ಹುಬ್ಬಳ್ಳಿ-ಧಾರವಾಡ ಸುದ್ದಿ

ಹಿಂಡಸಗೇರಿ ’ಹಿರಿತನ’ಕ್ಕೆ ಮಣೆ ಹಾಕಿದ ಸಮುದಾಯ

ಹುಬ್ಬಳ್ಳಿ ಅಂಜುಮನ್ ಚುನಾವಣೆ : ಎಲ್ಲರನ್ನೂ ಹಿಂದಿಕ್ಕಿದ ಟ್ರ್ಯಾಕ್ಟರ್

ಹುಬ್ಬಳ್ಳಿ : ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಹಿರಿತನಕ್ಕೆ ಮಣೆ ಹಾಕಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಗುಂಪನ್ನು ಆಯ್ಕೆ ಮಾಡಿದೆ. ಅಟೋ ರಿಕ್ಷಾ, ಹೆಲಿಕ್ಯಾಪ್ಟರ್‌ನ್ನು ಹಿಂದಿಕ್ಕುವ ಮೂಲಕ ಟ್ರ್ಯಾಕ್ಟರ್ ಕಮಾಲ್ ಮಾಡಿದೆ.
ನಾಲ್ಕು ಬಣಗಳ ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ಹಿಂಡಸಗೇರಿ ಗುಂಪಿನ ಎಲ್ಲ 52 ಉಮೇದುವಾರರು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದು ಅಭೂತಪೂರ್ವ ಗೆಲುವು ದಾಖಲಿಸಿದೆ.


ತಡರಾತ್ರಿಯವರೆಗೂ ಮತ ಎಣಿಕೆ ನಡೆದು ತದನಂತರ ಫಲಿತಾಂಶ ಘೋಷಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಂಡಸಗೇರಿಯವರು 3789 ಮತ ಪಡೆಯುವ ಮೂಲಕ ಆಯ್ಕೆಯಾದರೆ, ಹೊನ್ನಳ್ಳಿ ಗುಂಪಿನ ಎನ್ .ಡಿ.ಗದಗಕರ 1899 ಮತ ಪಡೆದರು. ಇದುವರೆಗೆ ಅಧ್ಯಕ್ಷರಾಗಿದ್ದ ಮಹ್ಮದ ಯೂಸೂಫ್ ಸವಣೂರಗೆ 1225 ಮತ ಬಂದರೆ, ಮಜರಖಾನ 1128 ಮತ ಪಡೆದರು.
ಉಪಾಧ್ಯಕ್ಷರಾಗಿ ಹಿಂಡಸಗೇರಿ ಗುಂಪಿನ ಎ.ಎ.ಅತ್ತಾರ 3602 ಮತ ಪಡೆದು ಆಯ್ಕೆಯಾದರೆ, ಹೊನ್ನಳ್ಳಿ ಗುಂಪಿನ ವಹಾಬ್ ಮುಲ್ಲಾ 2068 ಮತ ಪಡೆದು ದ್ವಿತಿಯ ಸ್ಥಾನಿಯಾದರು.
ಕಾರ್ಯದರ್ಶಿಯಾಗಿ ಬಶೀ ಹಳ್ಳೂರ 3544 ಮತ ಪಡೆದು ಆಯ್ಕೆಯಾದರೆ, ಮಹ್ಮದ ಆರೀಫ್ ಮುಜಾವರ 2139 ಮತ ಪಡೆದರು.ಖಜಾಂಚಿಯಾಗಿ ದಾದಾ ಹಯಾತ್ ಖೈರಾತಿ 3609  ಮತ ಪಡೆದರೆ, ನಾಸೀರ ಅಸುಂಡಿ 2206 ಮತ ಪಡೆದರು. ಜಂಟಿ ಕಾರ್ಯದರ್ಶಿಯಾಗಿ ಮಹ್ಮದ ರಫೀಕ ಬಂಕಾಪುರ 3636 ಮತ ಪಡೆದು ಚುನಾಯಿತರಾದರೆ, ಗೈಬು ಸಾಬ ಹೊನ್ಯಾಳ 2066 , ಅಲ್ಲದೇ ಅಸ್ಪತ್ರೆ ಮಂಡಳಿ ಕಾರ್ಯದರ್ಶಿಯಾಗಿ ಮಹ್ಮದ ಇರ್ಷಾದ ಬಳ್ಳಾರಿ 3604 ಮತದೊಂದಿಗೆ ಗೆಲುವು ಸಾಧಿಸಿದರೆ, ಹೊನ್ನಳ್ಳಿ ಗುಂಪಿನ ಆಸೀಫ್ ಬಳ್ಳಾರಿ 1919  ಮತ ಪಡೆದರು.


ಶಿಕ್ಷಣ ಸಮಿತಿಗೆ ಮಹ್ಮದ ಇಲಿಯಾಸ್ ಮನಿಯಾರ್, ಬಶೀರ ಗೂಡಮಾಲ್,ನವೀದ ಮುಲ್ಲಾ, ಸಲೀಮ ಸುಂಡಕೆ,ಮೊಹಮ್ಮದ ಕೋಳೂರ, ರಿಯಾಜ ಅಹ್ಮದ ಖತೀಬ, ಶಂಶೇರ ನಾಯಕವಾಡಿ , ಆಸ್ಪತ್ರೆ ಮಂದಳಿಗೆ ಶಿರಾಜ ಅಹ್ಮದ ಕುಡಚಿವಾಲೆ, ಜಹೀರ ಅಬ್ಬಾಸ ಯರಗಟ್ಟಿ, ಫಾರೂಕ ಅಬ್ಬುನವರ, ದಾವೂದ ನದಾಫ್ ಆಯ್ಕೆಯಾದರು.
10 ಪೋಷಕ ಸದಸ್ಯರಾಗಿ ಅಬ್ದುಲ್ ಕರೀಂ ಮಿಶ್ರಿಕೋಟಿ,ಮೊಹ್ಮದ ಅಖ್ತರ ಲಗದಗ,ರಿಯಾಜ್ ಅಹ್ಮದ ಸೌದಾಗರ, ಮೆಹಬೂಬಸಾಬ ಕಾಟೇವಾಡಿ, ನಿಸ್ಸಾರ ಪಲ್ಲಾನ, ಫಾರೂಕ್ ಕಾಲೇಬುಡ್ಡೆ,ನಜೀರ ಚುಲ್ ಬುಲ್ ,ಮಹ್ಮದ ಇಕ್ಬಾಲ್ ಕೊಂಗಾರ,ಮುಸ್ತಾಕ ಮುನ್ಷಿ, ಜಾವೇದ ಕಿತ್ತೂರ, ೨೫ ಅಜೀವ ಸದಸ್ಯರಾಗಿ ಮಹ್ಮದ ಸಾಜೀದ ಗುಬ್ಬಿ, ದಾದಾಹಯಾತ ಬೇಪಾರಿ, ಅಬ್ದುಲ್ ಸಮದ್ ಜಮಖಾನೆ,ನಿಸ್ಸಾರ ಧಾರವಾಡ,ನಿಸ್ಸಾರ ನೀಲಗಾರ,ಮಹ್ಮದ ಗೌಸ ಕಟ್ಟಿಮನಿ, ನೂರ್ ಅಹ್ಮದ ಬಿಜಾಪುರ,ಮುಷ್ತಾಕ ಬ್ಯಾಳಿ, ಅಸ್ಗರ ಅಲಿ ಹೆಬ್ಬಳ್ಳಿ, ಅಬ್ದುಲ್ ಶೂಕುರ ಸರಗಿರೋ, ಹುಸೇನ ಐನಾಪುರಿ, ಮಹ್ಮದಗೌಸ ಮಂಚನಕೊಪ್ಪ, ಅಸೀಫ ಲೋಕಾಪಲ್ಲಿ,ಮೋದಿನಸಾಬ ಬೆಟಗೇರಿ,ಮೊಹ್ಮದ ಸಾಧಿಕ ಬ್ಯಾಹಟ್ಟಿ, ಮಹ್ಮದ ಗೌಸ ಚೌದರಿ,ಮಹ್ಮದ ಹನೀಪ ಅಧೋನಿ,ಜಹೀರ ಹಕೀಮ,ನಾಸೀರ ಹುಸೇನ ಮಾಣಿಕ್,ದಾವಲಸಾಬ ನಧಾಪ್,ಇಮ್ತಿಯಾಜ ನಾಯಕವಾಡಿ,ಶೋಹಿಬ್ ಮುದ್ದೇಬಿಹಾಳ, ಹಜರತ್ ಬೇಪಾರಿ,ಮೊಹ್ಮದ ರಫೀಕ ನಧಾಫ್, ರಾಜೇಸಾಬ ಬೀಳಗಿ ಇವರುಗಳು ಆಯ್ಕೆಯಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಹ ಯುಸೂಫ ಸವಣೂರ ಬಣ ಬೆಂಬಲಿಸಿದ್ದ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಈ ಬಾರಿ ಹಿಂಡಸಗೇರಿ ಗುಂಪಿನೊಂದಿಗೆ ಗುರುತಿಸಿಕೊಂಡು ನಿರ್ಣಾಯಕ ಪಾತ್ರ ವಹಿಸಿದರು.
ತಡರಾತ್ರಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೆ ಹಿಂಡಸಗೇರಿ ಬಣದ ಬೆಂಬಲಿಗರು ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

ಸಿಎಂ ಅಭಿನಂದನೆ


ಅಂಜುಮನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿಂಡಸಗೇರಿಯವರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ ಸಂಸ್ಥೆಗೆ ದೊಡ್ಡ ಇತಿಹಾಸವಿದ್ದು ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಹಾರೈಸಿದರು. ಕಾನೂನು ಸಚಿವ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರುಗಳು ಹಿಂಡಸಗೇರಿ ಹಾಗೂ ತಂಡವನ್ನು ಅಭಿನಂದಿಸಿದ್ದಾರೆ.

ಎಲ್ಲರಿಗೂ ಕೃತಜ್ಞತೆ

 

ಹುಬ್ಬಳ್ಳಿಯ ಎಲ್ಲ ಮುತವಲ್ಲಿಗಳು, ಅಂಜುಮನ್ ಸದಸ್ಯರು ಮತ್ತು ಎಲ್ಲ ಯುವಕರ ಸಂಘಟಿತ ಯತ್ನದ ಪರಿಣಾಮ ನಮ್ಮ ಗುಂಪಿಗೆ ಗೆಲುವು ದೊರೆತಿದ್ದು ಸಂಸ್ಥೆಯ ಏಳ್ಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಹಿಂದಿನ ಗತವೈಭವಕ್ಕೆ ತರುವ ಯತ್ನ ಮಾಡುವೆ


ಎ,ಎಂ.ಹಿಂಡಸಗೇರಿ

administrator

Related Articles

Leave a Reply

Your email address will not be published. Required fields are marked *