ಹುಬ್ಬಳ್ಳಿ-ಧಾರವಾಡ ಸುದ್ದಿ

ಅವಳಿನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

ಪಾಲಿಕೆ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿಕೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಪಾಲಿಕೆಯಾಗಿದ್ದು, ಸ್ವಚ್ಛತೆಗೆ ಆದ್ಯತೆ ಕೊಡಬೇಕು ಅಲ್ಲದೇ ಪಾಲಿಕೆ ಸದಸ್ಯರು, ಅಧಿಕಾರಿಗಳು ತಮ್ಮ ಹೊಣೆ ಎಂದು ನಿರ್ವಹಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಧಾರವಾಡದಲ್ಲಿಂದು ನಡೆದ ಪಾಲಿಕೆ ಮಾಸಿಕ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಂಡ ಅವರು ಅಭಿಯಾನದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಜನರೂ ಕೂಡ ಆಸಕ್ತಿ ತೋರಿಸಬೇಕು.ಮುಂಬರುವ ದಿನಗಳಲ್ಲಿ ಸ್ವಚ್ಛತೆಯಲ್ಲಿ ೧೦ ನೇ ರ್‍ಯಾಂಕ್‌ನ ಒಳಗೆ ಬರುವ ಗುರಿ ಹಾಕಿಕೊಳ್ಳಬೇಕು.ಈಗಾಗಲೇ ಕೇಂದ್ರ, ರಾಜ್ಯ ಸಚಿವರು, ಶಾಸಕರ ಜೊತೆ ಚರ್ಚಿಸಲಾಗಿದೆ. ಸೊಲ್ಲಾಪುರದ ಖಾಸಗಿ ಸಂಸ್ಥೆಯ ಜೊತೆ ಸೇರಿ ಪ್ರಾಯೋಗಿಕ ಅಭಿಯಾನ ಹಮ್ಮಿಕೊಳ್ಳಗಾಗಿದೆ ಎಂದರು.


ಮೇಯರ್ ವೀಣಾ ಬರದ್ವಾಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳಿಗ್ಗೆ ಸಭೆಯ ಆರಂಭಕ್ಕೆ ಬಿಜೆಪಿ ಸದಸ್ಯ ತಿಪ್ಪಣ್ಣ ಮಜ್ಜಗಿ ಪ್ರತಿ ವರ್ಷ ಕಸ ವಿಲೇವಾರಿಗೆ ಹಣ ವಿನಿಯೋಗಿಸಲಾಗುತ್ತಿದೆ. ಇರುವ ವಾಹನಗಳು ಎಷ್ಟು ಮನೆ ತಲುಪಿವೆ ಎಂದು ಪ್ರಶ್ನಿಸಿದರಲ್ಲದೇ ವಾಸ್ತವವಾಗಿ ಆರೋಗ್ಯ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರಿಗೆ ಸೂಕ್ತ ಸೇವೆ ಕೊಡಬೇಕು.


ಕೇಂದ್ರ ಸರಕಾರದಿಂದ ಕೂಡ ಹಣ ಬರುತ್ತಿದೆ. ಅದನ್ನು ಸಮರ್ಪವಾಗಿ ಬಳಸಿಕೊಳ್ಳಬೇಕು ಅವಳಿ ನಗರದಲ್ಲಿನ ಮೂರು ಲಕ್ಷ ಮನೆಗಳ ಪೈಕಿ ಇನ್ನೂ ಒಂದು ಲಕ್ಷ ಮನೆಯನ್ನೂ ತಲುಪಿಲ್ಲ ಎಂದು ಆಕ್ಷೇಪಿಸಿದರು. ಅಧಿಕಾರಿ ಮಲ್ಲಿಕಾರ್ಜುನ ಎಂಬುವರು ಮಾತನಾಡಿ, ಒಟ್ಟು 323 ವಾಹನಗಳ ಅವಶ್ಯಕತೆ ಇದೆ. ಸದ್ಯದಲ್ಲೇ ಇನ್ನೂ 80 ವಾಹನಗಳನ್ನು ಖರೀದಿ ಮಾಡಲು ಕ್ರಮವಿಡಲಾಗಿದೆ.ಕೆಲವು ದುರಸ್ತಿ ಆಗಬೇಕಿದೆ ಎಂಬ ಮಾಹಿತಿ ನೀಡಿದರು.


ಇ-ತ್ಯಾಜ್ಯ ವಿಲೇವಾರಿ ಕುರಿತು ಮತ್ತೆ ಪ್ರಶ್ನಿಸಿದ ಮಜ್ಜಗಿ ಆದ್ದರಿಂದ ಕಸ ಎತ್ತುವಳಿ, ವಿಲೇವಾರಿ ಬಗ್ಗೆ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ.
ಕಟ್ಟಡ ಪರವಾಗಿ, ಮುಕ್ತಾಯ ಪ್ರಮಾಣ ಪತ್ರ ಕೊಡುವಾಗ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು. ವೀರಣ್ಣ ಸವಡಿ ಕೂಡ ಮಾತನಾಡಿ, ಸ್ವಚ್ಛ ಭಾರತ ಮಿಶನ್ ಯೋಜನೆಯಡಿ ಬರುವ ಅನುದಾನದ ಸಮರ್ಪಕ ಬಳಕೆ ಆಗಬೇಕು. ಸೂಕ್ತ ನಿರ್ವಹಣೆ ಮಾಡಬೇಕು.ಕೋಟಿಗಟ್ಟಲೇ ಹಣ ವ್ಯರ್ಥವಾಗಲಿದೆ.ಸಿಬ್ಬಂದಿ ನೇಮಕ, ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ನಿಮ್ಮ ಕೆಳ ಹಂತದ ಅಧಿಕಾರಿಗಳನ್ನು ಬಳಸಿ ನಿರ್ವಹಣೆ ಮಾಡಿ ಎಂದು ಆಯುಕ್ತರನ್ನು ಆಗ್ರಹಿಸಿದರು.

ವಲಯ ಕಚೇರಿ- 7 ಕ್ಕೆ ಜೆಇಗಳ ಕೊರತೆ ಇದೆ. ಈ ಕುರಿತು ಗಮನಹರಿಸಿ ಎಂದು ಸದಸ್ಯ ಸೆಂಥಿಲ್ ಕುಮಾರ ಆಯುಕ್ತರನ್ನು ಆಗ್ರಹಿಸಿದರು. ಮಾರುಕಟ್ಟೆ, ಪ್ರಮುಖ ಬಡಾವಣೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಆಗಿಲ್ಲ. ವಿಶೇಷವಾಗಿ ಅವಳಿ ನಗರದ ಮಹಿಳೆಯರು ಪಾಲಿಕೆ ಬಗ್ಗೆ ಆಕ್ರೋಷ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿದೆ. ಈ ಕುರಿತು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲು ಈರೇಶ ಅಂಚಟಗೇರಿ ಆಗ್ರಹಿಸಿದರು.

administrator

Related Articles

Leave a Reply

Your email address will not be published. Required fields are marked *