ಹುಬ್ಬಳ್ಳಿ-ಧಾರವಾಡ ಸುದ್ದಿ
ನೇಪಿಯರ್ ಗ್ರಾಸ್ ಬೆಳೆಯಲು ನಟಿ ಪ್ರೇಮಾ ಸಲಹೆ

ನೇಪಿಯರ್ ಗ್ರಾಸ್ ಬೆಳೆಯಲು ನಟಿ ಪ್ರೇಮಾ ಸಲಹೆ

ನೂತನ ಎಂ.ಸಿ.ಎಲ್.ಕಚೇರಿ ಉದ್ಘಾಟನೆ

ಬಾದಾಮಿ: ರೈತರು ಇಂದಿನ ದಿನಮಾನಗಳಲ್ಲಿ ಕೃಷಿ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ನೇಪಿಯಾರ್ ಗ್ರಾಸ್ ಬೆಳೆಸುವುದರಿಂದ ಅಧಿಕ ಲಾಭ ಹಾಗೂ ಭೂಮಿ ಫಲವತ್ತತೆಯಿಂದ ಇರುತ್ತದೆ ಎಂದು ಖ್ಯಾತ ಚಲನಚಿತ್ರ ನಟಿ, ತಾರೆ ಪ್ರೇಮಾ ಹೇಳಿದರು.


ಅವರು ಪಟ್ಟಣದ ಎಸ್.ಎಫ್.ಹೊಸಗೌಡ್ರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಅಗಸ್ತ್ಯ ಫಾರ್ಮರ್ಸ ಪ್ರೊಡ್ಯೂಸರ್ ಕಂಪನಿಯ ಎಂ.ಸಿ.ಎಲ್.ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ಇದು ರೈತರ ಉಜ್ವಲ ಭವಿಷ್ಯದ ಭರವಸೆಯ ಯೋಜನೆಯಾಗಿದೆ. ಬನ್ನಿ ನಮ್ಮೊಂದಿಗೆ ಕೈಜೋಡಿಸಿ ಹಸಿರು ಕ್ರಾಂತಿ ಸೇರಿಕೊಳ್ಳಿರಿ ಎಂದು ಮನವಿ ಮಾಡಿದರು.
ಬಿಡಿಎ ಎಂ.ಸಿ.ಎಲ್.ಇಂಡಿಯಾ ಸಿನಿಯರ್ ಶ್ರವಣ ಮಾನೆ ಮಾತನಾಡಿ, ದೇಶದಲ್ಲಿಯೇ ಎಂ.ಸಿ.ಎಲ್.ಕಂಪನಿ ಮಹತ್ವವಾದ ಸಾಧನೆಯನ್ನು ಮಾಡುತ್ತಿದೆ. ನೇಪಿಯರ್ ಹುಲ್ಲಿನಿಂದ ಸಿ.ಎನ್.ಜಿ.ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಮಾಡಿ ಬೇರೆ ದೇಶಕ್ಕೆ ರಫ್ತು ಮಾಡಿ ನಮ್ಮ ದೇಶವನ್ನು ಸ್ವಾವಲಂಬಿ ಮಾಡಲು ಎಲ್ಲ ಯುವಕರು, ರೈತರು ಮಹಿಳೆಯರು ಪಣ ತೊಡಬೇಕು ಎಂದು ಹೇಳಿದರು.


ಸಿದ್ಧನಕೊಳ್ಳದ ಡಾ.ಶಿವಕುಮಾರ ಶ್ರೀ ಮಾತನಾಡಿ, ಕಿರಣ ಕಟ್ಟೀಮನಿಯವರು ಶ್ರೀಮಂತರಿದ್ದರೂ ಸಹಿತ ತಮ್ಮ ಹುಟ್ಟೂರಾದ ಬಾದಾಮಿಯನ್ನು ಸುವರ್ಣ ಬಾದಾಮಿ ಮಾಡಲು ಎಂ.ಸಿ.ಎಲ್.ಕಂಪನಿಯಿಂದ ಬಾದಾಮಿಯಲ್ಲಿ ಫ್ಯಾಕ್ಟರಿ ಮಾಡಿ ಸಾವಿರಾರು ಯುವಕರಿಗೆ ಕೆಲಸ, ಹಾಗೂ ರೈತರಿಗೆ ಆದಾಯ ಕೊಡುವಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ. ತಾಲೂಕಿನ ಎಲ್ಲ ರೈತರು ಎಂ.ಸಿ.ಎಲ್.ಕಂಪನಿಯ ಷೇರುದಾರರಾಗಿ ಅವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.


ಮಿತಾಲಿ ಮಾನೆ, ಉಮದಿ ತಾಲೂಕಿನ ಎಂ.ಪಿ.ಓ. ಸಂತೋಷ ಸಣದಿ, ಕೃಷಿ ಅಧಿಕಾರಿ ಆನಂದಗೌಡ ಗೌಡರ, ಉದಯ ಶೆಟ್ಟಿ, ಅಶುತೋಷ ಮಾನೆ, ನಾರಾಯಣ ಹುನಗುಂಡಿ, ಸಂಜೀವ ಗುಂಡೊಜಿ ಜಾಧವ, ಸಂತೋಷ ಕುಷ್ಟೆ, ಮುರುಳಿಧರ ಕೊಪ್ಪಳ, ರಾಜಶೇಖರ ಚಾವಾಯಿ, ನಿಂಗಪ್ಪ ನಿಂಬಾಳಕರ, ಮಹೇಶ ಪಾಟೀಲ, ಮಹೇಶ ನಾಂದ್ರೇಕರ, ಜೋಯಿಡಾ, ಪ್ರವೀಣ ಪಾಟೀಲ, ಮಹದೇವ ಕೌಜಲಗಿ, ಶ್ರೀನಿವಾಸ ಧೋತರೆ, ಅತೀಫ್ ಉಲ್ಲಾ, ಎಂ.ಜಿ.ಗೌಡರ ಮಾತನಾಡಿದರು.

ಮುಂಬೈ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಾನೆ, ಕಂಪನಿಯ ಸಿಇಒ ವಿದ್ಯಾಶ್ರೀ ಹಾಜರಿದ್ದರು. ನೇಕಾರರು, ಕೌದು ಹೊಲೆಯುವವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಲಾವಿದರು, ರೈತರನ್ನು ಸನ್ಮಾನಿಸಲಾಯಿತು.

ಪ್ರದೀಪ ಪೂಜಾರ, ಬಸವರಾಜ ಹಂಪಿಹೊಳಿಮಠ, ರಾಘವೇಂದ್ರ ರಾಮದುರ್ಗ, ಸಾಗರ ವಡ್ಡರ, ಬಸವರಾಜ ಗೋಗೇರಿ, ಲಲಿತಾ ದಾನಪ್ಪನವರ, ಪಿ.ಎ.ಶಿರಹಟ್ಟಿ, ವಸ್ತಲಾ ರಾಮದುರ್ಗ, ರುದ್ರಪ್ಪ ಹುಣಸಿಕಟ್ಟಿ, ಅರ್ಜುನ ಗಲಿಗಲಿ, ಶ್ರೀನಿವಾಸ ಪಾಟೀಲ, ಹನಮಂತ ಹಾಳಕೇರಿ, ಸುಲೋಚನಾ ಪಾರ್ವತಿಮಠ, ಬಸವರಾಜ ಗೌಡಪ್ಪನವರ, ಶ್ರೀನಿವಾಸ ನಾಯಕ, ಶ್ರೀದೇವಿ ಬಾರಕಿ, ಶೈಲಾ ಗೊಗೇರಿ, ಮಂಜುನಾಥ ರಾಮದುರ್ಗ, ಶಶಿಧರ ವಸ್ತ್ರದ ಸೇರಿದಂತೆ ಎಂ.ವಿ.ಪಿ.ಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ನಿರ್ದೇಶಕ ರಂಗು ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಗುಳೇದಗುಡ್ಡ ರೈತ ಗೀತೆ ಹಾಡಿದರು. ಸುಶ್ಮಾ ಪಾರ್ವತಿಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

administrator

Related Articles

Leave a Reply

Your email address will not be published. Required fields are marked *