ನನ್ನೆಲ್ಲ ಬೆಳವಣಿಗೆಗೆ ತಂದೆ ವಿಷ್ಣುರಾವ್ ಭೀಮರಾವ್ ಮಾನೆ ಅವರೇ ಕಾರಣ. ಅವರ ಶಿಸ್ತುಬದ್ಧ ಜೀವನ ನನಗಾದರ್ಶ, ಸಾಮಾಜಿಕ ಬದ್ಧತೆಗೂ ದಾರಿದೀಪ.
ನನ್ನಪ್ಪ ಬಿಸಿನೆಸ್ ಮೆನ್ ಆಗಿದ್ದರೂ ಅವರೊಬ್ಬ ಉದಾರ ಮನಸ್ಸಿನ ಸ್ನೇಹಮಯಿ. ಅವರ ನಡೆ-ನುಡಿ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದವು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿದ್ದ ಅವರಲ್ಲಿ ಬಡವರ ಬಗೆಗೆ ಎಲ್ಲಿಲ್ಲದ ಕಾಳಜಿ ಇತ್ತು.
ವಿದ್ಯಾರ್ಥಿ ದೆಸೆಯಿಂದ ನನಗೂ ರಾಜಕಾರಣ ನಂಟು ಬೆಳೆಯಿತು. ಬಡವರ ಸೇವೆ ಮಾಡುವ ತುಡಿತ ಹೆಚ್ಚಿತು. ಆಗಲೇ ಅವರು ನನಗೆ ಸಾಮಾಜಿಕ ಬದ್ಧತೆಯ ಪಾಠ ಮಾಡಿದರು. ಎಂಥ ಸಮಯದಲ್ಲೂ ಬಡವರ ಪರವಾಗಿ ನಿಲ್ಲುವಂತೆ ತಾಕೀತು ಮಾಡಿದ್ದರು.
ಅವರ ಪ್ರತಿ ಮಾತು, ನಡುವಳಿಕೆ, ಗುಣ ಎಲ್ಲವೂ ನನ್ನ ಮೇಲೆ ಗಾಢ ಪರಿಣಾಮ ಉಂಟು ಮಾಡಿದವು. ನಾನು ವಿಧಾನ ಪರಿಷತ್ತು ಪ್ರವೇಶಿಸಿದಾಗ ಅವರು ನಮ್ಮ ಜೊತೆಗಿದ್ದರು, ಬಹಳ ಖುಷಿಪಟ್ಟಿದ್ದರು. ಈಗ ವಿಧಾನಸಭೆ ಪ್ರವೇಶಿಸಿದ್ದೇನೆ. ಆದರೆ ಅವರಿಲ್ಲ, ಅವರ ಆದರ್ಶಗಳು ಸದಾ ನನ್ನ ಜೊತೆಗಿವೆ. ಅಪ್ಪ ಇರಬೇಕಿತ್ತು ಎನ್ನುವ ನೋವು ಮಾತ್ರ ಪದೇ ಪದೇ ಕಾಡುತ್ತಿರುತ್ತೆ.. ಲವ್ ಯು ಅಪ್ಪ…
ಮಕ್ಕಳ ಭವಿಷ್ಯಕ್ಕೆ ದುಡಿಯುವ ಅಪ್ಪಂದಿರಿಗೆಲ್ಲ ಅಪ್ಪಂದಿರ ದಿನದ ಶುಭಾಶಯ.
ಶ್ರೀನಿವಾಸ ಮಾನೆ, ಶಾಸಕರು, ಹಾನಗಲ್