಯದ ಹಿಂದೆ ತಂದೆ-ತಾಯಿ ಇಬ್ಬರದೂ ಸಮ ಪಾಲು ಇರುತ್ತದೆ.ಓಂದು ಬಂಡಿಗಾಲಿಗೆ ಹೇಗೆ ಎರಡೂ ಚಕ್ರಗಳೂ ಅವಶ್ಯವೋ ಅದೇ ರೀತಿ ಒಂದು ಮಗುವಗೆ ತಂದೆ ತಾಯಿ ತಮ್ಮದೇ ಕೊಡುಗೆ ನೀಡುತ್ತಾರೆ.
ನಾನು ನನ್ನದೇ ಜೀವನ ಕುರಿತು ಹೇಳುವದಾದರೆ ಆರು ಮಕ್ಕಳ ದೊಡ್ಡ ಕುಟುಂಬ ನಮ್ಮದು.ಶಿಕ್ಷಕ ವೃತ್ತಿಯ ನಮ್ಮ ತಂದೆ ನಮಗೆ ಒಳ್ಳೆ ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣವನ್ನೂ ನೀಡಿದರು.ಇಲ್ಲಿ ನಮ್ಮ ತಂದೆಯ ಬಗ್ಗೆ ಹೆಮ್ಮೆ ಎನಿಸುವದೂ ಇಲ್ಲಿಯೇ. ಒಬ್ಬ ಗಂಡು ಮಗ ಐದು ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣವನ್ನೇ ನೀಡಿ ನಮ್ಮೆಲ್ಲರನ್ನೂ ಸುಶಿಕ್ಷಿತರೊಂದಿಗೆ, ನೌಕರಸ್ಥರನ್ನಾಗಿಯೂ ಮಾಡಿದರು.
ನಾವೆಲ್ಲಾ ಒಮ್ಮೊಮ್ಮೆ ನಮ್ಮ ಜೀವನದ ಪಯಣದ ನೆನಪಿನ ಬುತ್ತಿಯ ಬಿಚ್ಚಿದಾಗ ಅಲ್ಲಿರುವ ಸವಿಯೂಟ
ಎಷ್ಟೊಂದು ಸವಿಯೆಲ್ಲವೇ? ಎಂದು ನಮಗೆ ಖುಷಿಯಾಗುತ್ತದೆ. ನಮ್ಮದೇ ಹಳೆಯ ಅಲ್ಬಂಗಳನ್ನೇ ನೋಡಿದಾಗ ನಾನು ಹೀಗಿದ್ದೇನಲ್ಲಾ? ಹೇಗೆ ಹೀಗಾದೆ? ಎಂದೆಲ್ಲಾ ನಮಗೆ ಒಮ್ಮಲೆ ಖುಷಿಯಾಗಿ ಬಿಡುತ್ತದೆ.ಮಗುವಾಗಿದ್ದ ನನಗೇ ಈಗ ಮಕ್ಕಳು ಎಂದಾಗ ಅದಮ್ಯ ಆಗಾಧ ಜೊತೆಗೆ ನನ್ನ ಪಯಣದ ಬಗ್ಗೆ ಖುಷಿಯೂ ಅನಿಸುತ್ತದೆ.ನಾ ಹೇಗೆ ನನ್ನ ಮಕ್ಕಳ ಬಗ್ಗೆ ಚಿಂತಿಸುತ್ತೇನೋ ಹಾಗಯೇ ನನ್ನ ತಂದೆ ತಾಯಿ ನನ್ನ ಬಗ್ಗೆ ಯೋಚಿಸುತ್ತಿದ್ದರೆಂಬ ಅರಿವು ನನಗೀಗ ಸ್ಪಷ್ಟವಾಗಿ ಅರಿವಾಗುತ್ತದೆ.
ತಂದೆ ಎಂದರೆ ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ. ಹೌದು ನಮ್ಮ ತಂದೆ ನಮಗೆ ಹೇಗೆ ಬದುಕಬೇಕೆಂದು ಹೇಳಿಕೊಡಲಿಲ್ಲ, ಬದಲಿಗೆ ತೋರಿಸಿಕೊಟ್ಟರು. ಬದುಕುವ ಕಲೆ ಕಲಿಸಿದ ಈಗಿಲ್ಲ, ಆದರೆ ಅವರು ತುಂಬಿ ಕೊಟ್ಟ ಬಾಳು,ಅವರೊಡನೆ ಬೆನ್ನೆಲಬಾಗಿ ನಿಂತ ನಮ್ಮ ತಾಯಿ ನಮ್ಮೆಲ್ಲರ ಬದುಕಲ್ಲಿ ನಮ್ಮ ಮುಂದೆ ನಿಂತಿರುವದು ನಮ್ಮ ಸಂತೋಷ.
ಅವರು ನಮಗಾಗಿ ಹರಿಸಿರುವ ಒಂದೊಂದು ಬೆವರಿನ ಹನಿಯ ಋಣ ತೀರಿಸುವದು ನಮ್ಮಿಂದಾಗದು.ಅಪ್ಪ ಆ ದೇವರು ನಮಗೆ ಕೊಟ್ಟ ಅಮೂಲ್ಯವಾದ ಗಿಫ್ಟ್, ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್..
ಅವರ ಆಸೆಯಂತೆ ಸಮಾಜಕ್ಕೆ ಉತ್ತಮ ನಾಗರೀಕಳಾಗುವದು ನನ್ನಾಸೆ.ನನ್ನೊಬ್ಬಳದೇ ಅಲ್ಲ, ನಮ್ಮೆಲ್ಲರದು.
ಸಾಹಿತ್ಯ ಪ್ರೇಮಿ,ಪುಸ್ತಕ ಪ್ರೇಮಿ,ಉತ್ತಮ ವಾಗ್ಮಿಯಾಗಿದ್ದ ನಮ್ಮ ತಂದೆಗೆ ನಾನೊಮ್ಮೆ ಕೇಳಿದ್ದೆ-“ನೀವು ಇಷ್ಟು ಸುಂದರವಾಗಿ ಮಾತನಾಡಲು ಏನು ಕಾರಣ?ಅವರು ತುಂಬಾ ಸರಳವಾಗಿ ಉತ್ತರಿಸಿದ್ದರು-“ವಿಚಾರಗಳು ಅಕ್ಷಯ ಪಾತ್ರೆ ಇದ್ದಂತೆ ಅವಕ್ಕೆ ಒಳ್ಳೆ ಪುಸ್ತಕಗಳ ಓದಿನ ಸಾಣಿ ಹಿಡಿಯಬೇಕಷ್ಟೇ,ಅದು ಅದೇ ಧ್ಯಾನ,ವಿಚಾರದಲ್ಲಿಮುಳುಗಿಸುತ್ತದೆ,ಅದು ಎಂದೂ ಬರಿದಾಗುವದೇ ಇಲ್ಲ.ನಮ್ಮ ಸುತ್ತಲಿನ ಜೀವನಾನುಭವಗಳೇ ಎಂದಿಗೂ ಉತ್ತಮ ಸಾಹಿತ್ಯಕ್ಕೆ ನಾಂದಿ.ಹೀಗೆ ಲೋಕಾನುಭವವೇ ಜೀವಾನುಭವಾಗಿ,ಜೀವನ ಸಾಹಿತ್ಯವಾಗಿ ಎಲ್ಲರಿಗೂ ಬಹು ಪ್ರಿಯವಾಗಿ ಬಿಡುತ್ತದೆ.ಇದನ್ನು ನಾನಿಲ್ಲಿ ಇದನ್ನು ಪ್ರಸ್ತಾಪಿಸಿರುವ ಉದ್ದೇಶವಿಷ್ಟೇ, ನಾನು ನನ್ನ ತಂದೆಯ ಅನುಭವವನ್ನು ಹೇಳಿದಾಗ ಓದುಗರು ಕೂಡಾ ತಮ್ಮ ತಂದೆಯ ಅನುಭವವನ್ನು ನೆನಪಿಸಿಕೊಂಡು ಖುಷಿಯಿಂದ ಓದುತ್ತಾರೆ.ಅಲ್ಲವೇ?

ಅದಕ್ಕೆ ಜನಪದ ಹಾಡನ್ನು ನಾನು ನನ್ನ ಮಕ್ಕಳಿಗೆ ಸದಾ ಕೇಳಿಸುತ್ತೇನೆ.

“ಉಂಡು ಕೂತಿಹ ನನ್ನ ದುಂಡ ಮೋರೆಯ ತಂದೆ

ಬಿಂದುಲಿಯ ಬೇಡು ನನ ಕಂದಾ

ಬಿಂದುಲಿಯ ಬೇಡು ನನ ಕಂದಾ ನಿಮ್ಮಜ್ಜ

ಬಿಂದಿಗ್ಹೊನ್ನಿರುವ ದೊರೆ ಕಾಣೋ”

ತಾಯಿ ಮಮತೆಯ ಮಡಿಲು ನೀಡಿದರೆ, ತಂದರೆ ರಕ್ಷಣೆಯ ಭುಜ ನೀಡುತ್ತಾನೆ.ಎಂಬ ಮಾತಂತು ನಮ್ಮ ಜೀವನದಲ್ಲಿ ನಿಜ ಅನುಭವವೆಂದೆ ಹೇಳಬಹುದು.

ಡಾ.ಭಾಗ್ಯಜ್ಯೋತಿ ಕೋಟಿಮಠ.
ಮುಖ್ಯ ಶಿಕ್ಷಕಿ ಶ್ರೀ ಎನ್.ಜಿ.ಬಾಳನಗೌಡ್ರ
ಸರ್ಕಾರಿ ಪ್ರೌಢಶಾಲೆ ಶಿರೂರು

 

 

administrator

Related Articles

Leave a Reply

Your email address will not be published. Required fields are marked *