ಹುಬ್ಬಳ್ಳಿ: ಗೋವಾದಲ್ಲಿ ಈಚೆಗೆ ನಡೆದ ಐಎಫ್‌ಸಿಆರ್ ಫ್ರೇಂಡ್ಸ್‌ಶಿಪ್ ಕಪ್-2023ರ ಲೆದರಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಹುಬ್ಬಳ್ಳಿ ರೋಟರಿ 3170 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ತಂಡ ಮೊದಲ ಬ್ಯಾಟಿಂಗ್ ಮಾಡಿ 20 ಓವರನಲ್ಲಿ 9ಹುದ್ದರಿ ನಷ್ಟಕ್ಕೆ 173ರನ್ ಗಳಿಸಿತು. ತಂಡದ ಪರ ಪ್ರಕಾಶ ಇರಕಲ್ ಅಜೇಯ 31(19ಎ), ಗುರದೀಪ ಸಿಂಗ್ 31(19ಎ), ರಾಜು ಕರೂರ 26 (17ಎ) ಉತ್ತಮ ಬ್ಯಾಂಟಿಂಗ ಮಾಡಿದರು. ಈ ರನ್ ಬೆನ್ನು ಹತ್ತಿದ ಕೊಲ್ಕತ್ತಾ ತಂಡ 20ಓವರ್‌ನಲ್ಲಿ 8 ಹುದ್ದರಿ ನಷ್ಟಕ್ಕೆ 144 ರನ್‌ಗೆ ತನ್ನ ಹೋರಾಟ ಮುಗಿಸಿ ಸೋಲು ಅನುಭವಿಸಿದರು. ಪ್ರಕಾಶ ಇರಕಲ್ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು. ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡ ೨೦ ಓವರನಲ್ಲಿ 6 ಹುದ್ದರಿ ನಷ್ಟಕ್ಕೆ 126 ಗಳಿಸಿತು. ತಂಡದ ಪರ ಪ್ರಕಾಶ ಇರಕಲ್ 26 (18ಎ), ಜಾನ್ ಚಾರ್ಲಿ 30(27ಎ) ಉತ್ತಮ ಬ್ಯಾಟಿಂಗ್ ಆಡಿದರು. ಈ ರನ್ ಬೆನ್ನುಹತ್ತಿದ ಹಾಸನ ವೆಟರನ್ಸ್ ತಂಡ 17.3 ಓವರನಲ್ಲಿ5 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿ 5 ವಿಕೆಟ್‌ನಿಂದ ಪಂದ್ಯ ಜಯಗಳಿಸಿದರು. ಹಾಸನ ತಂಡದ ಎಚ್.ದಿನೇಶ ಪಂದ್ಯ ಪ್ರಶಸ್ತಿ ಪಡೆದುಕೊಂಡರು.
ರನ್‌ರೇಟ್ ಆಧಾರದಲ್ಲಿ ಹುಬ್ಬಳ್ಳಿ ರೋಟರಿ ತಂಡ ಫೈನಲ್ ಪ್ರವೇಶ ಪಡೆಯಿತು. ಫೈನಲ್ ಪಂದ್ಯದಲ್ಲಿ ಚೆನ್ನೈ ಲೆಜೆಂಡ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರನಲ್ಲಿ ಎಲ್ಲ ಹುದ್ದರಿ ಕಳೆದುಕೊಂಡು 131ರನ್ ಗಳಿಸಿತು. ಈ ರನ್ ಬೆನ್ನು ಹತ್ತಿದ ಹುಬ್ಬಳ್ಳಿ ರೋಟರಿ 3170 ತಂಡ 7 ಹುದ್ದರಿ ನಷ್ಟಕ್ಕೆ 131ರನ್ ಗಳಿಸಿತು. ಇದರಿಂದ ಈ ಪಂದ್ಯ ಟೈ ಆಯಿತು. ಸುಪರ್ ಓವರ್ ಆಡಲು ಚೆನ್ನೈ ಲೆಜೆಂಡ್ ಒಪ್ಪದ ಕಾರಣ ನಿರ್ಣಾಯಕರು ಹಾಗೂ ಆಯೋಜಕರು ಹುಬ್ಬಳ್ಳಿ ರೋಟರಿ 3170 ತಂಡ ಜಯಗಳಿಸಿತು ಎಂದು ಘೋಷಣೆ ಮಾಡಿದರು. ರಾಜು ಕರೂರ ಅವರಿಗೆ ಪಂದ್ಯ ಪುರುಷ ಪ್ರಶಸ್ತಿ ನೀಡಲಾಯಿತು.