ಹುಬ್ಬಳ್ಳಿ-ಧಾರವಾಡ ಸುದ್ದಿ
ಅಪ್ಪಾ ಏಕೇ ನೀನು ದೂರ

ಅಪ್ಪಾ ಏಕೇ ನೀನು ದೂರ

ತಂದೆ
ಅಪ್ಪಾ ಏಕೇ ನೀನು ದೂರ
ನೀನು ಎಂದರೆ ಏನೋ ಕಾತುರ
ನೀನು ನನಗೆ ಹೊಳೆವ ಅಂಬರ ನಾನು ನಿಂತ ನೆಲೆಯ ಸೂರ:
ನಿನ್ನ ಕಣ್ಣು ನೋಡುವಾಸೆ
ನನ್ನ ಬಿಂಬ ತೊಟ್ಟ ಶೀಶೆ
ನೋವು ಮೆಟ್ಟಿ ಕನಸು ಕಟ್ಟಿ ರೂಪ ಕೊಟ್ಟ ಮುದ್ದು ಮೂಸೆ!
ಭವದ ಭಾರ ಎತ್ತಿಕೊಂಡು
ಹಗಲು ರಾತ್ರಿ ದುಡಿದು ಮಿಡಿದು
ಎಣಿಕೆ ಇಲ್ಲದ ಬದುಕು ನಡೆದು ದೂರ ನಿಂತ ನಿನ್ನ ಕಂಡೆ:
ತಾಯಿ ನನಗೆ ಹೃದಯ ಎಂದೆ
ನಿಜದ ಬದುಕು ನೀನು ತಂದೆ
ಸಿಟ್ಟು ಸಿಡುಕಿನಲ್ಲೇ ನಾನು ಮಧುರ ಭಾವ ಬೆದರಿ ಉಂಡೆ!
ಪ್ರೀತಿ ನೀತಿ ಕಲಿಸಿ ಕೊಟ್ಟು
ಕುಂದು ಕೊರತೆ ಆಗದಿರಲು
ಬಚ್ಚಿಕೊಂಡು ಎಲ್ಲ ದಿಗಿಲು ಜೀವ ಕಾದ ನಮ್ಮ ಕೋಲು:
ಜಗದ ನೆರಳಿಗಿಂತ ಮಿಗಿಲು
ನೀನು ಕೊಟ್ಟ ನಿನ್ನ ಹೆಗಲು
ನೂರು ಭ್ರಮೆಯ ಅಳಿದು ಬಂದೆ ಎಲ್ಲಕ್ಕಿಂತ ನೀನೇ ಮೇಲು!

ಡಾ ಶ್ರೀಶೈಲ ಮಾದಣ್ಣವರ

administrator

Related Articles

Leave a Reply

Your email address will not be published. Required fields are marked *