ಹುಬ್ಬಳ್ಳಿ-ಧಾರವಾಡ ಸುದ್ದಿ
ದಿಂಗಾಲೇಶ್ವರರ ನಾಮಪತ್ರ ವಾಪಸ್: ಕಾಂಗ್ರೆಸ್‌ಗೆ ಬೆಂಬಲ

ದಿಂಗಾಲೇಶ್ವರರ ನಾಮಪತ್ರ ವಾಪಸ್: ಕಾಂಗ್ರೆಸ್‌ಗೆ ಬೆಂಬಲ

ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಮುಖಂಡರ ಪ್ರಯತ್ನ ಫಲಪ್ರಧ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಅಲ್ಲದೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸೋಲಿಸುವ ಗುರಿಯೊಂದಿಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ.


ಮುಖ್ಯಮಂತ್ರಿಗಳು ಸ್ವಾಮೀಜಿಯವರ ಜತೆ ಮಾತುಕತೆ ನಡೆಸಿದರಲ್ಲದೇ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಶಾಸಕ ಎಂ.ಎಸ್.ಅಕ್ಕಿ, ಕಾಂಗ್ರೆಸ್ ಮುಖಂಡರಾದ ಅನಿಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ, ಸದಾನಂದ ಡಂಗನವರ, ನಾಗರಾಜ ಗೌರಿ ಸೇರಿದಂತೆ ಅನೇಕರು ಚರ್ಚೆ ನಡೆಸಿದ್ದು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಯವರಿಗೆ ದೊಡ್ಡ ಬಲ ಬಂದಂತಾಗಿದೆ.


ಹಾಲಿ ಸಂಸದರಾಗಿರುವ ಪ್ರಹ್ಲಾದ ಜೋಶಿಯವರ ವಿರುದ್ಧ ಹಾರಿಹಾಯುತ್ತ ಬಂದಿರುವ ಶ್ರೀಗಳು, ನಾಮಪತ್ರ ಮರಳಿ ಪಡೆದ ನಂತರವೂ ಜೋಶಿಯವರ ವಿರುದ್ಧ ಪ್ರಚಾರ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರಲ್ಲದೇ ಪ್ರತಿ ಹಳ್ಳಿಗೂ ತೆರಳಿ ಜೋಶಿಯವರ ಅಸಲಿಯತ್ತು ತೆರೆದಿಡುವುದಾಗಿ ಹೇಳಿದ್ದಾರೆ.
ಇದರೊಂದಿಗೆ ಈ ಬಾರಿಯ ಕಣದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಿಶ್ಚಿತವಾಗಿದೆ.

administrator

Related Articles

Leave a Reply

Your email address will not be published. Required fields are marked *