ಹುಬ್ಬಳ್ಳಿ-ಧಾರವಾಡ ಸುದ್ದಿ
ಮುಳುಗದ ಸೂರ್ಯ ನೀ…

ಮುಳುಗದ ಸೂರ್ಯ ನೀ…

ಮುಳುಗದ ಸೂರ್ಯ ನೀ, ಚೆಲ್ಲುತಿರು ಸದಾ ಬೆಳಕು..
ನಿಲ್ಲದ ಭುವಿ ನೀ, ಅಳಿಸುತಿರು ಬಡವರ ಅಳುಕು…
ಬದುಕಿದರೆ ನಿನ್ನ ನೆನಪಲಿ, ಬಾರದಿರದು ತೊಡಕು..
ಕಳೆವೆ ದಿನದ ಬದುಕು, ಹಾಕುತ್ತಾ ನಿನ್ನ ಮೆಲುಕು..

ಮಿನುಗುವ ಧ್ರುವತಾರೆ ನೀ, ಅಳಿಯದು ನಿನ್ನ ನೆನಪು…
ನಿನ್ನ ನಗು ಮೊಗದಲ್ಲೇ, ಕಾಣುತಿಹುದು ಜಗದ ಹೊಳುಪು…
ಮೌನವಾಗಿರವ ಕರುನಾಡಿಗೆ, ಕಂಗೊಳಿಸಲಿ ನಿನ್ನ ನಗೆ ಕಂಪು…
ನೀ ನಡೆದು ಹೋದ ದಾರಿಯಲಿ, ಬೀಸುತಿರಲಿ ತಂಗಾಳಿಯ ತಂಪು…

ಕೋಟಿಯಲ್ಲೊಂದು ಕೈ ನಿನ್ನದು, ಆಗಿರುವೆ ನೀ ಅಮರ..
ಕಾಣದೇ ನೀ ನಿಂತೇ, ಬಡವರ ಬದುಕಿಗೆ ಆಧಾರ….
ನೀ ತೋರಿಸಿಕೊಟ್ಟ ದಾರಿಯೇ, ನಮ್ಮ ಬದುಕಿಗೆ ಅಜರಾಮರ…
ಮರೆಯಲಿ ಹೇಗೆ, ನೀ ತೋರಿದ ಪ್ರೀತಿಯ ಸಾಗರ…

ಕಾಯುತಿಹರು ನಿನ್ನವರು, ಬಂದುಬಿಡು ನೀ ಲೋಹಿತ…
ಗುಂಗುಟ್ಟುತಿಹುದು ನಮ್ಮೀ ಕಿವಿಯಲಿ, ನೀ ಬಿಟ್ಟು ಹೋದ ಸಂಗೀತ…
ನೀವಿರದ ಬದುಕಲಿ, ಕಾಡುತಿಹುದು ಸದಾ ಏಕಾಂತ…
ಸಾಗುವೆವು ಜೀವನ ಚಕ್ರದಲಿ, ನೆನೆಯುತ ನಿನ್ನ ಓ ಪುನೀತ……


ಬಿ. ವೆಂಕಟೇಶ್ ನಾಯ್ಕ
ಅಸಿಸ್ಟೆಂಟ್ ಪ್ರೊಫೆಸರ್
ಗೀತಂ ವಿಶ್ವವಿದ್ಯಾಲಯ
ದೊಡ್ಡ ಬಳ್ಳಪುರ

administrator

Related Articles

Leave a Reply

Your email address will not be published. Required fields are marked *