ಹುಬ್ಬಳ್ಳಿ-ಧಾರವಾಡ ಸುದ್ದಿ
ನಕಲಿ ಬಂಗಾರ ವಂಚಕರ ಅಂದರ್: ೨೨.೫೦ ಲಕ್ಷ ರೂ ಜಪ್ತಿ

ನಕಲಿ ಬಂಗಾರ ವಂಚಕರ ಅಂದರ್: ೨೨.೫೦ ಲಕ್ಷ ರೂ ಜಪ್ತಿ

ಮುಂಡಗೋಡ: ಬಂಗಾರ ನೀಡುವುದಾಗಿ ನಂಬಿಸಿ ಉದ್ಯಮಿಯಿಂದ ಬಂಗಾರ ನೀಡದೇ ೨೨.೫೦ ಲಕ್ಷ ರೂ ದೋಚಿದ್ದ ಮೂವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿ ಅವರಿಂದ ೧೧.೯೯ ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿ ದ್ದಾರೆ
ಶಿವಮೊಗ್ಗ ಜಿಲ್ಲೆಯ ಹೊಸೂರ ಗ್ರಾಮದವರಾದ ವೀರೇಶ ಕೊರಚರ, ವೆಂಕಟೇಶ ಹೊಸೂರ ಹಾಗೂ ಶಿಕಾರಿಪೂರ ತಾಲೂಕಿನ ಮೇದಾರಗಲ್ಲಿಯ ವಿದ್ಯಾಧರ ಮೇದರ ಬಂಧಿತ ಆರೋಪಿಗಳಾಗಿದ್ದಾರೆ. ಉಳಿದ ಆರೋಪಿಗಳ ಶೋಧ ಕಾರ್ಯ ನಡೆದಿದೆ.
ಘಟನೆ ವಿವರ: ಜು. ೧೬ರಂದು ಚಿಕ್ಕೋಡಿ ತಾಲೂಕು ಗೇರಗಾಂವ ಗ್ರಾಮದ ಶಿವಗೌಡ ಪಾಟೀಲ ಉದ್ಯಮಿಗೆ ಹಳೆ ಬಂಗಾರ ಕೊಡುವುದಾಗಿ ನಂಬಿಸಿ ತಾಲೂಕಿನ ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯ ಹತ್ತಿರ ಆರೋಪಿಗಳು ಕರೆದಿದ್ದರು. ಇದನ್ನು ನಂಬಿ ೨೨.೫೦ ಲಕ್ಷ ರೂ. ಹಣದ ಚೀಲದೊಂದಿಗೆ ಶಿವಗೌಡ ಬಂದಿದ್ದ. ೫-೬ ಜನರ ಗುಂಪು ಬಂಗಾರ ಶಿವಗೌಡ ಕೈಯಿಂದ ಹೊಡೆದು ದೂಡಿ ಹಾಕಿ ಹಣದ ಚೀಲವನ್ನು ದೋಚಿ ಕೊಂಡು ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಡಿಎಸ್‌ಪಿ ರವಿ ನಾಯ್ಕ್ ನೇತೃತ್ವದಲ್ಲಿ ಮುಂಡಗೋಡ ಹಾಗೂ ಬನವಾಸಿ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚುಗಾರ ತಂಡದೊ0ದಿಗೆ ಶೋಧ ಕಾರ್ಯ ನಡೆಸಿದ್ದರು. ಆದರೆ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿದ್ದಿಲ್ಲಾ.
ನಂಬಿಸುತ್ತಿದ್ದು ಹೇಗೆ: ಫೇಸ್‌ಬುಕ್‌ನಿಂದ ಉದ್ಯಮಿಯ ಫೋನ್ ನಂಬರ ಪಡೆದು ಸಂಪರ್ಕಿಸಿ ಹೊಲದಲ್ಲಿ ಹಳೆ ಬಂಗಾರ ಸಿಕ್ಕಿದೆ ಅದನ್ನು ಅರ್ಧ ರೇಟಿಗೆ ಮಾರುತ್ತೇವೆ ಎಂದು ವಿಶ್ವಾಸಗಳಿಸಲು ಅಸಲಿ ಚಿನ್ನದ ತುಣಕನ್ನು ನೀಡಿ ನಂಬಿಸಿದ್ದರು. ಪ್ರಕರಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಮುಂಡಗೋಡ ಪೊಲೀಸರು ಶೋಧಕಾರ್ಯ ಮುಂದುವರೆಸಿ ಶನಿವಾರ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿಎಸ್‌ಪಿ ರವಿ ನಾಯ್ಕ್ ಮಾರ್ಗದರ್ಶನದಲ್ಲಿ ಪಿಐ ಪ್ರಭುಗೌಡ ಡಿ.ಕೆ. ನೇತೃತ್ವದಲ್ಲಿ ಪಿಎಸ್‌ಐಗಳಾದ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ, ರಾಜಕುಮಾರ ಬಿರಾದರ, ಕಸ್ತೂರಿ ಕಂಕೂರ ಹಾಗೂ ಸಿಬ್ಬಂದಿಗಳಾದ ಮಹ್ಮದಶಫೀ ಶೇಖ, ಶಿವರಾಜ ಎಸ್, ಮಂಜುನಾಥ ಬಿ, ವಿನೋದ ಕುಮಾರ, ಅಣ್ಣಪ್ಪ ಬುಡಗೇರ, ಅರುಣಕುಮಾರ, ಶರತ ದೇವಳಿ, ತಿರುಪತಿ ಚೌಡಣ್ಣವರ, ಧರ್ಮರಾಜ ನಾಯ್ಕ್, ಗಣಪತಿ ಹುನ್ನಳ್ಳಿ, ಸುರೇಶ ವಡ್ಡರ, ಜಟ್ಟೇಪ್ಪ ನಾಯ್ಕ್,ರಾಜೇಶ ನಾಯ್ಕ್, ಮಹೇಶ ಹತ್ತಳ್ಳಿ, ಮಹಾದೇವ, ಪ್ರಕಾಶ ಶ್ರೀಂಗೇರಿ, ಕಾರವಾರದ ಸಿಬ್ಬಂದಿ ಸುಧೀರ ಮಡಿವಾಳ ದಾಳಿ ನಡೆಸಿದ್ದರು.

administrator

Related Articles

Leave a Reply

Your email address will not be published. Required fields are marked *