ಹುಬ್ಬಳ್ಳಿ-ಧಾರವಾಡ ಸುದ್ದಿ
ವನವಾಸಿ ರಾಮಮಂದಿರಕ್ಕೆ ಖಾಕಿ ಎಂಟ್ರಿ!;   ಜಾತಿ ಹಿಡಿದು ನಿಂದನೆ ಪ್ರಕರಣ ದಾಖಲು

ವನವಾಸಿ ರಾಮಮಂದಿರಕ್ಕೆ ಖಾಕಿ ಎಂಟ್ರಿ!; ಜಾತಿ ಹಿಡಿದು ನಿಂದನೆ ಪ್ರಕರಣ ದಾಖಲು

ಧಾರವಾಡ : ನಗರದ ಮಾಳಮಡ್ಡಿಯಲ್ಲಿನ ಶ್ರೀ ವನವಾಸಿ ರಾಮಮಂದಿರಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಇಂದು ತನಿಖೆ ನಡೆಸಿದ್ದಾರೆ.
ಇಲ್ಲಿನ ತೇಜಸ್ವಿನಗರ ನಿವಾಸಿ ಕಿಶೋರ ಕಟ್ಟಿ ಎಂಬುವರು ವಿದ್ಯಾಗಿರಿ ಠಾಣೆಗೆ ನೀಡಿದ ದೂರಿನ ಮೇರೆಗೆ ಸಹಾಯಕ ಪೊಲೀಸ್ ಆಯುಕ್ತರಾದ ಅನುಷಾ ಜಿ. ನೇತೃತ್ವ್ವದಲ್ಲಿ ಅಧಿಕಾರಿಗಳು ಇಂದು ಭೇಟಿ ನೀಡಿದರು.


ಕಳೆದ ದಿ.29 ರಂದು ರಾತ್ರಿ 8 ಗಂಟೆ ಸುಮಾರಿಗೆ ರಾಮ ಮಂದಿರಕ್ಕೆ ದೇವರ ದರ್ಶನಕ್ಕೆ ಹೋಗಿದ್ದ ತಮಗೆ ಆರ್.ಪಿ.ಕುಲಕರ್ಣಿ ಎಂಬುವರು, ಕೆಳ ಜಾತಿಯವರು ದೇವಸ್ಥಾನಕ್ಕೆ ಬರದಂತೆ. ಅಲ್ಲದೆ ತಮ್ಮನ್ನು ಜಾತಿಸೂಚಕ ಪದ ಬಳಸಿ ನಿಂದಿಸಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಸೆಂಬರ ೨ ರಂದು ವಿದ್ಯಾಗಿರಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.


ಕಿಶೋರ ಕಟ್ಟಿ ಅವರ ದೂರಿನ ಆಧಾರದ ಮೇಲೆ ಅನುಷಾ ಜಿ. ಅವರು ಭೇಟಿ ನೀಡಿ, ಮಂದಿರದಲ್ಲಿನ ಸಿ.ಸಿ. ಟಿವಿ ದೃಶ್ಯಗಳನ್ನು ಮತ್ತು ಸಾಂದರ್ಭಿಕ ಸಾಕ್ಷಿಗಳ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ವಿದ್ಯಾಗಿರಿ ಠಾಣೆಯ ಪಿಎಸ್‌ಐ ಎಸ್.ಜಿ.ದಾಸರಡ್ಡಿ ಮತ್ತು ಸಿಬ್ಬಂದಿ ಇದ್ದರು.


ಕಳೆದ ಕೆಲವು ವರ್ಷಗಳಿಂದ ಶ್ರೀ ವನವಾಸಿ ರಾಮಂದಿರದ ಆಡಳಿಕ್ಕೆ ಎರಡು ಗುಂಪುಗಳ ಮಧ್ಯೆ ತಿಕ್ಕಾಟ ನಡೆದಿದ್ದು, ಇದೀಗ ಈ ಪ್ರಕರಣ ಮಂದಿರದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಭಕ್ತರು ಬೇಸರವ್ಯಕ್ತಪಡಿಸುತ್ತಿದ್ದಾರೆ.

administrator

Related Articles

Leave a Reply

Your email address will not be published. Required fields are marked *