ಹುಬ್ಬಳ್ಳಿ-ಧಾರವಾಡ ಸುದ್ದಿ

ವಿಕೆ ಬಾಸ್‌ಗೆ ಬಿಡುಗಡೆ ಭಾಗ್ಯ ಹಿಂಡಲಗಾ ಜೈಲಿಂದ ಹೊರಬಂದ ಮಾಜಿ ಸಚಿವ ಅಭಿಮಾನಿಗಳ ನೂಕುನುಗ್ಗಲು – ಪೊಲೀಸರ ಹರಸಾಹಸ

 

 


ಬೆಳಗಾವಿ: ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಇಲ್ಲಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದು, ಅಭಿಮಾನಿಗಳು, ಬೆಂಬಲಿಗರು ಸೇಬು ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಜಾಮೀನು ಸಿಕ್ಕರೂ ಎರಡು ದಿನಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕ ವಿನಯ್ ಕುಲಕರ್ಣಿ ಅವರನ್ನು ಅತ್ಯಂತ ಸಂಭ್ರಮದಿAದ ಸ್ವಾಗತಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ವಿನಯ ಪರ ಜಯಘೋಷ ಕೂಗಿ ದರು.
ಜೈಲಿನ ಮುಂದೆ ಹೂ ಹಾರ ತುರಾಯಿಗಳನ್ನು ಹಿಡಿದು ಜಮಾಯಿಸಿದ್ದ ಅಭಿಮಾನಿಗಳ ನೂಕು ನುಗ್ಗಲಿನ ಸರಿಪಡಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಅವರು ಒಂದು ಗಂಟೆ ಯಿಂದ ಜೈಲಿನ ಹೊರ ಭಾಗದಲ್ಲಿ ಕಾಯುತ್ತ ನಿಂತು ವಿನಯ ಹೊರ ಬರುತ್ತಿದ್ದಂತೆ ವಿನಯ ಅವರಿಗೆ ರಾಖಿ ಕಟ್ಟಿ ಅಣ್ಣನನ್ನು ಸ್ವಾಗತಿಸಿ ರಕ್ಷಾ ಬಂಧನ ಹಬ್ಬ ಆಚರಿಸಿದರು.
ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ಅಭಿಮಾನಿಗಳು ಬಂದಿದ್ದರು. ಸೇಬು ಹಾರ, ಗುಲಾಬಿ ಹಾರ ಹಾಕಿ ಸ್ವಾಗತಿಸಿದರು. ಹೆಗಲು ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದರು. ಅಭಿಮನ ತಾರಕಕ್ಕೆ ಏರಿತ್ತು. ಜನರು ಕೋವಿಡ್ ನಿಯಮ ಉಲ್ಲಂಘಿಸಿ ಜನ ಸೇರಿದ್ದರು. ಕೊರೊನಾ ಆತಂಕದ ಮಧ್ಯೆಯೂ ಜನ ಆಗಮಿಸಿದ್ದರು.
ಜಾಮೀನು ನೀಡಿದ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ ವಿನಯ ಕುಲಕರ್ಣಿ, ರೈತ ಕುಟುಂಬದಲ್ಲಿ ಹುಟ್ಟಿದ ನಾನು ವಿದ್ಯಾರ್ಥಿ ನಾಯಕನಾಗಿ ಬೆಳೆದು ರಾಜಕಾರಣದಲ್ಲಿ ಬೆಳೆದಿದ್ದೇನೆ. ಒಂಭತ್ತು ತಿಂಗಳು ಕಾಲ ನನಗೆ ಟಾಸ್ಕ್ ನೀಡಲಾಗಿತ್ತು. ಜೈಲಿನಲ್ಲಿ ಸಾಕಷ್ಟು ಓದಲು ಕಲಿತಿದ್ದೇನೆ. ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ.
ಸ0ಘಟನೆಗಳೇ ಬೇರೆ ನಾನೇ ಬೇರೆ. ನನ್ನ ಜೀವನವೇ ಬೇರೆ. ಎಲ್ಲ ಸಮಾಜದ ವರ್ಗದ ಜನ ನನ್ನ ಜೊತೆಗೆ ಇದ್ದಾರೆ. ಶ್ರೀಮಂತರೂ ಇದ್ದಾರೆ. ಸ್ಲಂ ನಲ್ಲಿರುವ ಜನರೂ ನನ್ನ ಜೊತೆಗೆ ಇದ್ದಾರೆ ಎಂದರು.

 

ಮು0ದೆ ಎಚ್ಚರಿಕೆಯ ಹೆಜ್ಷೆ ಇಡುವೆ
ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ
ಬೆಳಗಾವಿ: ಜೈಲಿಗೆ ಬಂದ ಮೇಲೆ ನನ್ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ನಾನು ಓದುವ ಹವ್ಯಾಸ ಬೆಳಸಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಹೇಳಿದರು.
ಬಿಡುಗಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯ ಕುತಂತ್ರದಿAದ ನಾನು ಜೈಲು ಸೇರಿದೆ ಎನ್ನುತ್ತಾ ಭಾವುಕ ರಾದರಲ್ಲದೇ ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿತ್ತು. ನಾನು ಜೈಲಿನಿಂದ ಹೊರಬರುತ್ತೇನೆಂದು ತಿಳಿದಿತ್ತು. ಜೈಲಿಗೆ ಬಂದಮೇಲೆ ನನ್ನಲ್ಲಿ ತುಂಬಾ ಬದಲಾವಣೆಯಾಗಿದೆ. ನಾನು ಓದುವ ಹವ್ಯಾಸ ಬೆಳಸಿಕೊಂಡಿದ್ದೆನೆ. ಇನ್ನು ಮುಂದೆ ನನ್ನ ರಾಜಕೀಯ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಡುತ್ತೇನೆ ಎಂದು ತಿಳಿಸಿದರು.
ಜಾಮೀನು ನೀಡಿದ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ ವಿನಯ ಕುಲಕರ್ಣಿ, ರೈತ ಕುಟುಂಬದಲ್ಲಿ ಹುಟ್ಟಿದ ನಾನು ವಿದ್ಯಾರ್ಥಿ ನಾಯಕನಾಗಿ ಬೆಳೆದು ರಾಜಕಾರಣದಲ್ಲಿ ಬೆಳೆದಿದ್ದೇನೆ. ಒಂಭತ್ತು ತಿಂಗಳು ಕಾಲ ನನಗೆ ಟಾಸ್ಕ್ ನೀಡಲಾಗಿತ್ತು. ಜೈಲಿನಲ್ಲಿ ಸಾಕಷ್ಟು ಓದಲು ಕಲಿತಿದ್ದೇನೆ. ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು.
ಸAಘಟನೆಗಳೇ ಬೇರೆ ನಾನೇ ಬೇರೆ. ನನ್ನ ಜೀವನವೇ ಬೇರೆ. ಎಲ್ಲ ಸಮಾಜದ ವರ್ಗದ ಜನ ನನ್ನ ಜೊತೆಗೆ ಇದ್ದಾರೆ. ಶ್ರೀಮಂತರೂ ಇದ್ದಾರೆ. ಸ್ಲಂ ನಲ್ಲಿರುವ ಜನರೂ ನನ್ನ ಜೊತೆಗೆ ಇದ್ದಾರೆ ಎಂದರು.

ನಿಯಮ ಉಲ್ಲಂಘಿಸಿದ 300ಕ್ಕೂ ಹೆಚ್ಚು ಜನರ ಮೇಲೆ ಕೇಸ್
ಬೆಳಗಾವಿ: ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಂಬಲಿಗರು, ಕಾಂಗ್ರೆಸ್ ಕಾರ್ಯ ಕರ್ತರು ವೀಕೆಂಡ್ ಕರ್ಪೂ್ಯ, ಕೋವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿನಯ್ ಕುಲಕರ್ಣಿ ಸೇರಿದಂತೆ 300 ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ್‌ನ ಸದಸ್ಯ ಯೊಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಎರಡನೇ ಜಾಮೀನು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು ವಿನಯ್ ಕುಲಕರ್ಣಿ ಅವರು ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಿಂಡಲಗಾ ಜೈಲಿನ ಬಳಿ ಮೂರು ಸಾವಿರಕ್ಕೂ ಹೆಚ್ಚು ಬೆಂಬಲಿಗರು ನೆರೆದಿದ್ದು, ಕೋವಿಡ್ ನಿಯಮ, ವೀಕೆಂಡ್ ಕರ್ಫೂ್ಯ ಉಲ್ಲಂಘಿಸಿ ತಮ್ಮ ನಾಯಕನ ಭರ್ಜರಿ ಮೆರವಣಿಗೆ ಮಾಡಿದ್ದಾರೆ.ಹೀಗಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ೩೦೦ ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

 

administrator

Related Articles

Leave a Reply

Your email address will not be published. Required fields are marked *