ಹುಬ್ಬಳ್ಳಿ-ಧಾರವಾಡ ಸುದ್ದಿ

ಆರೋಗ್ಯ ಕಾಪಾಡಿಕೊಂಡರೆ ನೆಮ್ಮದಿ ಬದುಕು: ಗವಿಸಿದ್ದೇಶ್ವರ ಸ್ವಾಮೀಜಿ

ಯುನಿಟಿ ಸೂಪರ್ ಸ್ಷೆಶಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಧಾರವಾಡ: ಮನುಷ್ಯ ಸುಖವಾಗಿರಲು ಆರೋಗ್ಯಯುತ ಶರೀರ ಮುಖ್ಯ ಎಂದು ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.


ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಯುನಿಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಅಶೀರ್ವಚನ ನೀಡಿದರು.


ಅಧಿಕಾರ, ಸಂಪತ್ತು, ಪ್ರಸಿದ್ದಿಯಿಂದ ಬದುಕು ಸಂಪೂರ್ಣ ಆಗಲಾರದು. ಏನಿದ್ದರೆ ಬದುಕು ಪೂರ್ಣ ಎಂಬುದು ಮುಖ್ಯ. ನಾವೆಲ್ಲರೂ ಸುಖಿಯಾಗಿರ ಬೇಕು ಎಂದು ಬಯಸುತ್ತೆವೆ. ಅದು ನಮ್ಮಿಚ್ಛೆ ಕೂಡ ಆಗಿರುತ್ತದೆ. ಮನೆ ಸಂಪತ್ತಿನಿಂದ ತುಂಬುವುದಿಲ್ಲ. ಅದರ ಬದಲು ಸಂತೋಷದಿಂದ ತುಂಬುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು.


’ನಿರೋಗಿ ಕಾಯವೇ ಪ್ರಥಮ ಸುಖ’ ಎಂಬ ದಾರ್ಶನಿಕರ ಉಕ್ತಿಯನ್ನು ತಿಳಿದು ನಡೆಯಬೇಕು. ದೇಹ ಸದೃಢ, ಮನಸ್ಸು ತೀಕ್ಷ್ಣ, ಹೃದಯ ಸೂಕ್ಷ್ಮ ಇಟ್ಟುಕೊಳ್ಳಬೇಕು. ಮನುಷ್ಯ ಅಧಿಕಾರ, ಹಣ, ಹೆಸರು ಗಳಿಸುವ ಭ್ರಮೆ ಯನ್ನು ಬಿಟ್ಟು ಸಂತೋಷದಿಂದ ಬದುಕಲು ಕಲಿಯಬೇಕು. ಆರೋಗ್ಯ ಕ್ಷೇತ್ರದಲ್ಲಿ ಈಗ ಬಹಳಷ್ಟು ಪ್ರಗತಿ ಆಗಿದೆ. ಆದರೂ ರೋಗಿಯಾಗಿ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳಲು ಬೇಕಿರುವ ನೈಪುಣ್ಯತೆ ಬೆಳೆಸಿಕೊಂಡರೆ ನೆಮ್ಮದಿಯ ಬದುಕು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.


ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಎನ್.ಎಚ್.ಕೋನರಡ್ಡಿ, ಡಾ. ಜ್ಯೋತಿ ಪ್ರಕಾಶ ಸುಲ್ತಾನಪುರಿ, ಇಸ್ಮಾಯಿಲ್ ತಮಟಗಾರ, ಡಾ. ಜ್ಯೋತಿಪ್ರಕಾಶ್ ಸುಲ್ತಾನಪುರಿ, ಡಾ.ಶ್ರೀಕಂಠ ರಾಮನಗೌಡರ, ಡಾ.ಚೌಡಪ್ಪ ಶಂಕಪುರ, ಡಾ. ಸಂತೋಷ ಚಿಕ್ಕರೆಡ್ಡಿ, ಡಾ. ಚೇತನ ಮುದ್ರಬೆಟ್ಟು, ಡಾ.ಅಂಬೇಶ್ ಪ್ರಸಾದ್ ಮೊಹಿತೆ, ಡಾ. ಶೀತಲ್‌ಕುಮಾರ್, ಡಾ.ಸುನೀಲ್ ಮಳಗಿ, ಡಾ. ಸಂತೋಷ್ ಚಕ್ರಸಾಲಿ, ಡಾ. ಪ್ರವೀಣ್‌ಕುಮಾರ್ ಬಿ., ಡಾ. ಪರಮೇಶ್ವರ ಕೆಂಚಣ್ಣವರ, ಡಾ.ಎಸ್.ಆರ್. ಜಂಬಗಿ, ಡಾ. ಮೊಹಮ್ಮದ್ ಇಕ್ಬಾಲ್ ಎ. ಶೇಖ್, ಡಾ. ಪ್ರಕಾಶ ರಾಮನಗೌಡರ, ಡಾ.ಅಮೃತ ಮಹಾಬಲಶೆಟ್ಟಿ, ಡಾ. ನೀಲಕಂಠ ಪಾಟೀಲ, ಡಾ. ಜಗದೀಶ್ ನಾಯಕ್, ಡಾ. ಅಮಿತ ಎಸ್. ಗಲಗಲಿ, ಡಾ. ಆದಿತ್ಯ ಪಾಂಡುರಂಗಿ, ಡಾ. ನವೀನ ಮಂಕಣಿ, ಡಾ. ಸಪನ್ ಡಿ.ಎಸ್. ಡಾ. ರಾಮಚಂದ್ರ ಅನೆಹೊಸೂರು, ಡಾ. ಅನಿಕೇತ್ ಪಾಂಡುರಂಗಿ, ಡಾ. ಭಾವನಾ ಮಲ್ಹೋತ್ರಾ, ಡಾ.ಎಸ್.ಆರ್. ರಾಮನಗೌಡರ, ಡಾ.ಆನಂದ ಪಾಂಡುರಂಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ನಿವೃತ್ತ ಸರ್ಜನ್‌ರಾದ ಡಾ.ಎಸ್.ಎ.ಕಟಕೋಳ. ಡಾ.ವಿಜಯ ವಿಠ್ಠಲ ಮನಗೋಳಿ, ಡಾ.ದಿಲೀಪ ದೇಶಪಾಂಡೆ, ಡಾ.ಮಂಕಣಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *