ಹುಬ್ಬಳ್ಳಿ-ಧಾರವಾಡ ಸುದ್ದಿ
ಅಮ್ಮ ಎಂಬ ಬದುಕಿನ ಶಿಲ್ಪಿ

ಅಮ್ಮ ಎಂಬ ಬದುಕಿನ ಶಿಲ್ಪಿ

ಅವ್ವ, ಅಮ್ಮ, ಮಾತಾ, ಮಮ್ಮಿ, ಹೀಗೆ ಕರೆಯಲ್ಪಡುವ ತಾಯಿ ಕುರಿತು ಮಾತನಾಡಲು ಪ್ರಾರಂಭಿಸಿದರೆ, ಅದು ಮುಗಿಯುವುದೇ ಇಲ್ಲ, ಅಥವಾ ಏನೂ ಮಾತೆ ಬರೆದು.
ಹೌದು ಇದು ಸತ್ಯ. ಪ್ರತಿ ವ್ಯಕ್ತಿಯ ಬದುಕಿನ ಶಿಲ್ಪಿ ಅವಳು. ತಾಯಿ ಅವಳು ದೇವರು, ಅವಳು ನಮ್ಮ best friend. ನನ್ನ ಬದುಕಿನ ರೂವಾರಿ ಅವಳು. ಮಗು ಹುಟ್ಟಿದಾಗಿನಿಂದ ತನ್ನತನವನ್ನು ಮರೆತು ತನ್ನ ಜೀವನವನ್ನು ಮಗುವಿಗೆ ಮೀಸಲಾಗಿಡುವ ವ್ಯಕ್ತಿತ್ವ ಅವಳದು. ಅದಕ್ಕೆ ಹೇಳುವುದು ತಾನೇ ಜಗತ್ತಿನಲ್ಲಿ ಕೆಟ್ಟ ವ್ಯಕ್ತಿ ಇರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು. ಅದಕ್ಕೆ ಜನಪದರು ಈ ರೀತಿ ಹೇಳುತ್ತಾರೆ,-
’ಬೇಸಿಗೆಯ ದಿವಸಕ ಬೇವಿನ ಮರ ತಂಪು
ಭೀಮರತಿ ಎಂಬ ನದಿ ತಂಪು
ಭೀಮರತಿ ಎಂಬ ನದಿ ತಂಪು ಹಡೆದವ್ವ,
ನೀನಿರಲು ತಂಪು ತವರಿಗೆ”
ಎಂದು. ತನ್ನೆಲ್ಲವನ್ನೂ ಮಗುವಿಗೆ ಧಾರೆಯೆರೆದು ಅವನನ್ನ ಒಂದು ಉತ್ತಮ ನಾಗರಿಕನಾಗಿ ಮಾಡುವಲ್ಲಿ ತಾಯಿಯ ಪಾತ್ರ ಅತ್ಯಂತ ಪ್ರಮುಖ. ತಾಯಿ ಮತ್ತು ಮಗುವಿನ ಸಂಬಂಧ ಅಂದರೆ ಅದು ಒಂದು ಜನಾಂಗದ ನಡುವಿನ ಅಂತರ ಎಂದು ಹೇಳಬಹುದು.


ಚಿಕ್ಕವರಿದ್ದಾಗ ನನಗೆ ಹಾಲುಣಿಸಿ, ನನಗೆ ಊಟ ಮಾಡಿಸಿ, ನನ್ನ ಕೈ ಹಿಡಿದು ನಡೆಸಿ ನನ್ನ ದಾರಿಗೆ ಹಚ್ಚುವ ನನ್ನವ್ವನ್ನು ನಾನು ದೊಡ್ಡವನಾದ ಮೇಲೆ ಯಾವ ರೀತಿ ಕಾಣುತ್ತೇನೆ ಎಂಬುದನ್ನು ನಾನೊಂದು ಸಲ ಅವಲೋಕನ ಮಾಡುವುದು ಅತ್ಯಂತ ಅವಶ್ಯಕ. ಏಕೆಂದರೆ ಈಗ ಜಗತ್ತು ಎಲ್ಲವನ್ನ ಲಾಭದಾಯಕ ದೃಷ್ಟಿಯಲ್ಲಿ ನೋಡುತ್ತದೆ. ನನಗೆ ಉಪಯೋಗ ಬರುವುದಿಲ್ಲ ಎಂದು ಅರ್ಥವಾದಾಗ ಅವಳನ್ನು ನಾನು ಹಾಗೆ ಆಗದಂತೆ ನೋಡಿಕೊಳ್ಳುವುದು ತಾಯಂದಿರ ದಿನದ ಆಶಯವಾಗಲಿ.
ಈ ಲೇಖನ ಬರೆಯಬೇಕೆಂದು ಎನಿಸಿದಾಗ ನನ್ನವ್ವ ಹೇಳುತ್ತಿದ್ದ ಮಾತುಗಳು ಈಗ ನನಗೆ ನೆನಪಾಗುತ್ತವೆ. ಒಬ್ಬ ತಾಯಿ ಮಗು ಎಷ್ಟೇ ಕಾಡಿದರು ಅವನ ಒಂದು ಅಶ್ರೇಯಸ್ಸಿಗೆ ಎಂದು ಅವಳು ಬಯಸುವುದಿಲ್ಲ. ನಿನಗೆ ನೀನು ತಾಯಿಯಾದಾಗ ಇದು ಅರ್ಥವಾಗುತ್ತದೆ ಎಂದು. ಹೌದು ಇದು ಸತ್ಯ ಎಲ್ಲ ಹೆಣ್ಣು ಮಕ್ಕಳಿಗೆ ತಾನು ತಾಯಿ ಆಗುವಂತಹ ಖುಷಿ ಅತ್ಯಂತ ಒಂದು ಸುಖಕರವಾಗಿ ತಕ್ಕಂತಹ ಅನುಭವ.


ಮಗು ಜನ್ಮ ಪಡೆಯುವ ಸಮಯದಲ್ಲಿ ಅವಳು ಅನುಭವಿಸುವ ಕಷ್ಟ ಯಾರಿಗೂ ಬೇಡ ಆದರೂ ಕೂಡ ಮಗು ಹುಟ್ಟಿದಾಗ ಕಷ್ಟ ಏನು ಎಂದು ಅವಳಿಗೆ ಅರ್ಥವೇ ಆಗುವುದಿಲ್ಲ ಮಗು ಬೆಳೆಯುತ್ತಾ ಹೋದಂತೆ ಮಗುವಿನ ಖುಷಿಯಲ್ಲಿಯೇ ತನ್ನತನವನ್ನು ನೋಡಿಕೊಂಡು ಅವಳು ಸಹ ಖುಷಿ ಪಡುತ್ತಾಳೆ.
ಒಬ್ಬ ವ್ಯಕ್ತಿ ಅತ್ಯಂತ ಉತ್ತುಂಗಕ್ಕೆ ಏರಿದಾಗ ಖುಷಿಪಡುವ ಮೊದಲನೇ ವ್ಯಕ್ತಿ ಎಂದರೆ ತಾಯಿ ತಾನೇ. ಒಬ್ಬ ವ್ಯಕ್ತಿಗೆ ಅತ್ಯಂತ ದುಃಖವಾದಾಗ ದುಃಖಪಡುವ ಮೊದಲನೇ ವ್ಯಕ್ತಿ ತಾಯಿ ತಾನೇ. ನನ್ನ ಪ್ರತಿ ಹೆಜ್ಜೆಯಲ್ಲಿಯೂ ಅವಳು ಹೆಜ್ಜೆಯಾಗಿ, ನಾನು ಸ್ವತಂತ್ರನಾಗಿ ಈ ಜೀವನದಲ್ಲಿ ಉತ್ತಮ ನಾಗರಿಕನಾಗಿ ಬಾಳುವ ಈ ಕನಸಿಗೆ ಅವಳ ವಾತ್ಸಲ್ಯದ ಸೂತ್ರವೇ ಅತ್ಯಂತ ಪ್ರಮುಖವಾಗಿರುತ್ತದೆ.
ನನಗೆ ಬುದ್ಧಿ ಬರುವ ವರೆಗೂ ನಾನು ಮಾಡುವ ಯಾವುದೇ ಹೊಲಸು ಅವಳಿಗೆ ಹೊಲಸು ಅನಿಸುವುದೇ ಇಲ್ಲ. ಆಟ ಆಡಿ ಬಂದಾಗ ನನ್ನ ಕೈಕಾಲು ಹೊಲಸಾದಾಗ ಅದನ್ನು ತೊಳಿಯುವುದರಲ್ಲಿ ಅವಳು ಖುಷಿಪಡುತ್ತಾಳೆ. ಹೊರತು ಅವಳಿಗೆ ಎಂದು ಅದರ ಕುರಿತು ಬೇಸರವಿಲ್ಲ. ನಾನು ಶಾಲೆಯಲ್ಲಿ ಪ್ರಥಮ ಬಂದಾಗ ನಾನು ಶಾಲೆಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಳು ಕೂಡ ಅಲ್ಲೇ ಹೊರಗೆ ನಿಂತು ಅತ್ಯಂತ ಖುಷಿ ಪಡುವ ವ್ಯಕ್ತಿ ಅವಳು. ನನ್ನ ಮದುವೆಯಾದಾಗ ನನ್ನ ಬೀಳ್ಕೊಡುಗೆಯಲ್ಲಿ ಅವಳ ಕಣ್ಣಂಚಿನಲ್ಲಿ ನೀರು ಬಂದರೂ ಕೂಡ ನನ್ನ ಮಗಳು ಒಬ್ಬ ಗ್ರಹಿಣಿಯಾಗಿ ಹೋಗುತ್ತಾಳೆ ಎಂಬ ಸಂಭ್ರಮ.
ಮಗ ಮದುವೆಯಾದಾಗ ಅವನೊಬ್ಬ ಜವಾಬ್ದಾರಿ ವ್ಯಕ್ತಿಯಾದ ಎಂಬ ಸಂಭ್ರಮ ಅವಳಿಗೆ. ನನಗೆ ನೌಕರಿ ಬರಲಿ ಎಂದು ಅನೇಕ ದೇವರಿಗೆ ಹರಕೆ ಹೊತ್ತು ನನ್ನ ಜೀವನ ಉತ್ತಮವಾಗುವುದು ಕಣ್ಣಾರೆ ಕಂಡು ಖುಷಿಪಡುವ ಅವಳು, ನನ್ನ ಎಲ್ಲದಕ್ಕೂ ಸಂಭ್ರಮಪಡುವ ಅವಳಿಗೆ ಈ ಒಂದು ದಿನದಂದು ತಾಯಿಗೆ ಅಲ್ಲಲ್ಲ ನನ್ನವ್ವನಿಗೆ ಒಂದು ಸಣ್ಣ ಸಲಾಂ, ಇಷ್ಟೇ ತಾನೇ ನಾವು ಅವಳಿಗೆ ಕೊಡಲಾಗುವುದು, ಏಕೆಂದರೆ ತಾಯಿಯ ಋಣವನ್ನು ಎಂದು ತೀರಿಸಲು ಸಾಧ್ಯವಿಲ್ಲ.

 

 

 

 

 

 

 

 

ಡಾ.ಭಾಗ್ಯಜ್ಯೋತಿ ಕೋಟಿಮಠ,
ಮುಖ್ಯಶಿಕ್ಷಕಿ, ಶಿರೂರು

administrator

Related Articles

Leave a Reply

Your email address will not be published. Required fields are marked *