ನನ್ನ ದೇಹ ದೇಗುಲವಾದರೆ
ಅಲ್ಲಿ ದೇವರು ನೀನಮ್ಮ
ನನ್ನೆದೆ ನಾಡಿ ಬಡಿತ ನೀನಮ್ಮ
ಜೀವದ ಉಸಿರು ನೀನಮ್ಮ
ಭೂಮಿಗೆ ಬಂದಾಕ್ಷಣ ಕರೆದೆ ಅಮ್ಮ
ನೋವಿನಲು ಅಮ್ಮ
ನಲುವಿನಲು ಅಮ್ಮ
ಭಯದಲು ಅಮ್ಮ
ನಿನ್ನಯ ಮಡಿಲೆ ಆಸರೆ
ಹೆಗಲೆ ನೆಮ್ಮದಿಯ ತಾಣ
ನನ್ನಯ ಪ್ರೀತಿ ವಿಸ್ಮಯ ನೀನೆ
ಶಕ್ತಿಯು ಯುಕ್ತಿಯು ನೀನೆ
ಕಹಿಯನುಂಡು ಸಿಹಿಯ ಹಂಚಿದೆ
ನಿನ್ನ ಕನಸುಗಳ ಮೂರ್ತರೂಪಕೆ
ತಿದ್ದಿ ತೀಡಿ ಅರಿವಿನ ಜ್ಞಾನ ನೀಡಿದೆ
ಕಲಿಸಿದೆ ಬದುಕನಲಿ ಸಂಸ್ಕಾರ
ಪದಗಳಿಗೆ ಸಿಗದ ಭಾವಮೀರಿದ
ಎರಡಕ್ಷರದ ಅಮ್ಮ
ಅಗಮ್ಯ, ಅಪ್ರತಿಮ
ಮಗಳ ಮಾಟದಲಿ
ನೋಟದಲಿ ಕಾಣುವೆ
ನಿನ್ನಯ ಪ್ರತಿರೂಪ
ಎತ್ತಿ ಮುದ್ದಾಡಿದಡೆ ಏನೋ ಹರುಷ
ಅಮ್ಮ ಏನೋ ಹರುಷ.
ಶಾರದಾ ಕೌದಿ
ಲೇಖಕಿ, ಸಮಾಜ ಸೇವಕಿ