ನವಲಗುಂದ: ದೇಶದ ಅಖಂಡತೆ, ಸಾರ್ವಭೌಮತ್ವದ ಉಳಿವಿಕೆಗೆ ಬಲಿದಾನ ಗೈದ ಧೀಮಂತ ನಾಯಕ ಹಾಗೂ ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶಾಮಪ್ರಸಾದ ಮುಖರ್ಜಿ ಅವರು ದೇಶಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಅದರಂತೆಯೇ ವಿದ್ಯಾರ್ಥಿಗಳು ಕೂಡಾ ತಮ್ಮ ಜೀವನದಲ್ಲಿ ಶಿಸ್ತು ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಟ್ಟು ನಮ್ಮ ತಾಲೂಕಿನಲ್ಲಿಯೂ ಕೂಡಾ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಬೇಕು ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ ೨೦೮ ಮೋಬೈಲ್ ಟ್ಯಾಬಗಳನ್ನು ವಿತರಿಸಿ ಹಾಗೂ ರೈತ ಯುವ ಮೋರ್ಚಾ ನವಲಗುಂದ ಮಂಡಳ ವತಿಯಿಂದ ಡಾ. ಶಾಮ ಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆ ನಿಮಿತ್ತ ಕಾಲೇಜು ಆವರಣದಲ್ಲಿ ೫ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದರು.
ಕೋವಿಡ್ ಜೊತೆಯಲ್ಲಿಯೇ ಎಲ್ಲರೂ ಜೀವನ ನಡೆಸುವುದು ಅನಿವಾರ್ಯ ವಾಗಿದೆ. ತಾಲೂಕಿನಲ್ಲಿ ಪ್ರತಿ ಭೂತ ಮಟ್ಟದಲ್ಲಿ ೧೦ ಸಸಿಗಳನ್ನು ನೀಡುವುದು ಹಾಗೂ ಶಾಲಾ, ಕಾಲೇಜು ಆವರಣಗಳಲ್ಲಿ ಮತ್ತು ತಮ್ಮ ಮನೆಗಳ, ಜಮೀನು ಗಳಲ್ಲಿ ಸಸಿಗಳನ್ನು ಉಚಿತವಾಗಿ ನೀಡುವಂತೆ ವ್ಯವಸ್ಥೆ ಮಾಡಿಸಲಾಗುವುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆ ಹಾಗೂ ಶಾಲಾ ಆವರಣದಲ್ಲಿ ಹಚ್ಚಿರುವ ಸಸಿಗಳನ್ನು ಸಂರಕ್ಷಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೋ. ಸಂಜೋತಾ ಎಸ್.ಶಿರಸಂಗಿ, ಎಸ್.ಬಿ.ದಾನಪ್ಪಗೌಡ್ರ, ಶಂಕರಗೌಡ ರಾಯನಗೌಡ್ರ, ಅಣ್ಣಪ್ಪ ಬಾಗಿ, ನಾಗೇಶ ಬೆಂಡಿಗೇರಿ, ಮಾಂತೇಶ ಕಲಾಲ, ಎಸ್.ಎಂ.ಪಟ್ಟಣಶೆಟ್ಟಿ, ಪ್ರೋ.ವಿನಾಯಕ ಮೀರಜಕರ, ಪ್ರೋ. ಬಸುರಾಜ ಸೂಡಿ, ಪ್ರೋ.ಡಿ.ವಿ.ಸುಘಣಾ, ಎಸ್.ಎಂ.ಪಟ್ಟಣಶೆಟ್ಟಿ, ದೋಟಿಕಲ್ ಸರ್., ಈರಣ್ಣ ದೊಡ್ಡಮನಿ, ವಿನಾಯಕ ದಾಡಿಭಾವಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರಿದ್ದರು.