ಹುಬ್ಬಳ್ಳಿ-ಧಾರವಾಡ ಸುದ್ದಿ
ದಾಂಡೇಲಿಯಲ್ಲಿ ನಡೆದ ಜಗತ್ತಿನ ಬಹುದೊಡ್ಡ ಸ್ಪರ್ಧೆ;  ಕನ್ನಡಿಗ ಪ್ರಶಾಂತ ಹಿಪ್ಪರಗಿ ಮಹತ್ವದ ಸಾಧನೆ

ದಾಂಡೇಲಿಯಲ್ಲಿ ನಡೆದ ಜಗತ್ತಿನ ಬಹುದೊಡ್ಡ ಸ್ಪರ್ಧೆ; ಕನ್ನಡಿಗ ಪ್ರಶಾಂತ ಹಿಪ್ಪರಗಿ ಮಹತ್ವದ ಸಾಧನೆ

ಹುಬ್ಬಳ್ಳಿ: ಜಗತ್ತಿನ ಅತಿದೊಡ್ಡ ಸ್ಪರ್ಧೆಗಳಲ್ಲಿ ಒಂದಾದ ನೂರಾರು ಕಿ.ಮೀ ಸೈಕ್ಲಿಂಗ್, ಗುಡ್ಡಗಾಡು ಓಟ, ಓಡುತ್ತಾ, ಓಡುತ್ತಾ ಬೆಟ್ಟ ಹತ್ತುವುದರಲ್ಲಿ ಕನ್ನಡಿಗ ವಿಜಯಪುರ ಜಿಲ್ಲೆ ತುಂಗಳ ಗ್ರಾಮದ ಪ್ರಶಾಂತ ಹಿಪ್ಪರಗಿ ಮಹತ್ವದ ಸಾಧನೆ ತೋರಿದ್ದಾರೆ.


ಲಕ್ನೋದ ಮೊಬಿನೋ ಸ್ಫೋರ್ಟ್ ಕಾರವಾರ ಜಿಲ್ಲೆ ದಾಂಡೇಲಿಯ ಕಾಳಿ ನದಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮೂರು ದಿನ ಕಾಲ ಏರ್ಪಡಿಸಿದ್ದ ಸ್ಪರ್ಧೆ ಬಹಳ ಕಠಿಣವಾಗಿತ್ತು.

ಈ ಮುಕ್ತ ಸ್ಪರ್ಧೆಗೆ 20 ಜನ ಹೆಸರು ನೋಂದಾಯಿಸಿದ್ದರು. ಇವೆಂಟ್‌ಗಳ ಪಟ್ಟಿ ನೋಡಿ 17 ಜನರು ಹಿಂದೆ ಸರಿದರು. ಉಳಿದ ಮೂವರಲ್ಲಿ ಒಬ್ಬರು ಅರ್ಧದಲ್ಲೇ ಹಿಂದೆ ಸರಿದರು. ಅದಲ್ಲಿ ಪ್ರಶಾಂತ್ ಒಬ್ಬರೇ ಮಾತ್ರ ಮೂರು ದಿನಗಳ ಗುರಿಯನ್ನು ನಿರ್ದಿಷ್ಟವಾಗಿ ತಲುಪಿದರು.

ಮೊದಲ ದಿನ ಕಾಳಿ ನದಿಯಲ್ಲಿ 15 ಕಿ.ಮೀ ಈಜು, 75 ಕಿ.ಮೀ ಸೈಕ್ಲಿಂಗ್, ಎರಡನೇ ದಿನ 325 ಕಕಿ.ಮೀ ಹಿಲ್ ಸೈಕ್ಲಿಂಗ್ (ಸೈಕಲ್ ಬೆಟ್ಟ ಹತ್ತಿಸುವುದು), ಇದು ಬಹಳ ಕಷ್ಟಸಾಧ್ಯ.
ಮೂರನೇ ದಿನ 100 ಕಿ.ಮೀ ಹಿಲ್ ರನ್ನಿಂಗ್ (ಓಡುತ್ತಾ ಗುಡ್ಡ ಹತ್ತುವುದು). ಹೀಗೆ ಮೂರು ದಿನ ನಿರ್ದಿಷ್ಟ ಗುರಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಪ್ರಶಾಂತ ಹಿಪ್ಪರಗಿ, ಇವರು ಪುಣೆಯ ಕಂಪೆನಿಯೊಪ0ದರಲ್ಲಿ ಸಿನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸೈಕ್ಲಿಂಗ್, ಗುಡ್ಡಗಾಡು ಓಟ, ಈಜುವುದು ಹವ್ಯಾಸವಾಗಿವೆ.
ಅಮೆರಿಕ ಮತ್ತು ಆಸ್ಟ್ರೇಲಿಯಾದವರು ಏರ್ಪಡಿಸುವ ಅಲ್ಟ್ರಾಮ್ಯಾನ್ ಸ್ಪರ್ಧೆಗಿಂತ ಈ ಸ್ಪರ್ಧೆ ಬಲು ಕಠಿಣವಾಗಿದ್ದಾಗಿದೆ.

ನನ್ನ ಈ ಸಾಧನೆಗೆ ಪ್ರೋತ್ಸಾಹ ನೀಡಿದ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ, ಸದಾನಂದ ಅಮರಾಪುರ, ಅಕ್ಷಯ ಚನ್ನಗೌಡ ಹಾಗೂ ಸ್ವಯಂ ಅವರಿಗೆ ಧನ್ಯವಾದಗಳು. ನನ್ನ ಸಾಧನೆಯ ಹಾದಿಗೆ ಸದಾ ಬೆಂಬಲವಾದ ಪತ್ನಿ ಅನಿತಾ ಅವರಿಗೂ ಧನ್ಯವಾದ ಹೇಳುವೆ ಎಂದು ಸಂಜೆ ದರ್ಪಣಕ್ಕೆ ತಿಳಿಸಿದರು.

Prashant Hipparagi
administrator

Related Articles

Leave a Reply

Your email address will not be published. Required fields are marked *