ಹುಬ್ಬಳ್ಳಿ-ಧಾರವಾಡ ಸುದ್ದಿ

ಕೈದಿ ಬಚ್ಚಾಖಾನ ’ಸರಸ’ಕ್ಕೆ ಖಾಕಿ ಬೆಂಗಾವಲು!

ಹುಬ್ಬಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಧಾರವಾಡ : ವಿಚಾರಣೆಗಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದಿದ್ದ ಕುಖ್ಯಾತ ರೌಡಿಶೀಟರ್ ಪ್ರೂಟ್ ಇರ್ಪಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಚ್ಚಾಖಾನ್ ಸತ್ತೂರಿನ ಲಾಡ್ಜ್ ಒಂದರಲ್ಲಿ ಯುವತಿ ಜೊತೆಗಿದ್ದಾಗಲೇ ವಸತಿಗೃಹದ ಮೇಲೆ ದಾಳಿ ನಡೆಸಿದ ಸ್ಥಳೀಯ ಪೊಲೀಸರು ವಶಕ್ಕೆ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.


ಬಳ್ಳಾರಿ ಕಾರಾಗೃಹದಲ್ಲಿದ್ದ ಬಚ್ಚಾಖಾನನನ್ನು ವಿಚಾರಣೆಗೆಂದು ಇಲ್ಲಿನ ನ್ಯಾಯಾಲಯಕ್ಕೆ ಶನಿವಾರ ಕರೆತಂದ ವೇಳೆ ಸತ್ತೂರು ಬಳಿಯ ಲಾಡ್ಜ್‌ನಲ್ಲಿ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯಲು ಪೊಲೀಸರೇ ಆತನಿಗೆ ವ್ಯವಸ್ಥೆ ಮಾಡಿಕೊಟ್ಟಿರುವುದು ಬಯಲಾಗಿದೆ.
ಬಚ್ಚಾ ಖಾನ್ ಬರುವ ಮೊದಲೇ ಯುವತಿ ಲಾಡ್ಜ್ ಕೋಣೆಯೊಳಗಿದ್ದಳು. ಪೊಲೀಸರು ಆತನನ್ನು ಅಲ್ಲಿಗೆ ಕರೆತಂದು ಬಿಟ್ಟರು. ಈ ಖಚಿತ ಮಾಹಿತಿ ಆಧರಿಸಿ ಆಯುಕ್ತ ಲಾಭೂರಾಮ್ ಮಾರ್ಗದರ್ಶನದಲ್ಲಿ ಗೋಕುಲ ಠಾಣೆ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಒಳಗೊಂಡ ವಿವಿಧ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿದ್ಯಾಗಿರಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.


ಈತನನ್ನು ಬಳ್ಳಾರಿ ಜೈಲಿನಿಂದ ಐವರು ಪೊಲೀಸ್ ಸಿಬ್ಬಂದಿ ಕರೆ ತಂದಿದ್ದು, ಇದೀಗ ಅವರ ಮೇಲೆಯೂ ಕ್ರಮ ನಿಶ್ಚಿತವಾಗಿದ್ದು, ಇವರಿಗೆ ಯಾರು ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ಒಟ್ಟಿನಲ್ಲಿ ಬಳ್ಳಾರಿ ಖಾಕಿಗಳು
ಬೇಜವಾಬ್ದಾರಿತನ ಹಾಗೂ ಹಣದಾಸೆಗೆ ಹೀಗೆ ಮಾಡಿದ್ದಾರೆನ್ನಲಾಗಿದ್ದು, ಪ್ರತಿ ಬಾರಿ ವಿಚಾರಣೆಗೆ ಬರುವಾಗ ಈತ ನಗರದ ಸುತ್ತಮುತ್ತಲಿನ ಲಾಡ್ಜ್‌ಗಳನ್ನು ಮೊದಲೇ ಕಾಯ್ದಿರಿಸಿ, ಖಾಸಗಿ ಸಮಯ ಕಳೆಯುತ್ತಿದ್ದ ಎನ್ನಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *