ಸುಜಯ, ವಿಜಯ, ಅಶಿತೋಷ, ಶ್ರೇಯಸ್, ಸ್ವರೂಪ್ ಆಯ್ಕೆ
ಧಾರವಾಡ : 87ನೇ ರಾಷ್ಟ್ರ 17 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಬಿಹಾರದ ಪಾಟ್ನಾದಲ್ಲಿ ಜ. 16 ರಿಂದ 23 ರವರೆಗೆ ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಆಹ್ವಾನಿಸಲಾಗಿತ್ತು. ತಂಡದಲ್ಲಿ ರಾಜ್ಯದ ವಿವಿಧ ಜಿಲ್ಲೆಯ 16 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ಅಶಿತೋಷ ಹಿರೇಮಠ, ಶ್ರೇಯಸ್ ಆನಂದಾಚೆ, ಸ್ವರೂಪ್ ಸಾಳುಂಕೆ, ಹುಬ್ಬಳ್ಳಿಯ ವಿಜಯ್ ಕೆ ಬಂಡಿ, ಧಾರವಾಡದ ಸುಜಯ್ ಕೋರವರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಧಾರವಾಡದ ಮೌಲಾನಾ ಆಜಾದ್ ಮಾದರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸುಜಯ ಕೊರವರ ಮತ್ತು ಹುಬ್ಬಳ್ಳಿ ರೋಟರಿ ಶಾಲೆಯ ವಿದ್ಯಾರ್ಥಿ ವಿಜಯ ಬಂಡಿ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ (ದೈಹಿಕ ಶಿಕ್ಷಣ) ಸಹ ನಿರ್ದೇಶಕ ಎಸ್. ಎನ್ ರಮೇಶ ತಿಳಿಸಿದ್ದಾರೆ.
ಸುಜಯ ಧಾರವಾಡದ ಫಸ್ಟ್ ಕ್ರಿಕೆಟ್ ಅಕಾಡೆಮಿಯ ಸಂದೀಪ್ ಪೈ ವಿದ್ಯಾರ್ಥಿಯಾಗಿದ್ದು, ಸದ್ಯ ಬೆಂಗಳೂರಿನ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ರಾಜ್ಯ ತಂಡ: ಪ್ರಣೀತ್ ಶೆಟ್ಟಿ, ವರುಣ್ ಪಟೇಲ್, ಗೌತಮ್ ಜಿ, ನಿಶ್ಚಯ್ ಆರ್, ಜೀವನ್ ಕರಬಸಪ್ಪ, ಚಿರು ಕೃಷ್ಣ ಬಿ ಪಿ, ರವಿಚಂದ್ರ. ತೇಜಸ್ವಿ, ಸುಧನ್ವ ವಿ ಭಟ್, ಭುವನ್ ಎಂ ಪಿ, ಮಂಥನ್ ಎಸ್ ಕೋಟಿಯಾನ್, ಸುಶಾಂತ್ ರಾಜ್ ಬಿರ್ತಿ, ಅಶಿತೋಷ ಹಿರೇಮಠ, ಶ್ರೇಯಸ್ ಆನಂದಾಚೆ, ಸ್ವರೂಪ್ ಸಾಳುಂಕೆ, ವಿಜಯ್ ಕೆ ಬಂಡಿ, ಸುಜಯ್ ಕೋರವರ.
ಮ್ಯಾನೇಜರ್: ಆಜುನೆಡಿ ಪಟೇಲ್, ಕೋಚ್: ಶೇಖರ ಎನ್.ಕೆ