ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕ್ಷೇತ್ರವಾದ ಹು.ಧಾ. ಸೆಂಟ್ರಲ್ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳಾಗಲು ವ್ಯಾಪಕ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬೆಳಗಾವಿ ಶಾಸಕಿ ಲಕ್ಷಿö್ಮ ಹೆಬ್ಬಾಳ್ಕರ ತವರಲ್ಲೇ ನಡೆಯಿತು.
ಮೊನ್ನೆ ಮಯೂರ ರೆಸಾರ್ಟದಲ್ಲಿ ಪೂರ್ವ ಮತ್ತು ಪಶ್ಚಿಮದ ಬಹುತೇಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊAಡಿದ್ದರೂ ಒಂದೆಡೆ ಉಣಕಲ್ ಪ್ರದೇಶದಲ್ಲಿ ಬಿಜೆಪಿ ಅವಿರೋಧ ಆಯ್ಕೆಗೆ ‘ಸಾಮ, ಭೇದ, ದಂಡ’ದ ಬೆದರಿಕೆ ತಂತ್ರ ಹಾಗೂ ಹಲವು ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಅಂತಿಮವಾಗಿ ಬೆಳಗಾವಿಯಲ್ಲಿ ನಡೆದು ಪಟ್ಟಿ ಬಹುತೇಕ ಅಂತಿಮಗೊAಡಿದೆ. ಸೆಂಟ್ರಲ್ ವ್ಯಾಪ್ತಿಯ ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಹೆಬ್ಬಾಳ್ಕರ ಆವರ ಅಳಿಯ ಆಗಿದ್ದು ಮಹತ್ವ ಪಡೆದಂತಾಗಿದೆ. ಸಭೆಗೆ ಕೇವಲ ಔಪಚಾರಿಕವಾಗಿ ಶಾಸಕಿ ಲಕ್ಷಿö್ಮ ಭೇಟಿ ನೀಡಿ ತೆರಳಿದ್ದು ಒಟ್ಟಿನಲ್ಲಿ ಸಮರ್ಥರ ಅಲ್ಲದೇ ಪುನಃ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟುವ ಪ್ರಾಥಮಿಕ ಯತ್ನಕ್ಕೆ ಮುನ್ನುಡಿ ಬರೆದಂತಾಗಿದೆ.
ಉಸ್ತುವಾರಿಗಳಾದ ಆರ್.ವಿ.ದೇಶಪಾಂಡೆ, ಧ್ರುವನಾರಾಯಣ, ತನ್ವೀರ ಸೇಠ, ಶಿವಾನಂದ ಪಾಟೀಲ ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಮ್ಯಾರಥಾನ್ ಸಭೆ ನಡೆದು ಕೆಲ ತೀವ್ರ ಪೈಪೋಟಿಯಿರುವ ವಾರ್ಡ ಹೊರತುಪಡಿಸಿ ಉಳಿದೆಲ್ಲವುಗಳಿಗೆ ಗ್ರೀನ ಸಿಗ್ನಲ್ ನೀಡಲಾಗಿದೆ.
ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಶಾಸಕ ಶ್ರೀನಿವಾಸ ಮಾನೆ,ಮಾಜಿ ಶಾಸಕ ನಾಗರಾಜ ಛಬ್ಬಿ, ಹಿರಿಯ ಮುಖಂಡ ಪಿ.ಕೆ.ರಾಯನಗೌಡರ, ಸದಾನಂದ ಡಂಗನವರ, ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಮುಂಚೂಣಿ ಘಟಕಗಳ ಅಧ್ಯಕ್ಷರು ಸಭೆಯಲ್ಲಿದ್ದರು.
ಕಳೆದ ೨೦ ವರ್ಷಗಳಲಿ ಸೆಂಟ್ರಲ್ ಕ್ಷೇತ್ರದಲ್ಲಿನ ಬಹುತೇಕರ ಪ್ರಭಾವಿಗಳು ಪಕ್ಷ ತೊರೆದರೂ ತನ್ನದೇ ಕಾಂಗ್ರೆಸ್ ಮತ ಬ್ಯಾಂಕ್ ಹೊಂದಿದ್ದು ಈ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಆಧರಿಸಿ ಅಲ್ಲದೇ ಹಿರಿತನ ಮತ್ತು ಯುವ ಸಮ್ಮಿಶ್ರವಿರುವಂತೆ ನೋಡಿಕೊಂಡು ಪಟ್ಟಿ ಬಹುತೇಕ ಅಂತಿಮಗೊಳಿಸ ಲಾಗಿದೆ ಎನ್ನಲಾಗಿದೆ.
ಈಗಾಗಲೇ ಮಹಾನಗರಪಾಲಿಕೆಯ 82 ವಾರ್ಡಗಳ ಪೈಕಿ ಸುಮಾರು ೭೦ಕ್ಕೂ ಹೆಚ್ಚು ವಾರ್ಡಗಳಲ್ಲಿ ಕೈ ಅಭ್ಯರ್ಥಿಗಳು ಅಂತಿಮಗೊAಡಿದ್ದು 29,71 ಸಹಿತ ಕೆಲ ವಾರ್ಡಗಳಲ್ಲಿ ಅಂತಿಮಗೊಳ್ಳಬೇಕಿದೆ.ಈಗಾಗಲೇ ಕೆಪಿಸಿಸಿಗೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಿದ್ದು, ಇಂದು ಮಧ್ಯಾಹ್ನ ಸ್ವತಃ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರೇ ಪರಿಶೀಲಿಸಿ ಅಂತಿಮಗೊಳಿಸಿ ಪ್ರಕಟಿಸುವರೆನ್ನಲಾಗಿದೆ.
ಸಂಭವನೀಯ ಪಟ್ಟಿ ಇಂತಿದೆ.
35-ಬಸವರಾಜ ಮಾಯಕರ(ಬೆಲ್ಲದ), 37-ಅಭಿಮನ್ಯು ರೆಡ್ಡಿ/ ಗಂಗಾಧರ ದೊಡ್ಡವಾಡ, 39-ರತ್ನಾ ಪಾಟೀಲ, 40-ಶಿವು ರಾಯನಗೌಡರ, 41-ಪ್ರಕಾಶ ಜಾಧವ/ ಬಸವರಾಜ ಕಳಕರಡ್ಡಿ, 42-ರಂಗಪ್ಪ ಬಳ್ಳಾರಿ/ ಚೇತನ ಬಿಜವಾಡ, 43-ಸುನೀಲ ಮಠಪತಿ/ ಸಮೀರ ಖಾನ, 44-ರಾಜೇಶ್ವರಿ ಖಂಡೇಕರ, 45-ಪ್ರಕಾಶ ಕುರಹಟ್ಟಿ, 46-ಪ್ರಭು ಸವದತ್ತಿ, 47-ಮೇಘನಾ ಹಿರೇಮಠ/ ನಿರ್ಮಲಾ ಯಲಿಗಾರ, 48-ಮಾಲತೇಶ ಗುಡೇನಕಟ್ಟಿ/ ದೀಪಕ ಶಿರೋಳ್ಕರ, 49-ರಾಜೇಶ್ವರಿ ಮೆಹರವಾಡೆ, 50-ರಬಿಯಾಬಿ ಯಕ್ಕುಂಡಿ / ಸುಶೀಲಾ ಗುಡಿಹಾಳ, 51-ಸೆಂದಿಲ್ಕುಮಾರ, 52-ಚೇತನ ಹಿರೇಕೆರೂರ/ ಪ್ರಕಾಶ ಕ್ಯಾರಕಟ್ಟಿ, 53-ಮದಾರ ಮಕಾಂದರ/ ಆರೀಫ್ ಭದ್ರಾಪುರ, 54-ಶಿವಲೀಲಾ ಹಿರೇಮಠ, 55-ಇಕ್ಬಾಲ್ ನವಲೂರ, 56-ಚಂದ್ರಿಕಾ ಮೇಸ್ತಿç, 57-ಸರಸ್ವತಿ ಕುಲಕರ್ಣಿ, 58-ಶೃತಿ ಚಲವಾದಿ, 59-ಸುವರ್ಣ ಕಲ್ಲಕುಂಟ್ಲಾ
ನಾಲ್ವರು ಹಳಬರಿಗೆ ಟಿಕೆಟ್
ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ (52), ಮಾಜಿ ಪಾಲಿಕೆ ಸದಸ್ಯರುಗಳಾದ ರತ್ನಾ ಪಾಟೀಲ ( 39), ಸುವರ್ಣ ಕಲಕುಂಟ್ಲಾ(59) ಹಾಗೂ ರಬಿಯಾಬಿ ಯಕ್ಕುಂಡಿ(50) ಇವರಿಗೆ ಮತ್ತೆ ಮಣೆ ಹಾಕಲಾಗಿದೆ.ಅಲ್ಲದೇ ಮಾಜಿ ಮೇಯರ್ ವೆಂಕಟೇಶ ಮೇಸ್ತಿç ಪತ್ನಿ ಚಂದ್ರಿಕಾ ಮೇಸ್ತಿçಗೆ ಸಹ 56ನೇ ವಾರ್ಡಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕ್ಯಾರಕಟ್ಟಿ ನಾಲ್ಕನೇ ಸಲ ಕಣಕ್ಕಿಳಿಯುತ್ತಿದ್ದಾರೆ.
ರಾಯನಗೌಡರ ಮಗ ಅಖಾಡಕ್ಕೆ
ಸೆಂಟ್ರಲ್ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಪಾಲಿಕೆಗೆ ಐದು ಬಾರಿ ಆಯ್ಕೆಯಾಗಿರುವ ಹಿರಿಯ ಪ್ರಭಾವಿ ಮುಖಂಡ ಪ್ರಪುಲ್ ಚಂದ್ರ ರಾಯನಗೌಡರ ಅವರ ಮಗ ಈ ಬಾರಿ ಪಾಲಿಕ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
1983ರಿಂದ ಇದುವರೆಗೆ ಪಿ.ಕೆ.ರಾಯನಗೌಡ್ರ ಸತತವಾಗಿ ಅಲ್ಲದೇ ಒಮ್ಮೆ ಅವಿರೋಧವಾಗಿ ತಮ್ಮ ವಾರ್ಡನಿಂದ ಆಯ್ಕೆಯಾಗಿದ್ದರು. 1996ರಲ್ಲಿ ಅವರ ಸಹೋಧರಿ ಚುನಾಯಿತರಾಗಿದ್ದರು.
ಯುವ ಕಾಂಗ್ರೆಸ್ನಲ್ಲಿ ಕಾರ್ಯನಿರ್ವಹಿಸಿರುವ ಅಲ್ಲದೇ ತಂದೆಯ ನೆರಳಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿವು ರಾಯನಗೌಡರ 40 ನೇ ವಾರ್ಡಿನಿಂದ ಕಣಕ್ಕೆ ಇಳಿಯಲಿದ್ದಾರೆ.
ಕ್ಷೇತ್ರದಲ್ಲಿ ರಾಯನಗೌಡ್ರ ಮಾಡಿದ ಅಭಿವೃದ್ಧಿ ಕಾರ್ಯಗಳು ನೆರವಿಗೆ ಬರಲಿದ್ದು,ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕಾ ಸಮಿತಿ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಪ್ರಣಾಳಿಕೆಯ ಸಮಿತಿಯನ್ನು ರಚಿಸಲಾಗಿದ್ದು
ಮಾಜಿ ಮಹಾಪೌರರಾದ ಅನಿಲಕುಮಾರ್ ಪಾಟೀಲ್, ಪ್ರಕಾಶ ಕ್ಯಾರಕಟ್ಟಿ,ಮಾಜಿ ಉಪ ಮೇಯರ್ ದೀಪಕ್ ಚಿಂಚೋರೆ, ಹಿರಿಯ ಮುಖಂಡರಾದ ಅಶ್ರಫಅಲಿ ಬಷೀರ್ ಅಹ್ಮದ, ಪರ್ವೆe಼ï ಕೊಣ್ಣೂರ್ ಹಾಗು ವಸಂತ್ ಲದ್ವಾ ಇವರುಗಳು ಸಮಿತಿಯಲ್ಲಿದ್ದಾರೆ.
ಗ್ರಾಮೀಣ ಪಟ್ಟಿಯೂ ಬಹುತೇಕ ಅಖೈರು
ಧಾರವಾಡ: ಧಾರವಾಡ- 71 ಕ್ಷೇತ್ರದ ೯ ವಾರ್ಡ್ಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿನ್ನೆ ಬೆಳಗಾವಿಯಲ್ಲೇ ಬಹುತೇಕ ಅಂತಿಮಗೊಳಿಸಲಾಗಿದೆ.
ಮಾಜಿ ಪಾಲಿಕೆ ಸದಸ್ಯ ಪ್ರಕಾಶ ಘಾಟಗೆಗೆ 8 ನೇ ವಾರ್ಡಲ್ಲಿ ಪುನಃ ಮಣೆ ಹಾಕಲಾಗಿದ್ದು, ಮಾಜಿ ಸದಸ್ಯ ಯಾಸೀನ ಹಾವೇರಿಪೇಟ ಅವರ ಪತ್ನಿ ಶಾಹೀನ ಹಾವೇರಿಪೇಟ 6 ನೇ ವಾರ್ಡನಿಂದ ಕಣಕ್ಕಿಳಿಯಲಿದ್ದಾರೆ. ಒಂದೆರಡು ಕ್ಷೇತ್ರದಲ್ಲಿ ಪೈಪೋಟಿಯಿದ್ದು ರಾತ್ರಿಯೊಳಗೆ ಅಂತಿಮಗೊಳ್ಳಲಿದೆ ಎನ್ನಲಾಗಿದೆ.
ಸಂಭವನೀಯರ ಪಟ್ಟಿ ಇಂತಿದೆ: 1-ನಿರ್ಮಲಾ ಹೊಂಗಲ, 2-ಸೂರವ್ವ ಪಾಟೀಲ, 3-ಅಶೋಕ ಹೂಗಾರ, 4-ರಾಜಶೇಖರ ಕಮತಿ/ಬಸವರಾಜ ಹೆಬ್ಬಳ್ಳಿ, 5-ಸತೀಶ ತುರಮರಿ/ಶಿವು ಚನಗೌಡರ, 6-ಶಾಹೀನ ಹಾವೇರಿಪೇಟ, 7-ದೀಪಾ ನೀರಲಕಟ್ಟಿ/ಸುಧೀರ ಪುಠಾಣಿ, 8-ಪ್ರಕಾಶ ಘಾಟಗೆ, 9-ಸುನೀತಾ ಅಂಕೋಲೆಕರ
71ಕ್ಕೆ ಇನ್ನಿಲ್ಲದ ಕಸರತ್ತು!
ಪೂರ್ವ ಕ್ಷೇತ್ರ ವ್ಯಾಪ್ತಿಯ 71 ಸಾಮಾನ್ಯರಿಗೆ ಮೀಸಲಾದ ವಾರ್ಡನ ಕಾಂಗ್ರೆಸ್ ಟಿಕೆಟ್ ಗುದ್ದಾಟ ಮುಂದುವರಿದಿದ್ದು, ಮಾಜಿ ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ ಪಟ್ಟು ಹಿಡಿದಿದ್ದು ಅನೇಕ ಬೆಂಬಲಿಗರೊAದಿಗೆ ಬೆಂಗಳೂರಿಗೆ ದೌಡಾಯಿಸಿದ್ದಾರೆನ್ನಲಾಗಿದೆ.
ಮುಸ್ಲಿಂ ಮತಗಳೇ ನಿರ್ಣಾಯಕವಾಗಿರುವ ವಾರ್ಡ ಇದಾಗಿದ್ದು, ಸಾಮಾನ್ಯರಿಗೆ ಮೀಸಲಾಗಿರವ ಹಿನ್ನೆಲೆಯಲ್ಲಿ ಹಿರಿತನ ಹೊಂದಿರುವಅಲ್ತಾಫ್ ನವಾಜ ಕಿತ್ತೂರ ಸೇರಿದಂತೆ ಅನೇಕ ಆಕಾಂಕ್ಷಿಗಳಿದ್ದಾರೆನ್ನಲಾಗಿದೆ.ಅಲ್ಲದೇ ಮಾಜಿ ಸಚಿವ ಜಮೀರ ಅಹ್ಮದ ಸಹಿತ ಕಿತ್ತೂರ ಪರ ಬ್ಯಾಟಿಂಗ್ಗೆ ಇಳಿದಿದ್ದು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷರಿಂದಲೇ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ತನ್ಮಧ್ಯೆ ಬಿಜೆಪಿ ಜಗನ್ನಾಥ ಪವಾರ ಎಂಬವರಿಗೆ ಟಿಕೆಟ್ ನೀಡಿದ್ದು ಈ ಲಾಭ ಪಡೆಯಲು ಹುನ್ನಾರ ನಡೆಸಿರುವ ಎಐಎಂಐಎAನ ನಜೀರ ಹೊನ್ಯಾಳ ಸಹಿತ ಇಲ್ಲಿ ಅಭ್ಯರ್ಥಿಯಾಗಿದ್ದಾರೆ.
72ನೇ ವಾರ್ಡಗೆ ಕಾಂಗ್ರೆಸ್ನಲ್ಲಿ ಪೈಪೋಟಿಯಿದ್ದು ನಾಲ್ವರ ಮಧ್ಯೆ ಪೈಪೋಟಿಯಿದೆ.