ಹುಬ್ಬಳ್ಳಿ-ಧಾರವಾಡ ಸುದ್ದಿ
ಅಂಜುಮನ್ ಚುನಾವಣೆ: ನಾಮಪತ್ರ ಭರಾಟೆ

ಅಂಜುಮನ್ ಚುನಾವಣೆ: ನಾಮಪತ್ರ ಭರಾಟೆ

ಅಧಿಕಾರಕ್ಕೆ ನಾಲ್ಕು ಬಣಗಳ ಸೆಣಸಾಣ ಸಾಧ್ಯತೆ

ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಸಂಸ್ಥೆ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ನಾಲ್ಕು ಬಣಗಳ ನಡುವೆ ಅಧಿಕಾರಕ್ಕೆ ಪೈಪೋಟಿ ನಡೆಯಲಿದೆ.


ಪ್ರಸಕ್ತ ಅಧಿಕಾರದಲ್ಲಿರುವ ಮಹ್ಮದ ಯೂಸೂಫ್ ಸವಣೂರ, ಅಲ್ತಾಫ್ ಕಿತ್ತೂರ ಗುಂಪು ಮತ್ತೆ ಕಣಕ್ಕಿಳಿಯಲಿದ್ದು, ಅಲ್ಲದೇ ಮಾಜಿ ಸಚಿವ ಎ.ಎಂ ಹಿಂಡಸಗೇರಿ ಬಣವೂ ಎಲ್ಲ ಸ್ಥಾನಗಳಿಗೆ ಸ್ಪರ್ಧೆಗಿಳಿಯಲಿದೆ. ಇನ್ನೊಂದೆಡೆ ದಿ. ಜಬ್ಬಾರಖಾನ ಹೊನ್ನಳಿ ನೇತೃತ್ವದ ಬಣದ ನೇತೃತ್ವವನ್ನು ಎನ್.ಡಿ.ಗದಗಕರ ವಹಿಸಲಿದ್ದು, ಅಲ್ಲದೇ ಇನ್ನೋರ್ವ ಹಿರಿಯ ಮುಖಂಡ ಮಜಹರ ಖಾನ ಮತ್ತು ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಬಣವೂ ಕಣಕ್ಕಿಳಿಯಲಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಇಂದು ಎಲ್ಲ ಬಣಗಳು ಹಳೇಹುಬ್ಬಳ್ಳಿಯ ಫತೇಶಾವಲಿ ದರ್ಗಾದಿಂದ ಮೆರವಣಿಗೆಯಲ್ಲಿ ಘಂಟಿಕೇರಿಯ ನೆಹರೂ ಕಾಲೇಜಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದು, ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿ.೭ರಂದು ೩ ಗಂಟೆಯೊಳಗೆ ನಾಮಪತ್ರ ಹಿಂಪಡೆಯಬಹುದಾಗಿದ್ದು ಅಂದೇ ಚಿಹ್ನೆ ವಿತರಣೆಯಾಗಲಿದೆ.


ಅಧ್ಯಕ್ಷ ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ, ಗೌರವ ಸಹ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ 52 ಜನರ ಸಮಿತಿ, ಆಸ್ಪತ್ರೆ ಮಂಡಳಿ ಇವುಗಳಿಗೆ ನಾಲ್ಕು ತಂಡಗಳು ಸೆಣಸಾಣ ನಡೆಸಲಿದ್ದು ಈ ಬಾರಿಯ ಚುನಾವಣೆ ಹಿಂದೆಂದಿಗಿಂತ ರೋಚಕವಾಗುವ ಲಕ್ಷಣಗಳಿವೆ.

ಮಹಿಳೆಯರ ಪ್ರತಿಭಟನೆ

ಇನ್ನೊಂದೆಡೆ ನೆಹರು ಕಾಲೇಜು ಎದುರು ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ಹಳೆಹುಬ್ಬಳ್ಳಿ ಘಟನೆ ಸಂಬಂಧದಲ್ಲಿ ಬಂಧಿತರಾಗಿರುವ ಮುಗ್ದ ಯುವಕರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

administrator

Related Articles

Leave a Reply

Your email address will not be published. Required fields are marked *