ಹುಬ್ಬಳ್ಳಿ-ಧಾರವಾಡ ಸುದ್ದಿ

ಹುಬ್ಬಳ್ಳಿಯಲ್ಲಿ ರಣಜಿ ಆಟಗಾರರಿಬ್ಬರ ಮೋಜು ಮಸ್ತಿ?

ನಗರದ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸ

ಹುಬ್ಬಳ್ಳಿ: ಪಂಜಾಬ್ ವಿರುದ್ಧದ ರಣಜಿ ಪಂದ್ಯ ಆಡಲು ನಗರಕ್ಕೆ ಬಂದಿದ್ದ ಕ್ರಿಕೆಟ್ ಆಟಗಾರರ ಪೈಕಿ, ಇಬ್ಬರು ಉದಯೋನ್ಮುಖ ಆಟಗಾರರು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮೋಜು, ಮಸ್ತಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ನಗರದ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ರಾತ್ರಿ ವೇಳೆ ಪಾರ್ಟಿಗೆ ಹಾಜರಾಗಿರುವ ಈ ಆಟಗಾರರು, ಮದಿರಾ ಪಾನ ಮಾಡಿದ್ದಲ್ಲದೇ, ಹುಡುಗಿಯರ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆನ್ನಲಾಗಿದ್ದು, ಇದು ನಗರದ ಕ್ರಿಕೆಟ್ ಪ್ರೇಮಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅನೇಕ ದಿನಗಳ ನಂತರ ನಗರದಲ್ಲಿ ರಣಜಿ ಪಂದ್ಯ ಆಯೋಜನೆಯಾಗಿ ಕರ್ನಾಟಕ ಗೆಲುವು ಸಾಧಿಸಿದ್ದರೂ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಬ್ಬರ ವರ್ತನೆ ಹುಬ್ಬಳ್ಳಿಯ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.


ಕ್ರಿಕೆಟ್ ಆಟಗಾರರ ವಿಡಿಯೊ, ಫೋಟೋಗಳು ಹೊಟೇಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ಅವು ಹೊರ ಬರಬರಬೇಕಿದೆ. ವಿಮಾನ ನಿಲ್ದಾಣ ಸಮೀಪದ ಬಳಿಯ ಹೊಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಆಟಗಾರರು ಸ್ಥಳೀಯ ಪದಾಧಿಕಾರಿಗಳಿಬ್ಬರ ಜತೆ ಮೋಜು ಮಸ್ತಿಗೆ ತೆರಳಿದ್ದು, ಪಂದ್ಯ ಆಡಲು ಬಂದಿರುವ ಆಟಗಾರರು ಕೆಎಸ್‌ಸಿಎ ನಿಯಮಗಳನ್ನು ಗಾಳಿಗೆ ತೂರಿದ್ದಾರೆಂಬ ಮಾತು ಕೇಳಿ ಬರುತ್ತಿದೆ.

 

administrator

Related Articles

Leave a Reply

Your email address will not be published. Required fields are marked *