“ಬದುಕು ಹಸನಾಗಲಿ”
ಬೆಳಕು ಮೂಡದ ಹಾದಿಯಲಿ
ದಾರಿ ದೀಪವ ಆಗೋಣ
ಹಸಿವು ನೀಗಿಸೋಣ
ಒಂಟಿತನವ ಮರೆಸೋಣ
ಅವರೆಲ್ಲರ ಬದುಕಲಿ.
ಕಾಲದ ಕೈಗೊಂಬೆಗಳು
ಈಗ ನಾವೆಲ್ಲಾ
ಎಲ್ಲರ ದುಃಖವು ನಮ್ಮದೆ
ಎಲ್ಲರ ಸುಖವು ನಮ್ಮದೆ ಎನ್ನುವ ಕಾಲ ಈಗ ಬಂದಾಗಿದೆ.
ಜೀವಕೆ ಹಸಿವಿನ ಪಾಠ
ಜೀವನಕೆ ಮಾನವಿಯತೆಯ ನೋಟ ಕಲಿಸಿದ ಕಾಲ ಇದು.
ನಾಳೆಗಳ ಕನಸಿಗೆ ಕೊಳ್ಳೆಯಿಟ್ಟು
ಈಗಿನ ಉಸಿರಿಗೆ ಬೆಲೆ ಕಟ್ಟಿತ್ತಿರುವೆವು ನಾವೆಲ್ಲಾ.
ಜೀವ ಮಸಣದ ಆಸ್ತಿ
ಜೀವನ ನಮ್ಮೆಲ್ಲರ ಆಸ್ತಿ
ಕೋಟಿ ಇದ್ದರೆನು ಈಗ
ಆರೋಗ್ಯವೇ ಆಸ್ತಿ.
ಹಂಚಿ ತಿನ್ನೊಣ ಕೈ ತ್ತುತ್ತನು
ಜೀವ ಜೀವನ ಉಳಿಸೋಣ
ಇನ್ನಾದರೂ ನಮ್ಮೆಲ್ಲರ ಬದುಕನು ಪ್ರೀತಿಸೋಣ.
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ