ಪಂದ್ಯಾವಳಿಗೆ ರಾಜ್ಯದ ಶ್ರೇಷ್ಠ 24 ಪುರುಷ, 8 ಮಹಿಳಾ ತಂಡ
ಹುಬ್ಬಳ್ಳಿ: ನಗರದ ರೋವರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಕರ್ನಾಟಕ ಸ್ಟೇಟ್ ಬಾಸ್ಕೆಟ್ ಬಾಲ್ ಅಸೋಶಿಯೇಶನ್ ಸಹಯೋಗದೊಂದಿಗೆ ಫೆ. 8ರಿಂದ 11ರ ವರೆಗೆ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಆಹ್ವಾನಿತ ಬಾಸ್ಕೆಟ್ ಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಮಹಾಪೋಷಕ ಮಹೇಶ ಶೆಟ್ಟಿ ಮತ್ತು ಉಪಾಧ್ಯಕ್ಷ ವಿಜಯ ಬಳ್ಳಾರಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು.
ನಗರದ ಡಿ.ಸಿ. ಕಂಪೌಂಡ್ ನಲ್ಲಿರುವ ರೋವರ್ಸ್ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಲೀಗ್ ಕಂ ನಾಕೌಟ್ ಪಂದ್ಯಾವಳಿ ನಡೆಯಲಿದ್ದು, ಫೆ.೮ರಂದು ಬೆಳಿಗ್ಗೆ 10ಗಂಟೆಗೆ ಹು-ಧಾ ಮೇಯರ್ ವೀಣಾ ಬರದ್ವಾಡ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಶಿವು ಹಿರೇಮಠ, ಹುಬ್ಬಳ್ಳಿಯ ಅಪೊಲೊ ಡೆವಲಪರ್ಸನ ಶ್ರೀಕಾಂತ ಭಟ್, ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೇದ್ರೆ ಆಗಮಿಸುವರು. ಇದೇ ವೇಳೆ ಕಲಾಭವನದಿಂದ ಎಲ್ಲ ತಂಡಗಳ ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ ಎಂದರು.
ಸಂಜೆ6.30ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೆಎಸ್‌ಎಸ್ ಕಾರ್ಯದರ್ಶಿ ಅಜೀತ ಪ್ರಸಾದ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಹನಮಂತ ಕೊಟಬಾಗಿ, ಉದಯ ನೀಲಾವರ, ಗುರು ಅಸುಂಡಿ, ಇಸ್ಮಾಯಿಲ್ ತಮಾಟಗಾರ, ತವನಪ್ಪ ಅಷ್ಟಗಿ, ಬಿ.ಟಿ. ರೆಡ್ಡಿ, ಪ್ರದೀಪ ಪಕ್ಕಳ ಆಗಮಿಸುವರು ಎಂದು ತಿಳಿಸಿದರು.
ಫೆ.9ರಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದಿವ್ಯಪ್ರಭು ಆಗಮಿಸಲಿದ್ದಾರೆ. ಅತಿಥಿಗಳಾಗಿ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ತಹಸೀಲ್ದಾರ ಡಾ. ಡಿ.ಎಚ್.ಹೂಗಾರ, ಹುಡಾ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ, ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಸದಾನಂದ ಅಮರಾಪುರ ಆಗಮಿಸುವರು ಎಂದು ತಿಳಿಸಿದರು.
ಫೆ.10ರಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಮೇಯರ ಈರೇಶ ಅಂಚಟಗೇರಿ, ವಾಣಿಜ್ಯೋದ್ಯಮಿ ಪ್ರಸಾದ ಶೆಟ್ಟಿ ಆಗಮಿಸುವರು.
ಫೆ. 11ರಂದು ಸಂಜೆ 6.30ಕ್ಕೆ ನಡೆಯುವ ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ವಿಪ ಸದಸ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ, ಶಾಸಕ ಎನ್.ಎಚ್. ಕೋನರಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹಾಗೂ ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ರಾಜ್ಯದ ಶ್ರೇಷ್ಠ 24 ಪುರುಷ ಮತ್ತು 8ಮಹಿಳಾ ತಂಡಗಳು ಭಾಗವಹಿಸಲಿವೆ. ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತ ಪುರುಷ ತಂಡಕ್ಕೆ ಟ್ರೋಫಿ ಜೊತೆಗೆ 50 ಸಾವಿರ ರೂಪಾಯಿ, ರನ್ನರ್ ಅಪ್ ತಂಡಕ್ಕೆ 35 ಸಾವಿರ ರೂಪಾಯಿ, ಮಹಿಳಾ ವಿಜೇತ ತಂಡಕ್ಕೆ 40 ಸಾವಿರ ರೂಪಾಯಿ ಮತ್ತು ರನ್ನರ್ ಅಪ್ ಗೆ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಶ್ರೀಕಾಂತ ಕಂಚಿಬೈಲ್ ಮಾತನಾಡಿ, 40 ವರ್ಷದಿಂದ ರೋವರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ನಡೆದು ಬಂದ ದಾರಿಯನ್ನು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹರ್ಷಕುಮಾರ ತುರಮರಿ, ರಾಜೇಂದ್ರ ಜಂಬಗಿ, ವೇಣುಗೋಪಾಲ ಉಡುಪಿ, ಶಿವಯೋಗಿ ಅಮಿನಗಡ, , ಅಶೋಕ ಕಂಚಿಬೈಲ್, ರಾಮ ನಾಯಕ, ನವೀನ ಶಿರಹಟ್ಟಿ, ಶಿವಯೋಗಿ ಬಳ್ಳಾರಿ, ಗುರುರಾಜ ಪುರಾಣಿಕ, ಅಶ್ವತ್ಥಾಮ ಕುಬಾಳ, ತೇಜಸ್ ಪೂಜಾರ, ಮಹಾಂತೇಶ ಬೆಲ್ಲದ, ವೈಷ್ಣವಿ ಚಿಂತಾಮಣಿ, ಕುಮಾರ ಚಿನಿವಾಲ ಸೇರಿದಂತೆ ಇತರರಿದ್ದರು.