ಹುಬ್ಬಳ್ಳಿ-ಧಾರವಾಡ ಸುದ್ದಿ
ಮುಖರ್ಜಿಗೆ ಗೌರವ : ರಾಜ್ಯಾದ್ಯಂತ ಕಾರ್ಯಕ್ರಮ

ಮುಖರ್ಜಿಗೆ ಗೌರವ : ರಾಜ್ಯಾದ್ಯಂತ ಕಾರ್ಯಕ್ರಮ

ಹುಬ್ಬಳ್ಳಿ: ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ನಾಳೆಯಿಂದ ಜುಲೈ 6 ರವರೆಗೆ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಅಧ್ಯಕ್ಷ ನಳಿನಕುಮಾರ ಕಟೀಲು ಅವರ ಆದೇಶದಂತೆ ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಶ್ಯಾಮ ಪ್ರಕಾಶ ಮುಖರ್ಜಿ ಅವರಿಗೆ ಗೌರವ ಸೂಚಿಸಲು ಈಗಾಗಲೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ 224 ವಿಧಾನಸಭಾ ಕ್ಷೇತ್ರದ 310 ಮಂಡಲದಲ್ಲಿ ಸರಿಸುಮಾರು 625 ಕಡೆಗಳಲ್ಲಿ ಯೋಗ ದಿನಾಚರಣೆ ಆಚರಣೆ ಮಾಡಲಾಗಿದೆ ಎಂದರು.
ಅಲ್ಲದೇ ಮುಂದಿನ ದಿನಗಳಲ್ಲಿ ಆಮ್ಲಜನಕ ಸಮಸ್ಯೆ ಉಂಟಾಗಬಾರದೆಂಬ ದೃಷ್ಟಿಯಿಂದ ಪರಿಸರ ರಕ್ಷಣೆಗಾಗಿ ಬಿಜೆಪಿಯ 11 ಲಕ್ಷ ಕಾರ್ಯಕರ್ತರಿಂದ 11 ಲಕ್ಷ ಸಸಿ ನೆಡುವ, ನದಿ ಮೂಲಗಳ ರಕ್ಷಣೆಯ ಹೊಣೆ ಹೊತ್ತು ಪ್ಲಾಸ್ಟಿಕ್ ಮುಕ್ತ ಕೆರೆ ಬಾವಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಶ್ಯಾಮಪ್ರಕಾಶ ಮುಖರ್ಜಿ ಅವರ ಜೀವನದ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಅರಿವು ಮೂಡಿಸಲು ವೆಬೆಕ್ಸ್ ಮೂಲಕ 58166 ಕಡೆಗಳಲ್ಲಿ ಕಾನ್ಫರೆನ್ಸ್ ಮೂಲಕ ಪುಣ್ಯ ತಿಥಿ ಆಚರಣೆ ಮಾಡಲಾಗುವುದು. ಕೊರೋನಾ ಮೂರನೇ ಅಲೆ ತಡೆಯ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ 1 ಲಕ್ಷ 20 ಸಾವಿರ ಕಾರ್ಯಕರ್ತರನ್ನು ಗುರ್ತಿಸಿ ಆಕ್ಸಿಮೀಟರ್, ಥರ್ಮಾಮೀಟರ್ ಒದಗಿಸಿ ಅವರಿಗೆ ಡಾಕ್ಟರ್‍ಗಳ ಮೂಲಕ ಸಲಹೆ ಮಾರ್ಗದರ್ಶನ ನೀಡಲಾಗು ವುದು. 1975 ರಲ್ಲಿ ಹೇರಲಾದ ತುರ್ತುಪರಿಸ್ಥಿತಿ ದಿನದ ಅಂಗವಾಗಿ ಜೂನ್ 25 ರಂದು ಕಪ್ಪುದಿನದ ಆಚರಣೆ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರಗಿ, ಲಿಂಗರಾಜ ಪಾಟೀಲ್, ದತ್ತಮೂರ್ತಿ ಕುಲಕರ್ಣಿ, ಜಿಲ್ಲಾ ವಕ್ತಾರ ರವಿ ನಾಯಕ ಇದ್ದರು.

 

administrator

Related Articles

Leave a Reply

Your email address will not be published. Required fields are marked *