ಹುಬ್ಬಳ್ಳಿ-ಧಾರವಾಡ ಸುದ್ದಿ
ಕಲಘಟಗಿ ಕ್ಷೇತ್ರದಲ್ಲೇ ಉಳಿದು ಜನಸೇವೆ-ಲಾಡ್

ಕಲಘಟಗಿ ಕ್ಷೇತ್ರದಲ್ಲೇ ಉಳಿದು ಜನಸೇವೆ-ಲಾಡ್

ಕಲಘಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ನೂರಾರು ಕೋಟಿಗಳಲ್ಲಿ ಖರೀದಿ ಮಾಡಿ ಹಿಂಬಾಗಿಲಿನಿAದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರ ಹಿಡಿತದಲ್ಲಿಯೇ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತವನ್ನು ನಡೆಸುವಂತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.
ಉತ್ತರ ಕನ್ನಡ ಜಿಲ್ಲೆಯ ನೇರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡುವುದಕ್ಕಾಗಿ ಕಲಘಟಗಿ ಮಾರ್ಗವಾಗಿ ಹೋಗುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್‌ರ ನಿವಾಸದಲ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.


ಕಲಘಟಗಿ ಮತಕ್ಷೇತ್ರದಿಂದ ಎರಡು ಬಾರಿ ಆಯ್ಕೆಮಾಡಿ ಸಚಿವರನ್ನು ಮಾಡಿದ ಮತದಾರರು ಮೂರನೇ ಬಾರಿ ಯಾಕೆ ಪರಾಭವಗೊಳಿಸಿದ್ದಿರಿ, ಮುಂದೆ ಅವರನ್ನು ಬೆಂಬಲಿಸಿರಿ. ಲಾಡ್ ಕ್ಷೇತ್ರದ ನಾಯಕ ಅಲ್ಲ, ರಾಜ್ಯದ ನಾಯಕನಾಗಿದ್ದಾರೆ ಎಂದು ಹೇಳಿದರಾದರೂ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವಂತೆ ಸಭೆಯಲ್ಲಿ ಕೇಳಿದಾಗ ಅದನ್ನು ನಾನೂ ಈಗ ಹೇಳುವುದಿಲ್ಲ ಎಂದರು.


ಮಾಜಿ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ, ತಮ್ಮ ಅವಧಿಯಲ್ಲಿ ಕ್ಷೇತ್ರದ ಜನಪರ ಅಭಿವೃದ್ದಿ ಕಾರ್ಯ-ಕೆಲಸಗಳನ್ನು ಮಾಡಿರುವದು ಜನತೆಗೆ ತೃಪ್ತಿತಂದಿದೆ. ನನ್ನ ಬದುಕಿನ ರಾಜಕೀಯ ಜೀವನವನ್ನು ಕಲಘಟಗಿ ಕ್ಷೇತ್ರದಲ್ಲಿಯೇ ಉಳಿದುಕೊಂಡು ಜನಸೇವೆ ಮಾಡುವುದಾಗಿ ಹೇಳಿದರಲ್ಲದೇ ಬೇರೆ ಕ್ಷೇತ್ರದ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.
ಶಾಸಕಿ ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಜಿಲ್ಲಾ ಅಧ್ಯಕ್ಷ ಅನಿಲ ಕುಮಾರ ಪಾಟೀಲ, ಇಸ್ಮಾಯಿಲ್ ತಮಾಟಗಾರ, ರಾಜಶೇಖರ ಮೆಣಸಿನಕಾಯಿ, ತಾಲೂಕಿನ ಮುಖಂಡರಾದ ಎಸ್.ಆರ್. ಪಾಟೀಲ, ಯಲ್ಲಪ್ಪ ದಾಸನಕೊಪ್ಪ, ಮಂಜುನಾಥಗೌಡ ಮುರಳ್ಳಿ, ಎಂ.ಎನ್. ಹರಿಶಂಕರ್, ಸೋಮಶೇಖರ ಬೆನ್ನೂರ, ಲಿಂಗರೆಡ್ಡಿ ನಡವುವಿನಮನಿ, ಎನ್.ಎಸ್. ಬೆಳ್ಳಿವಾಲೆ, ಎಸ್.ಎನ್. ರಾಯನಾಳ, ಬಸವರಾಜ ಬಾವುಕಾರ, ಸುರೇಶ ಕ್ಯಾರಿಕೊಪ್ಪ, ಬಾಬಾಜಾನ ತೆರಗಾಂವ್, ಅಣ್ಣಪ್ಪ ದೇಸಾಯಿ, ಅಜಮಹತ್ ಜಾಹಗಿರದಾರ, ವೆಂಕಟೇಶ ಬಂಡಿವಡ್ಡರ್, ಸುಧೀರ ಬೋಳಾರ, ಬಸಯ್ಯ ಅಣ್ಣಿಗೇರಿ, ಸಿದ್ದು ತಲೆಬಾಗಿಲ, ಬಾಳು ಖಾನಾಪೂರ, ರಾಜಶೇಖರ ಚಿಕ್ಕಮಠ ಸೇರಿದಂತೆ ಸಾವಿರಾರು ಕಾರ್ಯಕರ್ತರಿದ್ದರು.

administrator

Related Articles

Leave a Reply

Your email address will not be published. Required fields are marked *