“ಪ್ರತಿ ದಿನ ಪರಿಸರ ದಿನ”
ಆಚರಿಸುತ್ತಿರುವೆವು ಪ್ರತಿ ವರ್ಷ
ವಿಶ್ವ ಆ ದಿನ ಈ ದಿನ ಅಂತ
ಸಾಮಾಜಿಕ ಜಾಲ ತಾಣಗಳಲ್ಲಿ.
ಆಚರಿಸಬೇಕಿದೆ ಪ್ರತಿ ದಿನ ಈಗ
ಭೂ ಒಡಲ ಉಳಿವಿಗಾಗಿ ನಮ್ಮೆಲ್ಲರ ಉಸಿರಿಗಾಗಿ ಸಸಿ ನೆಟ್ಟು ಗಿಡವ ಬೆಳೆಸಿ ಮರವಾಗಿಸಿ ಪರಿಸರದ ದಿನ.
ಹಸಿರಿದ್ದರೆ ಹೊನ್ನು ಮಣ್ಣು ಹೆಣ್ಣು ಅದನ್ನು ಉಳಿಸಿ ಬೆಳಸದ್ದಿದ್ದರೆ ನಾವೆಲ್ಲಾ ಸ್ಮಶಾನಕ್ಕೆ ಮಣ್ಣು.
ಪಶು ಪಕ್ಷಿ ಪ್ರಾಣಿ ಜೀವ ಸಂಕುಲಕೆ ಬೇಕು ಪ್ರತಿ ದಿನ ಪರಿಸರದ ಆಶ್ರಯ.
ನಾವಾಗ ಬೇಕಿದೆ ಈಗ ಪರಿಸರವ ಉಳಿಸಿ ಬೆಳೆಸುವ ಸಾಲು ಮರದ ತಿಮ್ಮಕ್ಕನ ಹಾಗೆ ದುಡಿಯುವ ಕೈಗಳು.
ಹಸಿರೆಲೆಯಲೀ ಮೋಸವಿಲ್ಲ ಹಿಂಸೆ ಇಲ್ಲ ಕಪಟ ನಾಟಕ ವಿಲ್ಲ
ಎಂದೆಂದಿಗೂ.
ಉಸಿರಾಗುವ ಉಸಿರಾಟದ ಹೆಸರು ಉಳಿಸು ಹಸಿರಿಗೆ ನಮ್ಮೆಲ್ಲರ ಕೋಟಿ ಕೋಟಿ ನಮನಗಳು…
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ..